Ind vs Eng- ಇಂದು ಭಾರತ-ಇಂಗ್ಲೆಂಡ್ ವಿಶ್ವಕಪ್ ಅಭ್ಯಾಸ ಪಂದ್ಯ; ಆನ್​ಲೈನ್ ಸ್ಟ್ರೀಮಿಂಗ್ ಇತ್ಯಾದಿ ಡೀಟೇಲ್ಸ್

T20 World Cup 2021- India vs England Warm Up match: ಟಿ20 ವಿಶ್ವಕಪ್​ಗೆ ಮುನ್ನ ಭಾರತದ ಮೊದಲ ಅಭ್ಯಾಸ ಇಂಗ್ಲೆಂಡ್ ವಿರುದ್ಧ ಇದೆ. ಈ ಪಂದ್ಯ ನಡೆಯುವ ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ಎಲ್ಲಿ ಇತ್ಯಾದಿ ವಿವರ ಈ ಸುದ್ದಿಯಲ್ಲಿದೆ:

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

 • Share this:
  ದುಬೈ, ಅ. 18: ಭಾರತ ತಂಡ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ (India vs Pakistan match on Oct 24th) ವಿರುದ್ಧ ಅ. 24ರಂದು ಮೊದಲ ಪಂದ್ಯ ಆಡಲಿದೆ. ಅದಕ್ಕೆ ಪೂರ್ವಬಾವಿಯಾಗಿ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಇವತ್ತು ಮತ್ತು ಅ. 20ರಂದು ಈ ಪಂದ್ಯಗಳು ಇವೆ. ಇವತ್ತು ಇಂಗ್ಲೆಂಡ್ ವಿರುದ್ಧ ಭಾರತ ಪ್ರಾಕ್ಟೀಸ್ ಮ್ಯಾಚ್ (India vs England Practice Match) ​ನಲ್ಲಿ ಆಡುತ್ತಿದೆ. ಬುಧವಾರದಂದು ಆಸ್ಟ್ರೇಲಿಯಾ ಜೊತೆ ಅಭ್ಯಾಸ ನಡೆಯಲಿದೆ.

  ಭಾರತ ಮತ್ತು ಇಂಗ್ಲೆಂಡ್ ಸೇರಿದಂತೆ ಎಂಟು ತಂಡಗಳು ಟಿ20 ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಟಿ20 ವಿಶ್ವಕಪ್​ನಲ್ಲಿ ಸೂಪರ್-12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಎರಡೂ ತಂಡಗಳು ಬಲಿಷ್ಠವಾಗಿವೆ. ಅನೇಕ ಸ್ಟಾರ್ ಆಟಗಾರರನ್ನ ಈ ತಂಡಗಳು ಒಳಗೊಂಡಿವೆ. ಐಪಿಎಲ್​ನಲ್ಲಿ ಆಡಿದ ಕೆಲ ಇಂಗ್ಲೆಂಡ್ ಆಟಗಾರರ ಪೈಕಿ ಮೊಯೀನ್ ಅಲಿ ಮಾತ್ರ ಒಳ್ಳೆಯ ಫಾರ್ಮ್​ಗೆ ಬಂದಿದ್ದಾರೆ. ತಂಡದ ನಾಯಕ ಇಯಾನ್ ಮಾರ್ಗನ್ ಐಪಿಎಲ್​ವುದ್ದಕ್ಕೂ ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್​ನ ಸ್ಪಿನ್ ಬೌಲರ್ ಅದಿಲ್ ರಷೀದ್ ಅವರು ಈ ವಿಶ್ವಕಪ್​ನಲ್ಲಿ ಗೇಮ್ ಚೇಂಜರ್ ಆಗುವ ನಿರೀಕ್ಷೆ ಇದೆ.

  ಇನ್ನೊಂದೆಡೆ, ಭಾರತ ತಂಡದ ಬಹುತೇಕ ಆಟಗಾರರು ಐಪಿಎಲ್​ನಲ್ಲಿ ಫಾರ್ಮ್​ಗೆ ಬಂದಿದ್ಧಾರೆ. ಕೊನೆ ಗಳಿಗೆಯಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಅಮೋಘ ಪ್ರದರ್ಶನ ನೀಡಿ ಟಿ20 ವಿಶ್ವಕಪ್​ನಲ್ಲಿ ಆರ್ಭಟಿಸುವ ಸುಳಿವು ನೀಡಿದ್ಧಾರೆ. ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಲಯದಲ್ಲಿದ್ದಾರೆ. ಇದು ಭಾರತಕ್ಕೆ ಶುಭ ಸೂಚನೆ. ಆದರೆ, ಇವತ್ತು ನಡೆಯುವ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ಧಾರೆ ಕಾದು ನೋಡಬೇಕು.

  ಕಳೆದ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ನಾಕೌಟ್ ಹಂತ ತಲುಪಿದ್ದವು. ಭಾರತ ಸೆಮಿಫೈನಲ್ ತಲುಪಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತು. ಇಂಗ್ಲೆಂಡ್ ಫೈನಲ್​ವರೆಗೆ ಹೋಗಿ ಇದೇ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಪ್ಪಿತು. ಇನ್ನು, ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕೊನೆಯ ಬಾರಿ ಮುಖಾಮುಖಿಯಾಗಿದ್ದು 2014ರಲ್ಲಿ. ಆಗ ಭಾರತ 20 ರನ್​ಗಳಿಂದ ಗೆಲುವು ಪಡೆದಿತ್ತು.

  ಇದನ್ನೂ ಓದಿ: Hardik Pandya| ಕ್ರಿಕೆಟರ್​ ಆಗದಿದ್ದರೆ ನಾನು ಪೆಟ್ರೋಲ್​ ಪಂಪ್​ನಲ್ಲಿ ಕೆಲಸ ಮಾಡುತ್ತಿದ್ದೆ; ಬಾಲ್ಯದ ಕಷ್ಟಗಳನ್ನು ನೆನೆದ ಹಾರ್ದಿಕ್ ಪಾಂಡ್ಯ!

  ಐಸಿಸಿ ಟಿ20 ವಿಶ್ವಕಪ್ 2021ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಯಾವಾಗ ಪ್ರಾರಂಭ?
  ಅಕ್ಟೋಬರ್ 18, ಸೋಮವಾರದಂದು ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಮ್ಯಾಚ್ ಪ್ರಾರಂಭವಾಗುವ ನಿರೀಕ್ಷೆ ಇದೆ.

  ಭಾರತ-ಇಂಗ್ಲೆಂಡ್ ಟಿ20 ವಿಶ್ವಕಪ್ 2021 ಅಭ್ಯಾಸ ಪಂದ್ಯ ಎಲ್ಲಿ ಆಡಲಾಗುತ್ತಿದೆ?
  ದುಬೈನ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

  ಟಿ20 ವಿಶ್ವಕಪ್ 2021 ಭಾರತ ಮತ್ತು ಇಂಗ್ಲೆಂಡ್ ವಾರ್ಮಪ್ ಮ್ಯಾಚ್​ನ ಲೈವ್ ಸ್ಟ್ರೀಮಿಂಗ್ ಹೇಗೆ ವೀಕ್ಷಿಸುವುದು?
  ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯವನ್ನು ಡಿಸ್ನಿ+ಹಾಟ್​ಸ್ಟಾರ್ ಆ್ಯಪ್​ನಲ್ಲಿ ಮತ್ತು ಹಾಟ್​ಸ್ಟಾರ್ ವೆಬ್​ಸೈಟ್​ನಲ್ಲಿ ಸ್ಟ್ರೀಮಿಂಗ್ ಸೌಲಭ್ಯ ಇದೆ. ಆದರೆ, ಇದು ಉಚಿತ ಇರುವುದಿಲ್ಲ. ಅದರ ಸಬ್​ಸ್ಕ್ರಿಪ್ಷನ್​ನ ವಿವರ ಆ್ಯಪ್​ನಲ್ಲಿ ಅಥವಾ ವೆಬ್​ಸೈಟ್​ನಲ್ಲಿ ಲಭ್ಯ ಇರುತ್ತದೆ.

  ಐಸಿಸಿ ಟಿ20 ವಿಶ್ವಕಪ್ 2021, ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯವನ್ನು ಟಿವಿಯ ಯಾವ ಚಾನೆಲ್​ನಲ್ಲಿ ಪ್ರಸಾರ ಇರುತ್ತದೆ?
  ಭಾರತ-ಇಂಗ್ಲೆಂಡ್ ವಾರ್ಮಪ್ ಮ್ಯಾಚ್ ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್​ನಲ್ಲೂ ಇದನ್ನ ವೀಕ್ಷಿಸಹುದು. ಸ್ಟಾರ್ ಸ್ಪೋರ್ಟ್ಸ್ 1, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ನೇರ ಪ್ರಸಾರ ಇದೆ.

  ಇದನ್ನೂ ಓದಿ: T20 World Cup 2021| ಶಾರ್ಜಾ ದಿಂದ ಶೇಖ್ ಜಾಯೆದ್​ ವರೆಗೆ ವಿಶ್ವಕಪ್ ಪಂದ್ಯ ನಡೆಯಲಿರುವ ಎಲ್ಲಾ ಅಂಗಳದ ಮಾಹಿತಿ ಇಲ್ಲಿದೆ!

  ತಂಡಗಳು:

  ಇಂಗ್ಲೆಂಡ್ ತಂಡ: ಮೊಯೀನ್ ಅಲಿ, ಇಯಾನ್ ಮಾರ್ಗನ್, ಡೇವಿಡ್ ಮಲನ್, ಅದಿಲ್ ರಷೀದ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಜಾನಿ ಬೇರ್​​ಸ್ಟೋ, ಸ್ಯಾಮ್ ಬಿಲಿಂಗ್ಸ್, ಜೇಸನ್ ರಾಯ್, ಡೇವಿಡ್ ವಿಲಿ, ಜೋಸ್ ಬಟ್ಲರ್, ಮಾರ್ಕ್ ವುಡ್, ಲಿಯಾಮ್ ಲಿವಿಂಗ್​ಸ್ಟೋನ್, ಟೈಮಲ್ ಮಿಲ್ಸ್, ಟಾಮ್ ಕುರನ್.

  ಭಾರತ ತಂಡ: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಾಹುಲ್ ಚಾಹರ್, ವರುಣ್ ಚಕ್ರವರ್ತಿ.
  Published by:Vijayasarthy SN
  First published: