SA vs WI- ಹರಿಣಗಳ ದಾಳಿಗೆ ವಿಂಡೀಸ್ ಧೂಳೀಪಟ; ಒಂದೇ ವಿಕೆಟ್ ಪಡೆದರೂ ನೋರ್ಟಿಯಾ ಪಂದ್ಯಶ್ರೇಷ್ಠ

T20 World Cup 2021, SA vs WI- ವೆಸ್ಟ್ ಇಂಡೀಸ್ ತಂಡದ 143 ರನ್​ಗೆ ಪ್ರತಿಯಾಗಿ ಸೌಥ್ ಆಫ್ರಿಕಾ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ದಕ್ಷಿಣ ಆಫ್ರಿಕಾಗೆ ಇದು ಮೊದಲ ಗೆಲುವಾಗಿದೆ.

ಆನ್ರಿಕ್ ನೋರ್ಟಿಯಾ

ಆನ್ರಿಕ್ ನೋರ್ಟಿಯಾ

  • Share this:
    ದುಬೈ, ಅ. 26: ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕೊನೆಗೂ ಜಯದ ಹಾದಿಗೆ ಬಂದಿದೆ. ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಸೋಲುಂಡಿದ್ದ ಹರಿಣಗಳ ಪಡೆ ಇಂದು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿ ಚೊಚ್ಚ ಗೆಲುವಿನ ನಗೆ ಬೀರಿತು. ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆದ ಇದೇ ಪಿಚ್​ನಲ್ಲಿ ಅದೇ ರೀತಿಯ ಫಲಿತಾಂಶ ಇಂದು ಕಾಣಸಿಕ್ಕಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 143 ರನ್ ಗಳಿಸಿದರೆ ಸೌಥ್ ಆಫ್ರಿಕಾ 10 ಎಸೆತ ಇರುವಂತೆ ಚೇಸ್ ಮಾಡಿತು.

    ಟೆಂಬಾ ಬವುಮಾ ಅವರ ವಿಕೆಟ್ ಅನ್ನು ಬೇಗನೇ ಕಳೆದುಕೊಂಡರೂ ರೀಜಾ ಹೆಂಡ್ರಿಕ್ಸ್, ರಸ್ಸೀ ವ್ಯಾನ್ ಡರ್ ಡಸೆನ್ ಮತ್ತು ಏಡನ್ ಮಾರ್ಕ್ರಂ ಅಮೋಘ ಆಟ ಆಡಿ ಸೌಥ್ ಆಫ್ರಿಕಾಗೆ ಗೆಲುವು ತಂದುಕೊಟ್ಟರು. ಮಾರ್ಕ್ರಂ ಅವರಂತೂ 26 ಬಾಲ್​ನಲ್ಲಿ ಅಜೇಯ 51 ರನ್ ಗಳಿಸಿದ್ದರಿಂದ ಗೆಲುವು ಸುಲಭವಾಯಿತು.

    ನೋರ್ಟಿಯಾ ಟೈಟ್ ಬೌಲಿಂಗ್:

    ಆದರೆ, ಇದಕ್ಕೆ ಮುನ್ನ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯಿತು. ಎವಿನ್ ಲೆವಿಸ್ ಮತ್ತು ಲೆಂಡಲ್ ಸಿಮನ್ಸ್ ಮೊದಲ ವಿಕೆಟ್​ಗೆ 73 ರನ್ ಜೊತೆಯಾಟ ಆಡಿದರು. ಕೇಶವ್ ಮಹಾರಾಜ್ ಈ ಜೊತೆಯಾ ಮುರಿದರು. ನಂತರ ನಿಕೋಲಾಸ್ ಪೂರನ್ ವಿಕೆಟ್ ಕೂಡ ಪಡೆದರು. ಈ ಡಬಲ್ ಸ್ಟ್ರೈಕ್​ನಿಂದ ವಿಂಡೀಸ್ ಓಟಕ್ಕೆ ಬ್ರೇಕ್ ಬಿದ್ದಿತು. ಇನ್ನೊಂದೆಡೆ ಆನ್ರಿಕ್ ನೋರ್ಟಿಯಾ ಅವರ ಟೈಟ್ ಬೌಲಿಂಗ್​ನಿಂದ ವಿಂಡೀಸ್ ಬ್ಯಾಟುಗಾರರಿಗೆ ಕಟ್ಟಿಹಾಕಿದಂತಾಗಿತ್ತು. ನೋರ್ಟಿಯಾ 4 ಓವರ್​ನಲ್ಲಿ ನೀಡಿದ್ದು ಕೇವಲ 14 ರನ್ ಮಾತ್ರ.

    ನೋರ್ಟಿಯಾ ಅವರ ಬಿಗಿ ಬೌಲಿಂಗ್​ನಿಂದ ವೆಸ್ಟ್ ಇಂಡೀಸ್ ಬ್ಯಾಟುಗಾರರು ಒತ್ತಡಕ್ಕೊಳಗಾಗಿ ಔಟಾದಂತಿತ್ತು. ಡೇಂಜರಸ್ ಬ್ಯಾಟರ್ ಆಂಡ್ರೆ ರಸೆಲ್ ಅವರ ವಿಕೆಟ್ ಅನ್ನು ನೋರ್ಟಿಯಾ ಪಡೆದರು. ಕೇಶವ್ ಮಹಾರಾಜ್ ಎರಡು ಪ್ರಮುಖ ವಿಕೆಟ್​ಗಳನ್ನ ಪಡೆದರು. ಪ್ರಿಟೋರಿಯಸ್ 3 ವಿಕೆಟ್ ಪಡೆದರೂ ನೋರ್ಟಿಯಾಗೆ ಪಂದ್ಯಶ್ರೇಷ್ಠ ಗೌರವ ಲಭಿಸಲು ಅವರ ಬಿಗಿ ಬೌಲಿಂಗ್ ಮುಖ್ಯ ಕಾರಣವಾಯಿತು.

    ಇದನ್ನೂ ಓದಿ: SMIT T20- ನ. 4ರಿಂದ ಮುಷ್ತಾಕ್ ಅಲಿ ಟಿ20; ಕರ್ನಾಟಕ ತಂಡ, ನಾಯಕ, ಹಿಂದಿನ ಸಾಧನೆ ಇತ್ಯಾದಿ ವಿವರ

    ಐಪಿಎಲ್ ನೆರವಾಯಿತು ಎಂದ ನೋರ್ಟಿಯಾ:

    ಟಿ20 ವಿಶ್ವಕಪ್​ಗೆ ಮುನ್ನ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ್ದು ತನಗೆ ನೆರವಾಗಿದೆ ಎಂದು ಇದೇ ವೇಳೆ ಆನ್ರಿಕ್ ನೋರ್ಟಿಯಾ ಹೇಳಿಕೊಂಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ಈ ಪಿಚ್​​ಗಳಲ್ಲಿ ಬೌಲಿಂಗ್ ಮಾಡುವುದು ಹೇಗೆಂದು ಐಪಿಎಲ್ ಪಂದ್ಯಗಳ ಅನುಭವ ತೋರಿಸಿಕೊಟ್ಟಿತು. ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಲು ಐಪಿಎಲ್ ಟೂರ್ನಿಯೇ ಕಾರಣ ಎಂದು ಹೇಳಿದ್ಧಾರೆ.

    ಮುಂದಿನ ಪಂದ್ಯಗಳು: 

    ದಕ್ಷಿಣ ಆಫ್ರಿಕಾ ಈ ಗೆಲುವಿನೊಂದಿಗೆ ಮೊದಲ ಗುಂಪಿನಲ್ಲಿ 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ. ಗಾಯಗೊಂಡ ಹುಲಿಯಾಗಿರುವ ವೆಸ್ಟ್ ಇಂಡೀಸ್ ತನ್ನ ಮುಂದಿನ ಪಂದ್ಯವನ್ನು ಅ. 29ರಂದು ಬಾಂಗ್ಲಾ ಹುಲಿಗಳ ವಿರುದ್ಧ ಆಡಲಿದೆ. ಹರಿಣಗಳ ತಂಡ ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯವನ್ನ ಶ್ರೀಲಂಕಾ ಸಿಂಹಗಳ ವಿರುದ್ಧ ಅ. 30ರಂದು ಆಡಲಿದೆ.

    ಇದನ್ನೂ ಓದಿ: IPL- 150 ದೇಶಗಳ ಜಿಡಿಪಿಗಿಂತಲೂ ಹೆಚ್ಚು ಸಿರಿವಂತರು ಐಪಿಎಲ್ ಹೊಸ ತಂಡದ ಮಾಲೀಕರು

    ಸ್ಕೋರು ವಿವರ:

    ವೆಸ್ಟ್ ಇಂಡೀಸ್ 20 ಓವರ್ 143/8
    (ಎವಿನ್ ಲೆವಿಸ್ 56, ಕೀರಾನ್ ಪೊಲಾರ್ಡ್ 26, ಲೆಂಡಲ್ ಸಿಮನ್ಸ್ 16, ಕ್ರಿಸ್ ಗೇಲ್, ನಿಕೋಲಾಸ್ ಪೂರನ್ 12 ರನ್ – ಆನ್ರಿಕ್ ನೋರ್ಟಿಯಾ 14/1, ಕೇಶವ್ ಮಹಾರಾಜ್ 24/2, ಡ್ವೇನ್ ಪ್ರಿಟೋರಿಯಸ್ 17/3

    ಸೌಥ್ ಆಫ್ರಿಕಾ 18.2 ಓವರ್ 144/2
    (ಏಡನ್ ಮಾರ್ಕ್ರಂ ಅಜೇಯ 51, ರಾಸ್ಸೀ ವಾನ್ ಡರ್ ಡಸನ್ ಅಜೇಯ 43, ರೀಜಾ ಹೆಂಡ್ರಿಕ್ಸ್ 39 ರನ್)
    Published by:Vijayasarthy SN
    First published: