T20 World Cup 2022: ಆಸ್ಟ್ರೇಲಿಯಾದಲ್ಲಿ ಅ. 16ರಿಂದ ಮುಂದಿನ ಟಿ20 ವಿಶ್ವಕಪ್- ಪೂರ್ಣ ವಿವರ

Australia T20 World Cup 2022- ಕಾಂಗರೂಗಳ ನಾಡಿನಲ್ಲಿ 2022, ನವೆಂಬರ್ 16ರಿಂದ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ವರ್ಲ್ಡ್ ಕಪ್​ನ ಸ್ಥಳ, ದಿನಗಳನ್ನ ಐಸಿಸಿ ಪ್ರಕಟಿಸಿದೆ. ಅದರ ವಿವರ ಇಲ್ಲಿದೆ:

ಟಿ20 ವಿಶ್ವಕಪ್

ಟಿ20 ವಿಶ್ವಕಪ್

  • Share this:
    ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC- International Cricket Council) ಮುಂದಿನ ಟಿ20 ವಿಶ್ವಕಪ್ (T20 World Cup 2022) ವೇಳಾಪಟ್ಟಿ ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿ (Australia) ಅಕ್ಟೋಬರ್ 16ರಿಂದ ಆರಂಭಗೊಂಡು ನವೆಂಬರ್ 13ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಆಸ್ಟ್ರೇಲಿಯಾದ ವಿವಿಧೆಡೆಯ ಏಳು ಸ್ಥಳಗಳಲ್ಲಿ ಪಂದ್ಯಗಳು (Seven Venues to host T20 World Cup 2022 matches) ಆಯೋಜನೆಗೊಳ್ಳಲಿವೆ. ಈ ಬಾರಿಯ ಟಿ20 ವಿಶ್ವಕಪ್​ನ ಸೂಪರ್-12ನಲ್ಲಿ ಪಾಲ್ಗೊಂಡ 12 ತಂಡಗಳ ಪೈಕಿ ಶ್ರೀಲಂಕಾ, ವೆಸ್ಟ್ ಇಂಡೀಸ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಂದಿನ ವರ್ಷ ಮೊದಲ ಸುತ್ತಿನ ಕ್ವಾಲಿಫಯರ್​ನಲ್ಲಿ ಆಡಲಿವೆ. ಒಟ್ಟು 45 ಪಂದ್ಯಗಳು ಇಡೀ ಟೂರ್ನಿಯಲ್ಲಿ ನಡೆಯಲಿವೆ.

    ಕುತೂಹಲವೆಂದರೆ, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು 2020ರಲ್ಲೇ ನಡೆಸಬೇಕಿತ್ತು. ಆದರೆ ಕೋವಿಡ್ ಕಾರಣಕ್ಕೆ ಪಂದ್ಯಾವಳಿ ಎರಡು ವರ್ಷ ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾ ತಂಡ ಆತಿಥೇಯ ದೇಶ ಮಾತ್ರವಲ್ಲ ಡಿಫೆಂಡಿಂಗ್ ಚಾಂಪಿಯನ್ ಆಗಿ ಟೂರ್ನಿಯನ್ನ ಕಳೆಗಟ್ಟಿಸಲಿದೆ.

    ಟಿ20 ವಿಶ್ವಕಪ್ 2022 ಪಂದ್ಯಾವಳಿಯಲ್ಲಿ ಆಡುವುದು ಖಚಿತಗೊಂಡ ತಂಡಗಳು:

    ಸೂಪರ್-12 ಹಂತ: ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ್, ಇಂಗ್ಲೆಂಡ್, ಭಾರತ, ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ. ಈ ಎಂಟು ತಂಡಗಳ ಜೊತೆ ಮೊದಲ ಸುತ್ತಿನಿಂದ 4 ತಂಡಗಳು ಅರ್ಹತೆ ಪಡೆದು ಬರಲಿವೆ.

    ಮೊದಲ ಸುತ್ತು: ಶ್ರೀಲಂಕಾ, ವೆಸ್ಟ್ ಇಂಡೀಸ್, ನಮೀಬಿಯಾ, ಸ್ಕಾಟ್ಲೆಂಡ್ ತಂಡಗಳಿವೆ. ಜೊತೆಗೆ ವಿಶ್ವಾದ್ಯಂತ ಕ್ವಾಲಿಫಯರ್ ಟೂರ್ನಿಗಳಿಂದ ನಾಲ್ಕು ತಂಡಗಳು ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲಿವೆ. ಇವು ಮೊದಲ ಸುತ್ತಿನಲ್ಲಿ ಮೇಲಿನ ನಾಲ್ಕು ತಂಡಗಳ ಜೊತೆ ಸೆಣಸಲಿವೆ. ಈ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಕ್ವಾಲಿಫೈ ಆಗಲಿವೆ.

    ಇದನ್ನೂ ಓದಿ: IND vs NZ- ಭಾರತ ವಿರುದ್ಧ ಟಿ20 ಸರಣಿಗೆ ನ್ಯೂಜಿಲೆಂಡ್ ನಾಯಕ ಕೇನ್ ಅಲಭ್ಯ; ಟಿಮ್ ಸೌದಿ ಕ್ಯಾಪ್ಟನ್

    ಇನ್ನು, ಈ ಬಾರಿಯ ಟಿ20 ವಿಶ್ವಕಪ್​ನ ಸೂಪರ್-12 ಹಂತಕ್ಕೆ ಏರಲು ವಿಫಲಗೊಂಡ ಐರ್​ಲೆಂಡ್, ನೆದರ್​ಲೆಂಡ್ಸ್, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳು ಆಟೊಮ್ಯಾಟಿಕ್ ಕ್ವಾಲಿಫೈ ಆಗುವುದಿಲ್ಲ. ಅವು ಜಾಗತಿಕ ಅರ್ಹತಾ ಟೂರ್ನಿಗಳ ಮೂಲಕ ಮತ್ತೊಮ್ಮೆ ಅರ್ಹತೆ ಪಡೆಯುವ ಪ್ರಯತ್ನ ಮಾಡಬಹುದು.

    ಇದನ್ನೂ ಓದಿ: Hardik Pandya ಬಳಿ ಇದೆ ದುಬಾರಿ ಬೆಲೆಯ ವಾಚ್​​ಗಳು​..ಒಂದೊಂದರ ಬೆಲೆ ಕೇಳಿದ್ರೆ ತಲೆ ತಿರ್ಗೋದು ಗ್ಯಾರಂಟಿ!

    ಅರ್ಹತಾ ಟೂರ್ನಿಗಳು ಎಂದು: ಮುಂದಿನ ವರ್ಷ ಫೆಬ್ರವರಿಯಲ್ಲಿ ಓಮನ್ ದೇಶದಲ್ಲಿ ವಿಶ್ವಕಪ್ ಅರ್ಹತಾ ಟೂರ್ನಿಯೊಂದು ನಡೆಯಲಿದೆ. ಅಲ್ಲಿ ಫೈನಲ್ ತಲುಪಿದ ಎರಡು ತಂಡಗಳು ವಿಶ್ವಕಪ್​ಗೆ ಅರ್ಹತೆ ಪಡೆಯಲಿವೆ. ಹಾಗೆಯೇ, ಜೂನ್-ಜುಲೈ ತಿಂಗಳಲ್ಲಿ ಜಿಂಬಾಬ್ವೆಯಲ್ಲೂ ಮತ್ತೊಂದು ಕ್ವಾಲಿಫಯರ್ ಟೂರ್ನಿ ಇದ್ದು ಅದರಿಂದಲೂ ಎರಡು ತಂಡಗಳು 2022ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲಿವೆ.

    ಇದನ್ನೂ ಓದಿ: Rahul Dravid- ದ್ರಾವಿಡ್ ಮಗನಿಂದ ಬಂತು ಒಂದು ಕಾಲ್; ಅಪ್ಪನಿಗೆ ಸಿಕ್ತಾ ಕೋಚಿಂಗ್ ಜಾಬ್?

    ವಿಶ್ವಕಪ್ ಪಂದ್ಯ ನಡೆಯುವ ಸ್ಥಳಗಳು: ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೋಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ. ನವೆಂಬರ್ 13ರಂದು ಮೆಲ್ಬೋರ್ನ್​ನಲ್ಲಿ ಫೈನಲ್ ಪಂದ್ಯ ಇದೆ. ನ. 9 ಮತ್ತು 10ರಂದು ಸಿಡ್ನಿ ಮತ್ತು ಅಡಿಲೇಡ್​ನಲ್ಲಿ ಎರಡು ಸೆಮಿಫೈನಲ್ ಪಂದ್ಯಗಳಿವೆ.

    ಆಸ್ಟ್ರೇಲಿಯಾದಲ್ಲಿ 2020ರಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆದಿತ್ತು. ಎರಡು ವರ್ಷಗಳ ಬಳಿಕ ಕಾಂಗರೂ ನಾಡಿಗೆ ಮತ್ತೊಮ್ಮೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ.
    Published by:Vijayasarthy SN
    First published: