Hardik Pandya: ಹಾರ್ದಿಕ್ ಪಾಂಡ್ಯ ಈಗಲೂ ಗೇಮ್ ಚೇಂಜರ್; ಅವರ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆ

T20 World Cup- ಹಾರ್ದಿಕ್ ಪಾಂಡ್ಯ ಭಾರತಕ್ಕೆ ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿದ್ಧಾರೆ. ಆದರೆ, ಏಳನೇ ಕ್ರಮಾಂಕದಲ್ಲಿ ಅವರು ಯಶಸ್ಸು ಕಂಡಿದ್ದು ಕಡಿಮೆ. ಐದನೇ ಕ್ರಮಾಂಕದಲ್ಲಿ ಇವರು ಹೆಚ್ಚು ಮಿಂಚಿರುವುದು ಅಂಕಿ-ಅಂಶದಿಂದ ಗೊತ್ತಾಗುತ್ತದೆ.

ವಿರಾಟ್ ಕೊಹ್ಲಿ ಜೊತೆ ಹಾರ್ದಿಕ್ ಪಾಂಡ್ಯ

ವಿರಾಟ್ ಕೊಹ್ಲಿ ಜೊತೆ ಹಾರ್ದಿಕ್ ಪಾಂಡ್ಯ

 • Share this:
  ದುಬೈ: ಭಾರತ ತಂಡವು ದೊಡ್ಡ ಮೊತ್ತದ ರನ್ ಸವಾಲನ್ನು ಬೆನ್ನಟ್ಟುವಾಗ ಕೊನೆಯ ಓವರ್‌ಗಳಲ್ಲಿ ಅದೆಷ್ಟೇ ರನ್ ಗಳಿಸಿದ್ದರೂ ಸಹ ಸ್ಪೋಟಕ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕ್ರೀಸ್ ನಲ್ಲಿದ್ದರೆ ಅಭಿಮಾನಿಗಳಿಗೆ ಮತ್ತು ಭಾರತ ತಂಡಕ್ಕೆ ಒಂದು ನೆಮ್ಮದಿ. ಆದರೆ ಟಿ20 ಕ್ರಿಕೆಟ್ ಮತ್ತು ಟಿ20 ವಿಶ್ವಕಪ್​ನಲ್ಲಿ ಅವರ ಇತ್ತೀಚಿನ ಫಾರ್ಮ್ ನೋಡಿದರೆ ಏಕೆ ಇವರನ್ನು ಬೇರೆ ಆಟಗಾರರ ಬದಲಿಗೆ ಆಯ್ಕೆ ಮಾಡುತ್ತಿದ್ದಾರೆ ಎಂದು ನಿಮಗೆ ಅನ್ನಿಸಿರಬಹುದು, ಆದರೆ ಇವರು ಗೇಮ್ ಚೇಂಜರ್ ಎನ್ನುವುದಂತೂ ನಿಜವಾದ ಸಂಗತಿ.

  ಏಳನೇ ಕ್ರಮಾಂಕ ಹಾರ್ದಿಕ್​ಗೆ ಸೂಕ್ತವಲ್ಲವಾ?: ಆದರೆ ಕಳೆದ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವ T20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದೊಂದಿಗೆ ನಡೆದ ಪಂದ್ಯದಲ್ಲಿ ಹಾರ್ದಿಕ್ ಅವರನ್ನು 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಇವರು ಈ ಕ್ರಮಾಂಕದಲ್ಲಿ ಆಡಿದ ಹಿಂದಿನ 11 ಪಂದ್ಯಗಳಲ್ಲಿ ಕೇವಲ 107 ರನ್ ಸೇರಿಸಿದ್ದಾರೆ.

  ಐದನೇ ಕ್ರಮಾಂಕದಲ್ಲಿ ಯಶಸ್ಸು: ಅದೇ ಇವರು 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೋದ ಕಳೆದ 10 ಪಂದ್ಯಗಳಲ್ಲಿ 180 ರನ್ ಬಾರಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಬರೋಡಾ ಆಟಗಾರ ಪಾಕಿಸ್ತಾನದ ವಿರುದ್ಧ ಕೇವಲ 11 ರನ್ ಭಾರಿಸಿ, ವೇಗದ ಬೌಲರ್ ಹರಿಸ್ ರೌಫ್‌ಗೆ ವಿಕೆಟ್ ಒಪ್ಪಿಸಿದರು.

  ಹಾರ್ದಿಕ್​ಗೆ ಮತ್ತೆ ಗಾಯ? 

  ಪಂದ್ಯದಲ್ಲಿ ಪಾಕಿಸ್ತಾನದ ಎಡಗೈ ವೇಗದ ಬೌಲರ್ ಆದ ಶಾಹೀನ್ ಶಾ ಅಫ್ರಿದಿ ಅವರ ನಿಧಾನಗತಿಯ ಬೌನ್ಸರ್ ಹಾರ್ದಿಕ್ ಅವರ ಬಲ ಭುಜಕ್ಕೆ ಬಡಿದಿದೆ ಎಂದು ತಿಳಿದುಬಂದಿದೆ. ಗಾಯದ ತೀವ್ರತೆಯ ಬಗ್ಗೆ ಬುಧವಾರದವರೆಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ ಮತ್ತು ಈ ಗಾಯದಿಂದ ಚೇತರಿಸಿಕೊಳ್ಳಲು ಹಾರ್ದಿಕ್ ಅವರಿಗೆ ಬಹಳ ಸಮಯ ಬೇಕಾಗಬಹುದು ಎಂದು ತೋರುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರವೇ ಅವರನ್ನು ಸ್ಕ್ಯಾನ್ ಮಾಡಿಸಿಕೊಳ್ಳಲು ಕಳುಹಿಸಲಾಗಿತ್ತು.

  ಇದನ್ನೂ ಓದಿ: Saqlain Mushtaq- ಭಾರತ-ಪಾಕ್ ಫೈನಲ್ ಆಗಬೇಕು ಎಂದು ಪಾಕ್ ಕೋಚ್ ಹೇಳಿದ್ದು ಈ ಕಾರಣಕ್ಕೆ

  ಆರನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ: ನಾಯಕ ವಿರಾಟ್ ಕೊಹ್ಲಿ ಪ್ರಕಾರ, ಹಾರ್ದಿಕ್ ಅವರು 6 ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಬಲ್ಲರು ಮತ್ತು ಕಳೆದ ವರ್ಷ ಡಿಸೆಂಬರ್​ನಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ 22 ಎಸೆತಗಳಲ್ಲಿ 42 ರನ್ ಭಾರಿಸಿದ್ದರು. ಆಸ್ಟ್ರೇಲಿಯಾ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಇಂಥ ಆಟ ಆಡುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದರು.

  ಸೆಪ್ಟೆಂಬರ್ ನಲ್ಲಿ ಐಸಿಸಿ ವಿಶ್ವ T20 ಗೆ ಭಾರತ ತಂಡವನ್ನು ಘೋಷಿಸಿದಾಗ, ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಅವರು ಹಾರ್ದಿಕ್ ಪ್ರತಿ ಪಂದ್ಯದಲ್ಲೂ ನಾಲ್ಕು ಓವರ್ ಗಳನ್ನು ಬೌಲ್ ಮಾಡುವಷ್ಟು ಫಿಟ್ ಆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಪಾಕಿಸ್ತಾನದ ವಿರುದ್ಧ ಅವರು ಬೌಲಿಂಗ್ ಮಾಡಲಿಲ್ಲ.

  ಈ ಹಿಂದೆ ಸಹ ನಡೆದ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಮಹೇಲಾ ಜಯವರ್ಧನೆ ಅವರು ಹಾರ್ದಿಕ್ ಕೈಯಿಂದ ಬೌಲ್ ಮಾಡಿಸುವುದಿಲ್ಲ ಎಂದು ಹೇಳಿದ್ದರು. ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಹಾರ್ದಿಕ್ ಒಂದು ಓವರ್ ಸಹ ಬೌಲ್ ಮಾಡಲಿಲ್ಲ.

  ಇದನ್ನೂ ಓದಿ: T20 World Cup- ಗೆಲುವಿನ ಲಯಕ್ಕೆ ಮರಳಲು ಭಾರತ ಏನು ಮಾಡಬೇಕು? ಇಲ್ಲಿವೆ ತಜ್ಞರ ಸಲಹೆಗಳು

  ಹಾರ್ದಿಕ್ ಆಡಿದ ಹೆಚ್ಚಿನ ಟಿ20 ಪಂದ್ಯಗಳಲ್ಲಿ ಭಾರತಕ್ಕೆ ಜಯ:

  ಜನವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು T20 ಗೆ ಪದಾರ್ಪಣೆ ಮಾಡಿದ ನಂತರ ಆಡಿದ ಸುಮಾರು 50 ಪಂದ್ಯಗಳಲ್ಲಿ 19.04 ಸರಾಸರಿಯೊಂದಿಗೆ ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ ಮಾತ್ರ 145.16 ಆಗಿದೆ ಮತ್ತು ಅವರು ಆಡಿದ 50 ಪಂದ್ಯಗಳಲ್ಲಿ ಭಾರತ ತಂಡವು 35 ಪಂದ್ಯಗಳಲ್ಲಿ ಜಯ ಸಾಧಿಸಿದೆ.

  ಹಾರ್ದಿಕ್‌ಗೆ ಏಕೆ ಇಷ್ಟೊಂದು ಆದ್ಯತೆ ನೀಡಲಾಗುತ್ತಿದೆ?

  ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಚೆಂಡನ್ನು ಮೈದಾನದ ಎಲ್ಲಾ ಭಾಗಗಳಿಗೂ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅವರನ್ನು ಗೇಮ್ ಚೇಂಜರ್ ಎಂದು ಪರಿಗಣಿಸಲಾಗುತ್ತದೆ. ಅವರು ಇಲ್ಲಿಯವರೆಗೆ 341 ಎಸೆತಗಳಲ್ಲಿ 495 ರನ್ ಗಳಿಸಿದ್ದಾರೆ.

  ಮೂರು ವರ್ಷಗಳ ಹಿಂದೆ ಅವರು ಗಾಯದ ಸಮಸ್ಯೆಯಿಂದ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ವಿರಾಟ್ ಮತ್ತು ರೋಹಿತ್ ಶರ್ಮಾ ಇವರ ಮೇಲೆ ವಿಶ್ವಾಸ ತೋರಿಸಿದ್ದರು. ಈಗ ನಡೆಯುತ್ತಿರುವಂತಹ ದೊಡ್ಡ ಸರಣಿಯಲ್ಲಿ ಹಾರ್ದಿಕ್ ತಮ್ಮ ಬ್ಯಾಟಿಂಗ್ ಚಮತ್ಕಾರ ತೋರಿಸುತ್ತಾರೆ ಎಂದು ವಿರಾಟ್ ಬಲವಾಗಿ ನಂಬಿದ್ದಾರೆ.

  (ಭಾಷಾಂತರ ನೆರವು ಏಜೆನ್ಸಿ)
  Published by:Vijayasarthy SN
  First published: