Bad Umpiring- ಅಂಪೈರ್ ಕಣ್ತಪ್ಪಿಂದ ಭಾರತ ಸೋತಿತಾ? ರಾಹುಲ್ ಔಟ್ ಅಲ್ಲವಾ; ನೆಟ್ಟಿಗರ ಆಕ್ರೋಶ

T20 World Cup 2021, India vs Pakistan- ಶಾಹೀನ್ ಅಫ್ರಿದಿ ತಮ್ಮ ಎರಡನೇ ಓವರ್ನ ಮೊದಲ ಎಸೆತದಲ್ಲಿ ಕೆಎಲ್ ರಾಹುಲ್ ಅವರ ಕ್ಲೀನ್ ಬೌಲ್ಡ್ ಮಾಡಿದ್ದರು. ಆದರೆ, ಅವರದ್ದು ನೋಬಾಲ್ ಆಗಿತ್ತು. ಇದನ್ನ ಅಂಪೈರ್ ಗಮನಿಸಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.

ಶಾಹೀನ್ ಅಫ್ರಿದಿಯಿಂದ ನೋಬಾಲ್ ಆಗಿರುವುದು

ಶಾಹೀನ್ ಅಫ್ರಿದಿಯಿಂದ ನೋಬಾಲ್ ಆಗಿರುವುದು

 • Share this:
  ದುಬೈ, ಅ. 25: ನಿನ್ನೆ ಪಾಕಿಸ್ತಾನದ ವಿರುದ್ಧ ಭಾರತ ಅತೀ ಹೀನಾಯವಾಗಿ ಸೋತಿತು. ಆಟದಲ್ಲಿ ಇದೆಲ್ಲಾ ಸಹಜ ಇರಬಹುದು. ಸೋಲಲು ಹಲವು ಕಾರಣಗಳಿರಬಹುದು. ವಾಸ್ತವವಾಗಿ, ಭಾರತದ ಹೀನಾಯ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಆರಂಭದಲ್ಲೇ ಬಿದ್ದ ಮೂರು ವಿಕೆಟ್. ಹಾಗೂ ಬೌಲಿಂಗ್​ನಲ್ಲಿ ಎಂದಿನ ಮೊನಚು ಇಲ್ಲದಿದ್ದದುದು ಇನ್ನೊಂದು ಕಾರಣ. ಹಾಗೂ ಮತ್ತೊಂದು ಪ್ರಮುಖ ಕಾರಣ ಪಿಚ್ ಎರಡನೇ ಅವಧಿಯಲ್ಲಿ ಬ್ಯಾಟಿಂಗ್​ಗೆ ಹೆಚ್ಚು ಅನುಕೂಲಕರವಾಗಿದ್ದು. ಇದರಲ್ಲಿ ಮೊದಲ ಪ್ರಮುಖ ಕಾರಣ ಭಾರತ ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡಿದ್ದು.

  ಪಾಕಿಸ್ತಾನದ ಚೀತಾ ಶಾಹೀನ್ ಅಫ್ರಿದಿ ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಕಿತ್ತರು. ಅದ್ಭುತ ಯಾರ್ಕರ್ ಎಸೆತಕ್ಕೆ ರೋಹಿತ್ ಬಳಿ ಉತ್ತರ ಇರಲಿಲ್ಲ. ಇನ್ನಿಂಗ್ಸ್​ನ ಮೂರನೇ ಓವರ್ ಹಾಗು ಶಾಹೀನ್ ಅಫ್ರಿದಿಯ ಎರಡನೇ ಓವರ್​ನ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆದರು. ಅದು ಅದ್ಭುತವಾದ ಇನ್​ಸ್ವಿಂಗ್ ಎಸೆತವಾಗಿತ್ತು. ಎಂಥ ಬ್ಯಾಟುಗಾರರಿಗಾದರೂ ಅದನ್ನ ಎದುರಿಸುವುದು ಸುಲಭವಿರಲಿಲ್ಲ. ಈ ಎರಡು ವಿಕೆಟ್ ಟೀಮ್ ಇಂಡಿಯಾದ ಬುಡವನ್ನ ಅಲುಗಾಡಿಸಿತು. ಅಮೋಘ ಫಾರ್ಮ್​ನಲ್ಲಿದ್ದ ಇಬ್ಬರು ಬ್ಯಾಟರ್ಸ್ ಬಹಳ ಬೇಗನೇ ನಿರ್ಗಮಿಸಿದ್ದು ಭಾರತದ ಸೋಲಿಗೆ ಮುನ್ನುಡಿ ಬರೆದಂತಿತ್ತು.

  ನೋಬಾಲ್ ಆದರೂ ಕೆ ಎಲ್ ರಾಹುಲ್ ಔಟ್:

  ಆದರೆ, ಒಳ್ಳೆಯ ಲಯದಲ್ಲಿದ್ದಂತಿದ್ದ ಕೆಎಲ್ ರಾಹುಲ್ ಅವರು ವಾಸ್ತವದಲ್ಲಿ ಔಟ್ ಆಗಿರಲಿಲ್ಲ. ಮೂರನೇ ಓವರ್​ನಲ್ಲಿ ಶಾಹೀನ್ ಅಫ್ರಿದಿ ಎಸೆದ ಆ ಚೆಂಡು ನೋಬಾಲ್ ಆಗಿತ್ತು. ಅಫ್ರಿದಿ ಮುಂದಿನ ಗೆರೆಯ ಆಚೆ ಕಾಲನ್ನ ಇರಿಸಿದ್ದು ಬಹಳ ಸ್ಪಷ್ಟವಾಗಿ ಗೋಚರಿಸಿತು. ಇದು ಅಂಪೈರ್ ಕಣ್ಣಿಗೆ ಯಾಕೆ ಬೀಳಲಿಲ್ಲ? ಮೂರನೇ ಅಂಪೈರ್ ಕೂಡ ಅಲರ್ಟ್ ಮಾಡಲಿಲ್ಲ. ಈ ವಿಚಾರ ಭಾರತದ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಹಳ ಚರ್ಚೆಗೆ ಗ್ರಾಸವಾಯಿತು. ಭಾರತಕ್ಕೆ ಅಂಪೈರಿಂಗ್​ನಿಂದ ಅನ್ಯಾಯವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: Shaheen Afridi- ಶಾಹೀನ್ ಮೊದಲ ಓವರ್ ತಂಬಾ ಡೇಂಜರ್ ಎಂದು ಇವರಂದದ್ದು ನಿಜ ಆಯ್ತು

  ರಾಹುಲ್ ಇದ್ದಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತಾ?

  ಕೆಎಲ್ ರಾಹುಲ್ ಅವರಿದ್ದಿದ್ದರೆ ವಿರಾಟ್ ಕೊಹ್ಲಿ ಜೊತೆ ಸೇರಿ ಭಾರತಕ್ಕೆ ರನ್ ಹೊಳೆ ಹರಿಸುವ ಎಲ್ಲಾ ಸಾಧ್ಯತೆ ಇತ್ತು. ಭಾರತದ ಇನ್ನಿಂಗ್ಸ್ 151 ರನ್ ಮೊತ್ತಕ್ಕೆ ಸೀಮಿತವಾಗಿರುತ್ತಿರಲಿಲ್ಲ. 170 ರನ್ ಗಡಿಯನ್ನಾದರೂ ದಾಟಬಹುದಿತ್ತು. ಪಾಕಿಸ್ತಾನ ವಿರುದ್ಧ ಗೆಲ್ಲಲು ಆಗದೇ ಹೋಗಿದ್ದರೂ ಕನಿಷ್ಠ ಹೀನಾಯ ಸೋಲಿಗೆ ಶರಣಾಗುವುದರಿಂದ ತಪ್ಪಿಸಿಕೊಳ್ಳಬಹುದಿತ್ತು. ಒಬ್ಬ ಅಂಪೈರ್​ನ ಕಣ್ತಪ್ಪಿನಿಂದ ಭಾರತಕ್ಕೆ ಎಷ್ಟು ಮುಳುವಾಯಿತು ನೋಡಿ.

  ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್​ಗಳಿಂದ ಭಾರತವನ್ನ ಸೋಲಿಸಿ ಮೆರೆಯಿತು. ಭಾರತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಮಾತ್ರ ಗಳಿಸಲು ಶಕ್ಯವಾಯಿತು. ವಿರಾಟ್ ಕೊಹ್ಲಿ 58 ರನ್ ಗಳಿಸಿದ್ದು ಹೈಲೈಟ್ ಆಯಿತು. ರಿಷಭ್ ಪಂತ್ ಕೂಡ ಚೆನ್ನಾಗಿ ಆಡಿದರು. ಆದರೆ, ದೊಡ್ಡ ಮೊತ್ತ ಸೇರಿಸಲು ಇದು ಸಾಕಾಗಲಿಲ್ಲ. ಪಾಕಿಸ್ತಾನದ ಓಪನರ್ಸ್ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ ಬಹಳ ಸಲೀಸಾಗಿ ಈ ಮೊತ್ತವನ್ನು ಚೇಸ್ ಮಾಡಿದರು.

  ಇದನ್ನೂ ಓದಿ: T20 World Cup- ವಿಶ್ವಕಪ್ ಇತಿಹಾಸದಲ್ಲೇ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಮೊದಲ ಗೆಲುವು

  ಪಾಕಿಸ್ತಾನ ದಾಖಲೆ;

  ಎರಡೂ ಮಾದರಿ ಕ್ರಿಕೆಟ್​ನ ವಿಶ್ವಕಪ್​ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕ ಮೊದಲ ಗೆಲುವು ಇದು. ಹಾಗೆಯೇ, ಭಾರತದ ವಿರುದ್ಧ ಪಾಕಿಸ್ತಾನ ಇದೇ ಮೊದಲ ಬಾರಿಗೆ 10 ವಿಕೆಟ್ ಅಂತರದಿಂದ ಜಯಭೇರಿ ಭಾರಿಸಿದ್ದು. ಭಾರತಕ್ಕೆ 10 ವಿಕೆಟ್ ಸೋಲು ಉಂಟಾಗಿದ್ದೂ ಕೂಡ ಇದೇ ಮೊದಲು.
  Published by:Vijayasarthy SN
  First published: