T20 World Cup: ಐಸಿಸಿ ಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ: ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ವಿಶೇಷ ಸಭೆ

ಲೆಕ್ಕಾಚಾರವೊಂದರ ಪ್ರಕಾರ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯನ್ನು 2022ಕ್ಕೆ ಮುಂದೂಡಲ್ಪಡಲಿದೆ. ಮುಂದಿನ ವರ್ಷ ಭಾರತ ಟಿ-20 ವಿಶ್ವಕಪ್​ಗೆ ಆತಿಥ್ಯ ವಹಿಸಲಿದೆ ಎನ್ನಲಾಗಿದೆ.

news18-kannada
Updated:July 20, 2020, 9:08 AM IST
T20 World Cup: ಐಸಿಸಿ ಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ: ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ವಿಶೇಷ ಸಭೆ
ಐಸಿಸಿ ಟಿ-20 ವಿಶ್ವಕಪ್.
  • Share this:
ಕಳೆದ ಎರಡು ತಿಂಗಳಿಂದ ತೂಗುಯ್ಯಾಲೆಯಲ್ಲಿರುವ ಐಸಿಸಿ ಟಿ-20 ವಿಶ್ವಕಪ್​ ಬಗ್ಗೆ ಇಂದು (ಸೋಮವಾರ) ನಡೆಯುವ ಸಭೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಡಿಯೋ ಕಾನ್ಫೆರನ್ಸ್ ಮೂಲಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಇದು ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯಲಿದೆಯೇ ಅಥವಾ ಮುಂದುವರಿದೀತೇ, ಅಕಸ್ಮಾತ್‌ ಮುಂದೂಡಲ್ಪಟ್ಟರೆ ಈ ಅವಧಿಯಲ್ಲಿ ಐಪಿಎಲ್‌ ಪಂದ್ಯಾವಳಿಗೆ ಹಾದಿ ಸುಗಮಗೊಂಡೀತೇ ಎಂಬ ಕುತೂಹಲಕ್ಕೆಲ್ಲ ಪೂರ್ಣ ವಿರಾಮ ಬೀಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಅಕ್ಟೋಬರ್​ 18 ರಿಂದ ನವೆಂಬರ್​ 15ರವರೆಗೆ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆ ಮಾಡಲಾಗಿದೆ. ಆದರೆ, ಕೊರೋನಾ ಭೀತಿ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್​ ಬೋರ್ಡ್​ ಟೂರ್ನಿ ಆಯೋಜನೆ ಮಾಡೋದು ಕಷ್ಟ ಎಂದು ಹಿಂದೇಟು ಹಾಕುತ್ತಿದೆ. ಹೀಗಾಗಿ ಇಂದಿನ ಸಭೆಯ ಬಳಿಕ ಟೂರ್ನಿ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

Shahid Afridi: ಆತನಲ್ಲಿ ಏನೋ ಸಮಸ್ಯೆಯಿದೆ: ಗಂಭೀರ್​ನ್ನು ಮತ್ತೆ ಕೆಣಕಿದ ಅಫ್ರಿದಿ..!

ಲೆಕ್ಕಾಚಾರವೊಂದರ ಪ್ರಕಾರ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಯನ್ನು 2022ಕ್ಕೆ ಮುಂದೂಡಲ್ಪಡಲಿದೆ. ಮುಂದಿನ ವರ್ಷ ಭಾರತ ಟಿ-20 ವಿಶ್ವಕಪ್​ಗೆ ಆತಿಥ್ಯ ವಹಿಸಲಿದೆ ಎನ್ನಲಾಗಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್‌ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.

ಈ ನಡುವೆ ವಿಶ್ವದಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚುತ್ತಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ ನಡೆಸಲು ಸಾಧ್ಯ ಎಂಬುದನ್ನು ಈಗಾಗಲೇ ಇಂಗ್ಲೆಂಡ್‌ ತೋರಿಸಿಕೊಟ್ಟಿದೆ. ಇದು ಆಸ್ಟ್ರೇಲಿಯಕ್ಕೆ ಸ್ಫೂರ್ತಿ ಆಗಲೂಬಹುದು. ಅಲ್ಲದೇ ಆಸೀಸ್‌ ತಂಡ ಕೂಡ ಸೀಮಿತ ಓವರ್‌ಗಳ ಸರಣಿಗಾಗಿ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

ಸತತ 3 ಬೌಂಡರಿ ಬಾರಿಸಿದ ಬಳಿಕ ದ್ರಾವಿಡ್ ವರ್ತಿಸಿದ ರೀತಿ ಇದೆಯಲ್ಲಾ..! ವಿಂಡೀಸ್ ಬೌಲರ್ ಬಿಚ್ಚಿಟ್ಟ ಸತ್ಯ
ಇನ್ನೂ ಈ ವರ್ಷ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯನ್ನು ಈಗಾಗಲೆ ಮುಂದೂಡಲಾಗಿದೆ. ಟಿ-20 ವಿಶ್ವಕಪ್​ ಮುಂದೂಡುವ ಬಗ್ಗೆ ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಂಡ ಮೇಲೆ ನಾವು ನಮ್ಮ ಯೋಜನೆಯಂತೆ ನಡೆಯಲು ಸಾಧ್ಯವಾಗಲಿದೆ. ಮೆಗಾ ಇವೆಂಟ್​ ಆಯೋಜಿಸಲು ತಾನು ಆಸಕ್ತಿ ಹೊಂದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದ ನಂತರವೂ ಐಸಿಸಿ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published by: Vinay Bhat
First published: July 20, 2020, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading