T20 World Cup: ಗ್ರೂಪ್ ಬಿ- ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಿಎನ್​ಜಿ, ಓಮನ್ ತಂಡಗಳ ಡೀಟೇಲ್ಸ್, Rankings

Group B teams of T20 World Cup 2021- ಟಿ20 ವಿಶ್ವಕಪ್ ಲೀಗ್ ಹಂತದ ಮೊದಲ ಸುತ್ತಿನಲ್ಲಿ ಎಂಟು ತಂಡಗಳಿವೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ವಿಭಾಗಿಸಲಾಗಿದ್ದು ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್ ತಂಡಗಳಿವೆ.

ಬಾಂಗ್ಲಾದೇಶ ತಂಡ.

ಬಾಂಗ್ಲಾದೇಶ ತಂಡ.

  • Share this:
    ದುಬೈ: ದುಬೈ: 2021ರ ಟಿ20 ವಿಶ್ವಕಪ್ ಟೂರ್ನಿ ಯುಎಇ ಮತ್ತು ಓಮನ್ ದೇಶಗಳಲ್ಲಿ ನಡೆಯುತ್ತಿದೆ. ಒಟ್ಟು 16 ತಂಡಗಳು ಈ ವಿಶ್ವಕಪ್​ನಲ್ಲಿ ಪಾಲ್ಗೊಂಡಿವೆ. ನಿಗದಿತ ದಿನಾಂಕದಂದು ಟಿ20 ವಿಶ್ವ ರ್ಯಾಂಕಿಂಗ್​ನಲ್ಲಿ ಮೊದಲ ಎಂಟು ಸ್ಥಾನ ಗಳಿಸಿದ್ದ ತಂಡಗಳನ್ನ ಸೂಪರ್-12 ಹಂತಕ್ಕೆ ನೇರವಾಗಿ ಪ್ರವೇಶ ಕೊಡಲಾಗಿದೆ. ಟಾಪ್-8 ನಲ್ಲಿ ಇಲ್ಲದ ಶ್ರೀಲಂಕಾ, ಬಾಂಗ್ಲಾದೇಶ ಸೇರಿ ಎಂಟು ತಂಡಗಳಿಗೆ ಪ್ರತ್ಯೇಕವಾಗಿ ಮೊದಲ ಸುತ್ತಿನಲ್ಲಿ ಗ್ರೂಪ್ ಹಂತದ ಪಂದ್ಯಗಳನ್ನ ಆಡಿಸಲಾಗುತ್ತಿದೆ. ಈ ಎಂಟು ತಂಡಗಳನ್ನ ಗ್ರೂಪ್ ಎ ಮತ್ತು ಗ್ರೂಪ್ ಬಿ ಆಗಿ ವರ್ಗೀಕರಿಸಲಾಗಿದೆ.

    ಗ್ರೂಪ್ ಎನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್​​ಲೆಂಡ್, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳಿವೆ. ಪ್ರತಿಯೊಂದು ತಂಡವೂ ತಂತಮ್ಮ ಗುಂಪಿನ ಇತರ ತಂಡಗಳ ಜೊತೆ ಒಂದೊಂದು ಪಂದ್ಯ ಆಡುತ್ತದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೂಪರ್-12 ಹಂತಕ್ಕೆ ತೇರ್ಗಡೆ ಆಗುತ್ತವೆ. ಅಂದರೆ ಎರಡು ಗುಂಪುಗಳಿಂದ ಒಟ್ಟು ನಾಲ್ಕು ತಂಡಗಳು ಮುಂದಿನ ಹಂತ ಪ್ರವೇಶಿಸುತ್ತವೆ.

    ಗ್ರೂಪ್ ಬಿ ತಂಡಗಳ World T20 Ranking:

    1) ಬಾಂಗ್ಲಾದೇಶ: 6

    2) ಸ್ಕಾಟ್ಲೆಂಡ್: 14

    3) ಪಪುವಾ ನ್ಯೂಗಿನಿಯಾ: 15

    4) ಓಮನ್: 18

    ಟಿ20 ವಿಶ್ವಕಪ್ 2021ರ ವೇಳಾಪಟ್ಟಿ ತಯಾರು ಮಾಡಿದ ಸಂದರ್ಭದಲ್ಲಿ ಇದ್ದ ವಿವಿಧ ತಂಡಗಳ ವಿಶ್ವ ಟಿ20 ರ್ಯಾಂಕಿಂಗ್ಸ್ ಪರಿಗಣಿಸಲಾಗಿದೆ. ಈಗ ತಂಡಗಳ ಶ್ರೇಯಾಂಕದಲ್ಲಿ ಬದಲಾವಣೆ ಆಗಿರಬಹುದು. ಬಾಂಗ್ಲಾದೇಶ ಟಾಪ್-8 ಪಟ್ಟಿಯಿಂದ ಹೊರಗೆ ಇತ್ತು. ಈಗ ಆರನೇ ಸ್ಥಾನಕ್ಕೆ ಏರಿದೆ. ಆದರೆ ನಿಗದಿಯಾದಂತೆ ಬಾಂಗ್ಲಾದೇಶ ಗ್ರೂಪ್ ಹಂತದಲ್ಲಿ ಪಾಲ್ಗೊಂಡು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುವುದು ಅನಿವಾರ್ಯವಾಗಿದೆ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    ಗ್ರೂಪ್ ಬಿ ತಂಡಗಳ ಆಟಗಾರರು:

    ಬಾಂಗ್ಲಾದೇಶ ತಂಡ: ಮಹಮದುಲ್ಲಾ (ನಾಯಕ), ಮಹೆದಿ ಹಸನ್, ಮೊಹಮ್ಮದ್ ನಯೀಮ್, ಲಿಟಾನ್ ದಾಸ್ (ವಿ.ಕೀ.), ಮುಷ್ಫಿಕುರ್ ರಹೀಮ್ (ವಿ.ಕೀ.), ನೂರುಲ್ ಹಸನ್ (ವಿ.ಕೀ.), ಶಮೀಮ್ ಹುಸೇನ್, ಸೌಮ್ಯ ಸರ್ಕಾರ್, ಶಾಕಿಬ್ ಅಲ್ ಹಸನ್, ಅಫೀಫ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಾಫಿಜುರ್ ರಹಮಾನ್, ನಸುಮ್ ಅಹ್ಮದ್, ಶೋರಿಫುಲ್ ಇಸ್ಲಾಮ್, ಟಸ್ಕಿನ್ ಅಹ್ಮದ್.

    ಸ್ಕಾಟ್ಲೆಂಡ್ ತಂಡ: ಕೈಲೆ ಕೋಟ್ಜರ್ (ನಾಯಕ), ರಿಚೀ ಬೆರಿಂಗ್ಟನ್ (ಉಪನಾಯಕ), ಡೈಲನ್ ಬಡ್ಜ್, ಮ್ಯಾಥ್ಯೂ ಕ್ರಾಸ್, ಜೋಶ್ ಡೇವೀ, ಅಲಸ್ಡೇರ್ ಇವಾನ್ಸ್, ಕ್ರಿಸ್ ಗ್ರೀವಸ್, ಹಮ್ಜಾ ತಾಹಿರ್, ಮೇಕೇಲ್ ಲೀಸ್ಕ್, ಕಾಲುಮ್ ಮೆಕ್​ಲಿಯೋಡ್, ಜಾರ್ಜ್ ಮುನ್ಸೀ, ಸಫ್ಯಾನ್ ಶರೀಫ್, ಕ್ರೆಗ್ ವಾಲೇಸ್, ಮಾರ್ಕ್ ವ್ಯಾಟ್, ಬ್ರಾಡ್ ವೀಲ್.

    ಓಮನ್ ತಂಡ: ಜೀಶನ್ ಮಕ್ಸೂದ್ (ನಾಯಕ), ಅಕಿಬ್ ಇಲ್ಯಾಸ್ (ಉಪನಾಯಕ), ಅಯಾನ್ ಖಾನ್, ಬಿಲಾಲ್ ಖಾನ್, ನೆಸ್ಟಾರ್ ಧಾಂಬಾ, ಫಯಾಜ್ ಬಟ್, ಜತೀಂದರ್ ಸಿಂಗ್, ಕಲೀಮುಲ್ಲಾ, ಖವರ್ ಅಲಿ, ಖುರ್ರಂ ನವಾಜ್, ಮೊಹಮ್ಮದ್ ನದೀಮ್, ನಸೀಮ್ ಖುಷಿ, ಕಶ್ಯಪ್ ಪ್ರಜಾಪತಿ, ಸಂದೀಪ್ ಗೌಡ್, ಸುಫ್ಯಾನ್ ಮೆಹಮೂದ್, ಸೂರಜ್ ಕುಮಾರ್.

    ಪಪುವಾ ನ್ಯೂಗಿನಿಯಾ ತಂಡ: ಅಸದ್ ವಾಲ (ನಾಯಕ), ಚಾರ್ಲ್ಸ್ ಅಮಿನಿ, ಸಿಮೋನ್ ಅಟಾಯ್, ಸೆಸೆ ಬಾವು, ಕಿಪ್ಲಿನ್ ಡೋರಿಗಾ, ಹಿರಿ ಹಿರಿ, ಜೇಸನ್ ಕಿಲಾ, ಕಬುವಾ ಮೋರಿಯಾ, ನೋಸೇನಾ ಪೋಕಾನ, ಡೇಮಿಯೆನ್ ರಾವು, ಲೆಗಾ ಸಿಯಾಕ, ಚಾಡ್ ಸೋಪರ್, ಗೌಡಿ ಟೋಕಾ, ಟೋನಿ ಉರಾ, ನಾರ್ಮನ್ ವಾನುವಾ.

    ಇದನ್ನೂ ಓದಿ: T20 World Cup: ಗ್ರೂಪ್ ಎ- ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್, ನಮೀಬಿಯಾ- ತಂಡ, Ranking ಇತ್ಯಾದಿ ವಿವರ

    ಗ್ರೂಪ್ ಬಿ ಪಂದ್ಯಗಳ ವೇಳಾಪಟ್ಟಿ ಮತ್ತು ಫಲಿತಾಂಶ:

    ಅ. 17: ಪಪುವಾ ನ್ಯೂಗಿನಿಯಾ vs ಓಮನ್, ಮಸ್ಕತ್​ನಲ್ಲಿ ನಡೆದ ಪಂದ್ಯದಲ್ಲಿ ಓಮನ್​ಗೆ 10 ವಿಕೆಟ್ ಜಯ

    ಅ. 17: ಸ್ಕಾಟ್ಲೆಂಡ್ vs ಬಾಂಗ್ಲಾದೇಶ್, ಮಸ್ಕಟ್​ನಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್​ಗೆ 6 ರನ್ ಜಯ.

    ಅ. 19: ಸ್ಕಾಟ್ಲೆಂಡ್ vs ಪಪುವಾ ನ್ಯೂಗಿನಿಯಾ, ಮಸ್ಕಟ್​ನಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್​ಗೆ 17 ರನ್ ಜಯ.

    ಅ. 19: ಬಾಂಗ್ಲಾದೇಶ vs ಓಮನ್, ಮಸ್ಕಟ್​ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 26 ರನ್ ಜಯ.

    ಅ. 21: ಬಾಂಗ್ಲಾದೇಶ vs ಪಪುವಾ ನ್ಯೂಗಿನಿಯಾ, ಮಸ್ಕಟ್​ನಲ್ಲಿ ಮಧ್ಯಾನ್ 3:30ಕ್ಕೆ ಪಂದ್ಯ.

    ಅ. 21: ಓಮನ್ vs ಸ್ಕಾಟ್ಲೆಂಡ್, ಮಸ್ಕಟ್​ನಲ್ಲಿ ಸಂಜೆ 7:30ಕ್ಕೆ ಪಂದ್ಯ.
    Published by:Vijayasarthy SN
    First published: