T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

16 Teams in 2021 T20 World Cup - 2021, ಅ. 17ರಿಂದ ನ. 14ರವರೆಗೆ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ದುಬೈ, ಶಾರ್ಜಾ, ಅಬುಧಾಬಿ ಮತ್ತು ಮಸ್ಕಟ್ ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ.

ಟಿ20 ವಿಶ್ವಕಪ್ 2021.

ಟಿ20 ವಿಶ್ವಕಪ್ 2021.

  • Share this:
    ಕಳೆದ ವರ್ಷ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ (T20 World Cup 2021) ಕೋವಿಡ್ ಕಾರಣಕ್ಕೆ ರದ್ದುಗೊಂಡು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಈ ವರ್ಷ ಟಿ20 ವಿಶ್ವಕಪ್ 2021 ಭಾರತದಲ್ಲಿ ನಡೆಯಬೇಕಿತ್ತು. ಇದೇ ಕೋವಿಡ್ ಕಾರಣಕ್ಕೆ ಈಗ ಯುಎಇ ಮತ್ತು ಓಮನ್ ದೇಶಗಳಿಗೆ ವರ್ಗವಾಗಿದೆ. ಈ ಏಳನೇ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಂದು ಪ್ರಾರಂಭಗೊಂಡು ನ. 14ಕ್ಕೆ ಮುಕ್ತಾಯಗೊಳ್ಳುತ್ತದೆ (2021, October 17 to November 14th). ವೆಸ್ಟ್ ಇಂಡೀಸ್ ಈ ಬಾರಿಯ ಡಿಫೆಂಡಿಂಗ್ ಚಾಂಪಿಯನ್ ಆಗಿದೆ. ಒಟ್ಟು 16 ತಂಡಗಳು ಈ ಎಂಟನೇ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುತ್ತಿವೆ. ಮೊದಲ ಸುತ್ತು ಹಾಗೂ ಸೂಪರ್-12 ಸುತ್ತುಗಳು ಇರಲಿವೆ. ಟಿ20 ಕ್ರಿಕೆಟ್​ನ ಟಾಪ್-8 ತಂಡಗಳು ನೇರವಾಗಿ ಸೂಪರ್-12ರ ಸುತ್ತಿಗೆ ಪ್ರವೇಶ ಪಡೆದಿವೆ. ಮೊದಲ ಸುತ್ತಿನಲ್ಲಿ ಎಂಟು ತಂಡಗಳು ಸೆಣಸಲಿವೆ. ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಆಯಾ ಗುಂಪಿನಿಂದ ಎರಡು ತಂಡಗಳಂತೆ ಒಟ್ಟು ನಾಲ್ಕು ತಂಡಗಳು ಸೂಪರ್-12 ಸುತ್ತಿಗೆ ತೇರ್ಗಡೆ ಆಗುತ್ತವೆ. ಈ ನಾಲ್ಕು ತಂಡಗಳು ಹಾಗೂ ನೇರವಾಗಿ ಪ್ರವೇಶ ಪಡೆದ ಎಂಟು ತಂಡಗಳು ಹೀಗೆ 12 ತಂಡಗಳು ಸೂಪರ್-12 ಸುತ್ತಿನಲ್ಲಿ ಸೆಣಸಲಿವೆ.

    Super-12 Round (ಸೂಪರ್-12) ಸುತ್ತಿನಲ್ಲೂ ಎರಡು ಗುಂಪುಗಳಾಗಿ ಮಾಡಲಾಗಿದೆ. ಆಯಾ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. ಯುಎಇ ದೇಶದ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಹಾಗೂ ಓಮನ್ ದೇಶದ ಮಸ್ಕಟ್ ನಗರಗಳಲ್ಲಿ ವಿಶ್ವಕಪ್​ನ ಎಲ್ಲಾ ಪಂದ್ಯಗಳು ನಡೆಯುತ್ತವೆ.

    ಮೊದಲ ಸುತ್ತಿನಲ್ಲಿರುವ ತಂಡಗಳು:
    ಗ್ರೂಪ್ ಎ: ಶ್ರೀಲಂಕಾ, ನೆದರ್​ಲೆಂಡ್ಸ್, ಐರ್​ಲೆಂಡ್, ನಮೀಬಿಯಾ
    ಗ್ರೂಪ್ ಬಿ: ಬಾಂಗ್ಲಾದೇಶ, ಓಮನ್, ಪಪುವಾ ನ್ಯೂಗಿನಿಯಾ, ಸ್ಕಾಟ್​ಲೆಂಡ್

    ಸೂಪರ್-12 ಸುತ್ತಿಗೆ ನೇರ ಪ್ರವೇಶ ಪಡೆದಿರುವ ತಂಡಗಳು:
    ಗ್ರೂಪ್ 1: ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ (ಎ1), ಬಾಂಗ್ಲಾದೇಶ (ಬಿ2)
    ಗ್ರೂಪ್ 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ನಮೀಬಿಯಾ (ಎ2), ಸ್ಕಾಟ್​ಲೆಂಡ್ (ಬಿ1).

    ಇದನ್ನೂ ಓದಿ: T20 World Cup India Squad- ಭಾರತ ತಂಡ, ಆಟಗಾರರ ಫಾರ್ಮ್, ವೇಳಾಪಟ್ಟಿ ಇತ್ಯಾದಿ ವಿವರ

    ಇದನ್ನೂ ಓದಿ: T20 World Cup: ಗ್ರೂಪ್ ಎ- ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್, ನಮೀಬಿಯಾ- ತಂಡ, Ranking ಇತ್ಯಾದಿ ವಿವರ

    ಇದನ್ನೂ ಓದಿ: T20 World Cup: ಗ್ರೂಪ್ ಬಿ- ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಿಎನ್​ಜಿ, ಓಮನ್ ತಂಡಗಳ ಡೀಟೇಲ್ಸ್, Rankings

    ಟಿ 20 ವಿಶ್ವಕಪ್ 2021 ವೇಳಾಪಟ್ಟಿ























































































































































































































































































    ದಿನಾಂಕ  ಸಮಯ ಪಂದ್ಯಗಳು ಸ್ಥಳ
    ಅ. 17 ಮಧ್ಯಾಹ್ನ 3:30 ಓಮನ್ vs ಪಪುವಾ ನ್ಯೂಗಿನಿಯಾ ಮಸ್ಕಟ್
    ಅ. 17 ಸಂಜೆ 7:30 ಬಾಂಗ್ಲಾದೇಶ vs ಸ್ಕಾಟ್​ಲೆಂಡ್ ಮಸ್ಕಟ್
    ಅ. 18 ಮಧ್ಯಾಹ್ನ 3:30 ಐರ್​ಲೆಂಡ್ vs ನೆದರ್​ಲೆಂಡ್ಸ್ ಅಬುಧಾಬಿ
    ಅ. 18  ಸಂಜೆ 7:30 ನಮೀಬಿಯಾ vs ಶ್ರೀಲಂಕಾ ಅಬುಧಾಬಿ
    ಅ. 19 ಮಧ್ಯಾಹ್ನ 3:30 ಪಪುವಾ ನ್ಯೂಗಿನಿಯಾ vs ಸ್ಕಾಟ್​ಲೆಂಡ್ ಮಸ್ಕಟ್
    ಅ. 19  ಸಂಜೆ 7:30 ಓಮನ್ vs ಬಾಂಗ್ಲಾದೇಶ ಮಸ್ಕಟ್
    ಅ. 20 ಮಧ್ಯಾಹ್ನ 3:30 ನಮೀಬಿಯಾ vs ನೆದರ್​ಲೆಂಡ್ಸ್ ಅಬುಧಾಬಿ
    ಅ. 20  ಸಂಜೆ 7:30 ಐರ್​ಲೆಂಡ್ vs ಶ್ರೀಲಂಕಾ ಅಬುಧಾಬಿ
    ಅ. 21 ಮಧ್ಯಾಹ್ನ 3:30 ಬಾಂಗ್ಲಾದೇಶ vs ಪಪುವಾ ನ್ಯೂಗಿನಿಯಾ ಮಸ್ಕಟ್
    ಅ. 21  ಸಂಜೆ 7:30 ಓಮನ್ vs ಸ್ಕಾಟ್​ಲೆಂಡ್ ಮಸ್ಕಟ್
    ಅ. 22 ಮಧ್ಯಾಹ್ನ 3:30 ಐರ್​ಲೆಂಡ್ vs ನಮೀಬಿಯಾ ಶಾರ್ಜಾ
    ಅ. 22  ಸಂಜೆ 7:30 ನೆದರ್​ಲೆಂಡ್ಸ್ vs ಶ್ರೀಲಂಕಾ ಶಾರ್ಜಾ
    ಅ. 23 ಮಧ್ಯಾಹ್ನ 3:30 ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಅಬುಧಾಬಿ
    ಅ. 23  ಸಂಜೆ 7:30 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ದುಬೈ
    ಅ. 24 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಶ್ರೀಲಂಕಾ ಶಾರ್ಜಾ
    ಅ. 24  ಸಂಜೆ 7:30 ಭಾರತ vs ಪಾಕಿಸ್ತಾನ ದುಬೈ
    ಅ. 25  ಸಂಜೆ 7:30 ಅಫ್ಘಾನಿಸ್ತಾನ್ vs ಸ್ಕಾಟ್​ಲೆಂಡ್ ಶಾರ್ಜಾ
    ಅ. 26 ಮಧ್ಯಾಹ್ನ 3:30  ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ ದುಬೈ
    ಅ. 26  ಸಂಜೆ 7:30  ಪಾಕಿಸ್ತಾನ್ vs ನ್ಯೂಜಿಲೆಂಡ್ ಶಾರ್ಜಾ
    ಅ. 27 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಇಂಗ್ಲೆಂಡ್ ಅಬುಧಾಬಿ
    ಅ. 27  ಸಂಜೆ 7:30 ಸ್ಕಾಟ್ಲೆಂಡ್ vs ನಮೀಬಿಯಾ ಅಬುಧಾಬಿ
    ಅ. 28  ಸಂಜೆ 7:30 ಆಸ್ಟ್ರೇಲಿಯಾ vs ಶ್ರೀಲಂಕಾ ದುಬೈ
    ಅ. 29 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ವೆಸ್ಟ್ ಇಂಡೀಸ್ ಶಾರ್ಜಾ
    ಅ. 29  ಸಂಜೆ 7:30  ಅಫ್ಘಾನಿಸ್ತಾನ್ vs ಪಾಕಿಸ್ತಾನ್ ದುಬೈ
    ಅ. 30 ಮಧ್ಯಾಹ್ನ 3:30 ಸೌಥ್ ಆಫ್ರಿಕಾ vs ಶ್ರೀಲಂಕಾ ಶಾರ್ಜಾ
    ಅ. 30  ಸಂಜೆ 7:30  ಆಸ್ಟ್ರೇಲಿಯಾ vs ಇಂಗ್ಲೆಂಡ್ ದುಬೈ
    ಅ. 31 ಮಧ್ಯಾಹ್ನ 3:30 ಅಫ್ಗಾನಿಸ್ತಾನ್ vs ನಮೀಬಿಯಾ ಅಬುಧಾಬಿ
    ಅ. 31  ಸಂಜೆ 7:30  ಭಾರತ vs ನ್ಯೂಜಿಲೆಂಡ್ ದುಬೈ
    ನ. 1  ಸಂಜೆ 7:30 ಇಂಗ್ಲೆಂಡ್ vs ಶ್ರೀಲಂಕಾ ಶಾರ್ಜಾ
     ನ. 2 ಮಧ್ಯಾಹ್ನ 3:30 ಬಾಂಗ್ಲಾದೇಶ್ vs ಸೌಥ್ ಆಫ್ರಿಕಾ  ಅಬುಧಾಬಿ
     ನ. 2  ಸಂಜೆ 7:30 ಪಾಕಿಸ್ತಾನ್ vs ನಮೀಬಿಯಾ  ಅಬುಧಾಬಿ
     ನ. 3 ಮಧ್ಯಾಹ್ನ 3:30 ನ್ಯೂಜಿಲೆಂಡ್ vs ಸ್ಕಾಟ್ಲೆಂಡ್  ದುಬೈ
     ನ. 3  ಸಂಜೆ 7:30  ಅಫ್ಘಾನಿಸ್ತಾನ್ vs ಭಾರತ  ಅಬುಧಾಬಿ
     ನ. 4 ಮಧ್ಯಾಹ್ನ 3:30 ಆಸ್ಟ್ರೇಲಿಯಾ vs ಬಾಂಗ್ಲಾದೇಶ್  ದುಬೈ
     ನ. 4  ಸಂಜೆ 7:30 ವೆಸ್ಟ್ ಇಂಡೀಸ್ vs ಶ್ರೀಲಂಕಾ  ಅಬುಧಾಬಿ
     ನ. 5 ಮಧ್ಯಾಹ್ನ 3:30 ನ್ಯೂಜಿಲೆಂಡ್ vs ನಮೀಬಿಯಾ  ಶಾರ್ಜಾ
     ನ. 5  ಸಂಜೆ 7:30 ಭಾರತ vs ಸ್ಕಾಟ್ಲೆಂಡ್  ದುಬೈ
     ನ. 6 ಮಧ್ಯಾಹ್ನ 3:30  ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್  ಅಬುಧಾಬಿ
     ನ. 6  ಸಂಜೆ 7:30  ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ  ಶಾರ್ಜಾ
     ನ. 7 ಮಧ್ಯಾಹ್ನ 3:30  ಅಫ್ಘಾನಿಸ್ತಾನ್ vs ನ್ಯೂಜಿಲೆಂಡ್  ಅಬುಧಾಬಿ
     ನ. 7  ಸಂಜೆ 7:30 ಪಾಕಿಸ್ತಾನ್ vs ಸ್ಕಾಟ್ಲೆಂಡ್  ಶಾರ್ಜಾ
     ನ. 8  ಸಂಜೆ 7:30 ಭಾರತ vs ನಮೀಬಿಯಾ  ದುಬೈ
    ನ. 10  ಸಂಜೆ 7:30 ಸೆಮಿಫೈನಲ್  ಅಬುಧಾಬಿ
    ನ. 11  ಸಂಜೆ 7:30 ಸೆಮಿಫೈನಲ್  ದುಬೈ
    ನ. 14  ಸಂಜೆ 7:30 ಫೈನಲ್  ದುಬೈ

    ಭಾರತದ ಪಂದ್ಯಗಳು:
    ಅ. 24: ಪಾಕಿಸ್ತಾನ
    ಅ. 31: ನ್ಯೂಜಿಲೆಂಡ್
    ನ. 3: ಅಫ್ಘಾನಿಸ್ತಾನ್
    ನ. 5: ಸ್ಕಾಟ್ಲೆಂಡ್
    ನ. 8: ನಮೀಬಿಯಾ
    Published by:MAshok Kumar
    First published: