T20 World Cup- ಟಿ20 ವಿಶ್ವಕಪ್​ಗೆ ಇಂದು ಭಾರತ ತಂಡ ಪ್ರಕಟ; ಇಲ್ಲಿದೆ ಸಂಭಾವ್ಯ 15 ಮಂದಿ ಪಟ್ಟಿ

India T20 World Cup Squad- ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಅರಬ್ ನಾಡಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಇಂದು ಭಾರತ ತಂಡವನ್ನು ಪ್ರಕಟಿಸಲಾಗುತ್ತಿದೆ. ಕೊಹ್ಲಿ ನಾಯಕತ್ವದ ಟೀಮ್ನಲ್ಲಿ ಯಾರಾರಿಲಿದ್ದಾರೆ?

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಬೆಂಗಳೂರು: ಮುಂದಿನ ತಿಂಗಳಿಂದ ಯುಎಇ ಮತ್ತು ಓಮನ್​ನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡವನ್ನು ಇಂದು ಪ್ರಕಟಿಸಲಾಗುತ್ತಿದೆ. ಆಯ್ಕೆಗಾರರು ಈಗಾಗಲೇ 18 ಮಂದಿಯ ಹೆಸರನ್ನು ಅಂತಿಮಗೊಳಿಸಲು ಸಜ್ಜಾಗಿದೆ. ಇಂದು ಸಂಜೆಯ ವೇಳೆ 15 ಆಟಗಾರರು ಹಾಗೂ 3 ಮೀಸಲು ಆಟಗಾರರಿರುವ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ. ಒಂದೊಂದು ಸ್ಥಾನಕ್ಕೂ ಭಾರತದಲ್ಲಿ ಪ್ರಬಲ ಪೈಪೋಟಿ ಇರುವುದು ಆಯ್ಕೆಗಾರರ ಕೆಲಸವನ್ನ ಕಠಿಣಗೊಳಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಮಿಂಚುತ್ತಿರುವ ಶಾರ್ದೂಲ್ ಠಾಕೂರ್ ಅವರಿಗೇ ಸ್ಥಾನ ಸಿಗುವುದು ಕಷ್ಟ ಎಂಬಂತಹ ಪರಿಸ್ಥಿತಿ ಸದ್ಯದ ಮಟ್ಟಿಗೆ ಇದೆ. ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮಿಷ್ಟದ ಭಾರತ ತಂಡಗಳನ್ನ ಹೆಸರಿಸಲು ಆರಂಭಿಸಿದ್ದಾರೆ. ಆದರೆ, ವಾಸ್ತವಿಕ ನೆಲಗಟ್ಟಿನಲ್ಲಿ ತಂಡದಲ್ಲಿ ಅಂತಿಮವಾಗಿ ಸ್ಥಾನ ಪಡೆಯುವ ಆಟಗಾರರು ಯಾರೆಂದು ಅಂದಾಜಿಸುವುದು ಕಷ್ಟವೇ.

  ಅಗ್ರ ಕ್ರಮಾಂಕದಲ್ಲಿ ಆರಂಭಿಕ ಸ್ಥಾನ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾಗೇ ಸಿಗುವ ಸಾಧ್ಯತೆ ಇದೆ. ಮೊದಲ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬರುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದ ಎರಡು ಸ್ಥಾನಗಳಿಗೆ ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಅವರ ಮಧ್ಯೆ ಪೈಪೋಟಿ ಇದೆ. ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಇದ್ಧಾರೆ. ಆಲ್​ರೌಂಡರ್ ಆಗಿ ಅಜಯ್ ಜಡೇಜಾ, ಕೃಣಾಲ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಮಧ್ಯೆ ಪೈಪೋಟಿ ಇದೆ.

  ಬೌಲಿಂಗ್ ವಿಭಾಗದಲ್ಲೂ ಭಾರೀ ಪೈಪೋಟಿ ಇದೆ. ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಅವರ ಪೈಕಿ ಮೂವರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ. ಸ್ಪಿನ್ನರ್​ಗಳ ಪೈಕಿ ಯುಜವೇಂದ್ರ ಚಹಲ್, ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಾಹರ್ ಮಧ್ಯೆ ಇಬ್ಬರಿಗೆ ತಂಡದಲ್ಲಿ ಸ್ಥಾನ ಸಿಗಬಹುದು. ಭಾರತದ ಬೆಸ್ಟ್ ಸ್ಪಿನ್ನರ್ ಎನ್ನಲಾದ ಆರ್ ಅಶ್ವಿನ್ ಅವರ ಹೆಸರನ್ನ ಪರಿಗಣಿಸಲಾಗಿಲ್ಲ.

  ಇದನ್ನೂ ಓದಿ: Cricket Records- ಓವಲ್ ಪಂದ್ಯದಲ್ಲಿ ಬಂದ ಬುಮ್ರಾ, ಕೊಹ್ಲಿ, ರೋಹಿತ್ ದಾಖಲೆಗಳು

  ಸಂಭಾವ್ಯ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಲ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್, ಪೃಥ್ವಿ ಶಾ, ಕೃನಾಲ್ ಪಾಂಡ್ಯ, ಮೊಹಮ್ಮದ್ ಸಿರಾಜ್

  ಇಲ್ಲಿ ಪೃಥ್ವಿ ಶಾ, ಕೃಣಾಲ್ ಪಾಂಡ್ಯ ಮತ್ತು ಮೊಹ್ಮಮದ್ ಸಿರಾಜ್ ಅವರು ಮೀಸಲು ಆಟಗಾರರಾಗಿ ಟೀಮ್ ಇಂಡಿಯಾದ ಬೆಚ್ ಕಾಯಬೇಕಾಗಬಹುದು.

  ಟಿ20 ವರ್ಲ್ಡ್ ಕಪ್ 2021 ವೇಳಾಪಟ್ಟಿ:

  ಅಕ್ಟೋಬರ್ 17ರಂದು ವಿಶ್ವಕಪ್​ನ ಕ್ವಾಲಿಫೈಯರ್ ಸುತ್ತು ಆರಂಭಗೊಂಡು ಅಕ್ಟೋಬರ್ 22ಕ್ಕೆ ಮುಗಿಯುತ್ತದೆ. ಅಕ್ಟೋಬರ್ 23ರಿಂದ ಸೂಪರ್ 12 ಸುತ್ತು ನವೆಂಬರ್ 8ರವರೆಗೆ ನಡೆಯುತ್ತದೆ. ಬಳಿಕ ನಾಕೌಟ್ ಹಂತ ಇರುತ್ತದೆ. ನವೆಂಬರ್ 14ಕ್ಕೆ ಫೈನಲ್ ಪಂದ್ಯ ಇರುತ್ತದೆ.

  ಮೊದಲ ಸುತ್ತಿನಲ್ಲಿ ತಲಾ ನಾಲ್ಕು ತಂಡಗಳ ಎರಡು ಗುಂಪುಗಳಿವೆ. ಇದರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳೂ ಇವೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ನಾಲ್ಕು ತಂಡಗಳು ಸೂಪರ್12 ಸುತ್ತಿಗೆ ಪ್ರವೇಶ ಪಡೆಯುತ್ತವೆ. ಈ ಸೂಪರ್ 12 ಗುಂಪಿನಲ್ಲಿ ಟಿ20 ಕ್ರಿಕೆಟ್​ನ ಟಾಪ್-8 ತಂಡಗಳು ಆಟೊಮ್ಯಾಟಿಕ್ ಆಗಿ ನೇರವಾಗಿ ಪ್ರವೇಶ ಪಡೆದಿರುತ್ತವೆ. ಈ ಎಂಟು ತಂಡಗಳ ಜೊತೆ ಸೂಪರ್12 ಸುತ್ತಿಗೆ ಮೊದಲ ಸುತ್ತಿನಿಂದ ನಾಲ್ಕು ತಂಡಗಳು ಸೇರುತ್ತವೆ. ಈ ಸೂಪರ್12 ಸುತ್ತಿನಲ್ಲೂ ತಲಾ ಆರು ತಂಡಗಳ ಎರಡು ಗುಂಪುಗಳನ್ನ ಮಾಡಲಾಗುತ್ತದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದು ವಿಶೇಷ. ನ್ಯೂಜಿಲೆಂಡ್, ಅಫ್ಘಾನಿಸ್ತಾನ ತಂಡಗಳೂ ಇದೇ ಗುಂಪಿನಲ್ಲಿವೆ.
  Published by:Vijayasarthy SN
  First published: