T20 World Cup: ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ಇರೋದು ಇದೊಂದೇ ಲೆಕ್ಕಾಚಾರ

India’s chances of Semifinals in T20 World Cup- ಭಾರತಕ್ಕೆ ಸೆಮಿಫೈನಲ್ ಸಾಧ್ಯತೆ ಕ್ಷೀಣಿಸಿದೆ. ಎರಡನೇ ಗುಂಪಿನ ಪ್ರತಿ ಪಂದ್ಯವೂ ಮುಖ್ಯವೆನಿಸಿದೆ. ಯಾವ್ಯಾವ ಪಂದ್ಯಗಳ ಫಲಿತಾಂಶ ಹೇಗಾದರೆ ಭಾರತಕ್ಕೆ ಅನುಕೂಲ ಎಂಬ ಲೆಕ್ಕಾಚಾರ ಇಲ್ಲಿದೆ:

ಭಾರತದ ಆಟಗಾರರು

ಭಾರತದ ಆಟಗಾರರು

 • Share this:
  ಬೆಂಗಳೂರು, ನ. 01: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ನಿನ್ನೆ ನ್ಯೂಜಿಲೆಂಡ್ ವಿರುದ್ಧ ಸೋಲುತ್ತಿದ್ದಂತೆಯೇ ಟೀಮ್ ಇಂಡಿಯಾ ಸೆಮಿಫೈನಲ್ ರೇಸ್​ನಿಂದ ಬಹುತೇಕ ನಿರ್ಗಮಿಸಿದಂತಾಗಿದೆ. ಆದರೂ ಪವಾಡ ನಡೆಯುವುದು ನಿಜ ಅನ್ನುವುದೇ ಆದರೆ ಭಾರತಕ್ಕೂ ಸೆಮಿಫೈನಲ್ ಪ್ರವೇಶ ಸಾಧ್ಯ ಆಗಬಹುದು. ಟಿ20 ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿ ಬಲಾಢ್ಯ ತಂಡಗಳೇ ಬೇಟೆಯಾಡಬೇಕೆಂದೇನಿಲ್ಲ. ಯಾವ ತಂಡ ಯಾರ ಮೇಲಾದರೂ ಮೇಲೆರಗಿ ಸೋಲಿಸಬಹುದು.

  ಆರು ತಂಡಗಳಿರುವ ಎರಡನೇ ಗುಂಪಿನಲ್ಲಿ ಎರಡು ಸ್ಥಾನಗಳಿಗಾಗಿ ಸೆಮಿಫೈನಲ್ ರೇಸ್​ನಲ್ಲಿ ಪಾಕಿಸ್ತಾನ 6 ಅಂಕಗಳೊಂದಿಗೆ ಎಲ್ಲರಿಗಿಂತ ಮುಂದಿದೆ. ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ಮತ್ತು ನಮೀಬಿಯಾ ನಂತರದ ಸ್ಥಾನದಲ್ಲಿವೆ. ಭಾರತ ಮತ್ತು ಸ್ಕಾಟ್ಲೆಂಡ್ ಒಂದೂ ಗೆಲುವು ಕಾಣದೆ ಕೊನೆಯ ಸ್ಥಾನದಲ್ಲಿವೆ.

  ಇಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ್ ಪಂದ್ಯಗಳ ಫಲಿತಾಂಶ ಬಹಳ ಮುಖ್ಯ. ಭಾರತದ ಹಣೆಬರಹ ಗಟ್ಟಿ ಇದ್ದರೆ ಈ ಕೆಳಕಂಡಂತೆ ಫಲಿತಾಂಶ ಬಂದರೆ ಸೆಮಿಫೈನಲ್ ಬಾಗಿಲು ತೆರೆದುಕೊಳ್ಳಬಹುದು.

  ಭಾರತದ ಸೆಮಿಫೈನಲ್ ಪ್ರವೇಶಕ್ಕೆ ಅನುವು ಮಾಡಿಕೊಡಬಲ್ಲ ಗ್ರೂಪ್ 2 ಲೆಕ್ಕಾಚಾರ:
  ದಿನಾಂಕಪಂದ್ಯಭಾರತಕ್ಕೆ ಲಾಭಕರ ಫಲಿತಾಂಶ
  ನ. 2ನಮೀಬಿಯಾ vs ಪಾಕಿಸ್ತಾನ್ಪಾಕಿಸ್ತಾನಕ್ಕೆ ಗೆಲುವು
  ನ. 3ನ್ಯೂಜಿಲೆಂಡ್ vs ಸ್ಕಾಟ್​ಲೆಂಡ್ಸ್ಕಾಟ್ಲೆಂಡ್​ಗೆ ಗೆಲುವು
  ನ. 3ಅಫ್ಘಾನಿಸ್ತಾನ್ vs ಭಾರತಭಾರತಕ್ಕೆ ಗೆಲುವು
  ನ. 5ನಮೀಬಿಯಾ vs ನ್ಯೂಜಿಲೆಂಡ್ನಮೀಬಿಯಾಗೆ ಗೆಲುವು
  ನ. 5ಭಾರತ vs ಸ್ಕಾಟ್ಲೆಂಡ್ಭಾರತಕ್ಕೆ ಗೆಲುವು
  ನ. 7ಅಫ್ಘಾನಿಸ್ತಾನ್ vs ನ್ಯೂಜಿಲೆಂಡ್ನ್ಯೂಜಿಲೆಂಡ್​ಗೆ ಗೆಲುವು
  ನ. 7ಪಾಕಿಸ್ತಾನ್ vs ಸ್ಕಾಟ್ಲೆಂಡ್ಪಾಕಿಸ್ತಾನಕ್ಕೆ ಗೆಲುವು
  ನ. 8ಭಾರತ vs ನಮೀಬಿಯಾಭಾರತಕ್ಕೆ ಗೆಲುವು

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಈ ಮೇಲಿನಂತೆ ಪಂದ್ಯಗಳ ಫಲಿತಾಂಶ ಬಂದರೆ ಈ ಕೆಳಕಂತಂತೆ ಅಂತಿಮ ಪಟ್ಟಿ ಇರುತ್ತದೆ:
  ಪಾಕಿಸ್ತಾನ್: 10 ಅಂಕ
  ಭಾರತ: 6 ಅಂಕ
  ಅಫ್ಘಾನಿಸ್ತಾನ್: 4 ಅಂಕ
  ನ್ಯೂಜಿಲೆಂಡ್: 4 ಅಂಕ
  ನಮೀಬಿಯಾ: 4 ಅಂಕ
  ಸ್ಕಾಟ್ಲೆಂಡ್: 2 ಅಂಕ

  ಪಾಕಿಸ್ತಾನ್ ಮತ್ತು ಭಾರತ ಸೆಮಿಫೈನಲ್ ಪ್ರವೇಶಿಸುತ್ತವೆ. ಭಾರತ ತನ್ನ ಮುಂದಿನ ಮೂರು ಪಂದ್ಯಗಳನ್ನ ಭಾರೀ ಅಂತರದಿಂದ ಗೆದ್ದು ರನ್ ರೇಟ್ ವೃದ್ಶಿಸಿಕೊಂಡರೆ ಇನ್ನಷ್ಟು ಅದೃಷ್ಟ ಕೂಡಿಕೊಳ್ಳಬಹುದು. ಅದೇ ವೇಳೆ, ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ತಂಡಗಳ ನೆಟ್ ರನ್ ರೇಟ್ ಭಾರತಕ್ಕಿಂತ ಕಡಿಮೆ ಇರಬೇಕು. ಇದಾಗಬೇಕಾದರೆ ಪವಾಡವೇ ನಡೆಯಬೇಕು.

  ಇದನ್ನೂ ಓದಿ: T20 World Cup- ಮೈಕೇಲ್ ವಾನ್ ಹೇಳಿದ ಭವಿಷ್ಯ ನಿಜವಾಗುತ್ತಾ? ವಿಶ್ವಕಪ್​ನಿಂದ ಹೊರಬೀಳುತ್ತಾ ಭಾರತ?

  ಈ ಮೂರು ಅಂಶ ಬಹಳ ಮುಖ್ಯ:

  1) ಭಾರತ ತನ್ನ ಮುಂದಿನ 3 ಪಂದ್ಯಗಳನ್ನ ಭಾರೀ ಅಂತರದಿಂದ ಗೆಲ್ಲಬೇಕು

  2) ಅಫ್ಘಾನಿಸ್ತಾನ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಸೋಲಬೇಕು

  3) ನ್ಯೂಜಿಲೆಂಡ್ ತಂಡ ತನ್ನ ಮುಂದಿನ ಪಂದ್ಯಗಳ ಪೈಕಿ ಅಫ್ಘಾನಿಸ್ತಾನ ವಿರುದ್ಧ ಮಾತ್ರ ಗೆಲ್ಲಬೇಕು.
  Published by:Vijayasarthy SN
  First published: