T20 World Cup: ಗ್ರೂಪ್ ಎ- ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್, ನಮೀಬಿಯಾ- ತಂಡ, Ranking ಇತ್ಯಾದಿ ವಿವರ

Sri Lanka, Netherlands, Ireland, Namibia teams- ಟಿ20 ವಿಶ್ವಕಪ್ ಲೀಗ್ ಹಂತದ ಮೊದಲ ಸುತ್ತಿನಲ್ಲಿ ಎಂಟು ತಂಡಗಳಿವೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂದು ವಿಭಾಗಿಸಲಾಗಿದ್ದು ಎ ಗುಂಪಿನಲ್ಲಿ ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್ ಮತ್ತು ನಮೀಬಿಯಾ ತಂಡಗಳಿವೆ.

ಶ್ರೀಲಂಕಾ ಕ್ರಿಕೆಟ್ ತಂಡ

ಶ್ರೀಲಂಕಾ ಕ್ರಿಕೆಟ್ ತಂಡ

 • Share this:
  ದುಬೈ: 2021ರ ಟಿ20 ವಿಶ್ವಕಪ್ ಟೂರ್ನಿ ಯುಎಇ ಮತ್ತು ಓಮನ್ ದೇಶಗಳಲ್ಲಿ ನಡೆಯುತ್ತಿದೆ. ಒಟ್ಟು 16 ತಂಡಗಳು ಈ ವಿಶ್ವಕಪ್​ನಲ್ಲಿ ಪಾಲ್ಗೊಂಡಿವೆ. ನಿಗದಿತ ದಿನಾಂಕದಂದು ಟಿ20 ವಿಶ್ವ ರ್ಯಾಂಕಿಂಗ್​ನಲ್ಲಿ ಮೊದಲ ಎಂಟು ಸ್ಥಾನ ಗಳಿಸಿದ್ದ ತಂಡಗಳನ್ನ ಸೂಪರ್-12 ಹಂತಕ್ಕೆ ನೇರವಾಗಿ ಪ್ರವೇಶ ಕೊಡಲಾಗಿದೆ. ಟಾಪ್-8 ನಲ್ಲಿ ಇಲ್ಲದ ಶ್ರೀಲಂಕಾ, ಬಾಂಗ್ಲಾದೇಶ ಸೇರಿ ಎಂಟು ತಂಡಗಳಿಗೆ ಪ್ರತ್ಯೇಕವಾಗಿ ಮೊದಲ ಸುತ್ತಿನಲ್ಲಿ ಗ್ರೂಪ್ ಹಂತದ ಪಂದ್ಯಗಳನ್ನ ಆಡಿಸಲಾಗುತ್ತಿದೆ. ಈ ಎಂಟು ತಂಡಗಳನ್ನ ಗ್ರೂಪ್ ಎ ಮತ್ತು ಗ್ರೂಪ್ ಬಿ ಆಗಿ ವರ್ಗೀಕರಿಸಲಾಗಿದೆ.

  ಗ್ರೂಪ್ ಎನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಇನ್ನೊಂದು ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್​​ಲೆಂಡ್, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳಿವೆ. ಪ್ರತಿಯೊಂದು ತಂಡವೂ ತಂತಮ್ಮ ಗುಂಪಿನ ಇತರ ತಂಡಗಳ ಜೊತೆ ಒಂದೊಂದು ಪಂದ್ಯ ಆಡುತ್ತದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಸೂಪರ್-12 ಹಂತಕ್ಕೆ ತೇರ್ಗಡೆ ಆಗುತ್ತವೆ. ಅಂದರೆ ಎರಡು ಗುಂಪುಗಳಿಂದ ಒಟ್ಟು ನಾಲ್ಕು ತಂಡಗಳು ಮುಂದಿನ ಹಂತ ಪ್ರವೇಶಿಸುತ್ತವೆ.

  ಐಸಿಸಿ ವಿಶ್ವ ಟಿ20 ರ್ಯಾಂಕಿಂಗ್ಸ್:

  ಶ್ರೀಲಂಕಾ: 10

  ಐರ್ಲೆಂಡ್: 12

  ನೆದರ್ಲೆಂಡ್ಸ್: 17

  ನಮೀಬಿಯಾ: 19

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಶ್ರೀಲಂಕಾ ತಂಡ: ದಸುನ್ ಶಣಕ (ನಾಯಕ), ಅವಿಷ್ಕಾ ಫರ್ನಾಂಡೋ, ಪಥುಮ್ ನಿಸಾಂಕ, ದಿನೇಶ್ ಚಾಂದಿಮಲ್ (ವಿ.ಕೀ), ಕುಸಾಲ್ ಪೆರೆರಾ (ವಿ.ಕೀ.), ಚರಿತ್ ಅಸಲಂಕ, ದುಷ್ಮಂತ ಚಮೀರಾ, ಅಕಿಲ ದನಂಜಯ, ವನಿಂದು ಹಸರಂಗ ಡಿಸಿಲ್ವ, ಧನಂಜಯ ಡಿಸಿಲ್ವ, ಬಿನುರಾ ಫರ್ನಾಂಡೋ, ಚಮಿಕ ಕರುಣಾರತ್ನೆ, ಭನುಕ ರಾಜಪಕ್ಸ, ಮಹೀಶ್ ತೀಕ್ಷಣ.

  ನೆದರ್​ಲೆಂಡ್ಸ್ ತಂಡ: ಪೀಟರ್ ಸೀಲಾರ್ (ನಾಯಕ), ಕಾಲಿನ್ ಅಕರ್​ಮಾನ್ (ಉಪನಾಯಕ), ಬ್ಯಾಸ್ ಡೀಲೀಡೆ, ಮ್ಯಾಕ್ಸ್ ಒಡೌಡ್, ಸ್ಟೀಫನ್ ಮೈಬುರ್ಗ್, ಸ್ಕಾಟ್ ಎಡ್ವರ್ಡ್ಸ್, ಬೆನ್ ಕೂಪರ್, ರಯಾನ್ ಟೆನ್ ಡಾಷ್ಕೆಟೆ, ರೋಲಫ್ ವ್ಯಾನ್ ಡರ್ ಮೆರ್ವೆ, ಫಿಲಿಪ್ ಬೋಸೆವೇನ್, ಬ್ರಾಂಡನ್ ಗ್ಲೋವರ್, ಫ್ರೆಡ್ ಕ್ಲಾಸನ್, ಲೋಗನ್ ವಾನ್ ಬೀಕ್, ಟಿಮ್ ವಾನ್ ಡರ್ ಗುಗ್ಟೆನ್, ಪೌಲ್ ವಾನ್ ಮೀಕೆರೆನ್.

  ಐರ್ಲೆಂಡ್ ತಂಡ: ಆಂಡೊ ಬಾಲ್ಬರ್ನೀ (ನಾಯಕ), ಗರೆತ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಮಾರ್ಕ್ ಅಡೇರ್, ಜಾರ್ಜ್ ಡಾಕ್ರೆಲ್, ಕೆವಿನ್ ಓಬ್ರಿಯೆನ್, ಪೌಲ್ ಸ್ಟರ್ಲಿಂಗ್, ಹ್ಯಾರಿ ಟೆಕ್ಟಾರ್, ನೀಲ್ ರಾಕ್ (ವಿ.ಕೀ.) ಲಾರ್ಕನ್ ಟಕರ್ (ವಿಕೀ), ಜೋಷ್ ಲಿಟಲ್, ಆಂಡಿ ಮೆಕ್​ಬ್ರೈನ್, ಸಿಮಿ ಸಿಂಗ್, ಬೆನ್ ವೈಟ್, ಕ್ರೆಗ್ ಯಂಗ್.

  ನಮೀಬಿಯಾ ತಂಡ: ಗೆರಾರ್ಡ್ ಎರಾಸ್ಮಸ್ (ನಾಯಕ), ಜೆ ಸ್ಮಿಟ್ (ಉಪನಾಯಕ), ಸ್ಟೀಫನ್ ಬಾರ್ಡ್, ಕಾರ್ಲ್ ಬಿರ್ಕೆನ್​ಸ್ಟಾಕ್, ಜೇನ್ ನಿಕೋಲ್ ಲಾಫ್ಟೀ ಈಟನ್, ಕ್ರೆಗ್ ವಿಲಿಯಮ್ಸ್, ಪಿಕಿ ಯಾ ಫ್ರಾನ್ಸ್, ಡೇವಿಡ್ ವಿಯೆಸ್, ಜೇ ಫ್ರೈಲಿಂಕ್, ಮಿಖಾವು ಡುಪ್ರೀಜ್ (ವಿಕೀ), ಜೇನ್ ಗ್ರೀನ್(ವಿ.ಕೀ), ಬರ್ನಾರ್ಡ್ ಶಾಲ್ಜ್, ಬೆನ್ ಶಿಕಾಂಗೋ, ರುಬೆನ್ ಟ್ರಂಪಲ್ಮಾನ್, ಮಿಖಾಯಿಲ್ ವಾನ್ ಲಿಂಜೆನ್.

  ಇದನ್ನೂ ಓದಿ: T20 World Cup India Squad- ಭಾರತ ತಂಡ, ಆಟಗಾರರ ಫಾರ್ಮ್, ವೇಳಾಪಟ್ಟಿ ಇತ್ಯಾದಿ ವಿವರ

  ಗ್ರೂಪ್ ಎ ಪಂದ್ಯಗಳ ವೇಳಾಪಟ್ಟಿ ಮತ್ತು ಫಲಿತಾಂಶ:

  1) ಅ. 18: ನಮೀಬಿಯಾ vs ಶ್ರೀಲಂಕಾ: ಅಬುಧಾಬಿಯಲ್ಲಿ ನ ಡೆದ ಪಂದ್ಯದಲ್ಲಿ ಶ್ರೀಲಂಕಾಗೆ 7 ವಿಕೆಟ್​ಗಳಿಂದ ಜಯ

  2) ಅ. 18: ನೆದರ್​ಲೆಡ್ಸ್ vs ಐರ್ಲೆಂಡ್: ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್​ಗೆ 7 ವಿಕೆಟ್ ಜಯ.

  3) ಅ. 20: ನಮೀಬಿಯಾ vs ನೆದರ್​ಲೆಂಡ್ಸ್: ಅಬುಧಾಬಿಯಲ್ಲಿ ಪಂದ್ಯ (ಮಧ್ಯಾಹ್ನ 3:30ಕ್ಕೆ)

  4) ಅ. 20: ಐರ್ಲೆಂಡ್ vs ಶ್ರೀಲಂಕಾ: ಅಬುಧಾಬಿಯಲ್ಲಿ ಪಂದ್ಯ (ಸಂಜೆ 7:30ಕ್ಕೆ)

  5) ಅ. 22: ಐರ್ಲೆಂಡ್ vs ನಮೀಬಿಯಾ: ಶಾರ್ಜಾದಲ್ಲಿ ಪಂದ್ಯ (ಮಧ್ಯಾಹ್ನ 3:30ಕ್ಕೆ)

  6) ಅ. 22: ನೆದರ್​ಲೆಂಡ್ಸ್ vs ಶ್ರೀಲಂಕಾ: ಶಾರ್ಜಾದಲ್ಲಿ ಪಂದ್ಯ (ಸಂಜೆ 7:30ಕ್ಕೆ)
  Published by:Vijayasarthy SN
  First published: