T20 World Cup- ಟಿ20 ವಿಶ್ವಕಪ್ಗೆ ಮುನ್ನ ಇವತ್ತಿನಿಂದ 16 ಅಭ್ಯಾಸ ಪಂದ್ಯಗಳು; ಇಲ್ಲಿದೆ ವೇಳಾಪಟ್ಟಿ
T20 World Cup Warm-up Matches- ಇವತ್ತಿನಿಂದ ಅ. 20ರವರೆಗೆ ನಾಲ್ಕು ದಿನಗಳ ಕಾಲ 16 ಅಭ್ಯಾಸ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ಸೌಥ್ ಆಫ್ರಿಕಾ ವಿರುದ್ಧ ಭಾರತದ ಎರಡು ವಾರ್ಮಪ್ ಮ್ಯಾಚ್ಗಳು ಇವೆ. ಈ ಎಲ್ಲಾ ಅಭ್ಯಾಸ ಪಂದ್ಯಗಳ ಪಟ್ಟಿ ಮತ್ತು ವಿವರ ಇಲ್ಲಿದೆ.
ದುಬೈ, ಅ. 12: ಐಸಿಸಿ ಟಿ20 ವರ್ಲ್ಡ್ಕಪ್ಗೆ (ICC T20 World Cup 2021) ಇನ್ನು ಕೆಲವೇ ದಿನಗಳು ಬಾಕಿ ಇವೆ. ಇವತ್ತಿನಿಂದ ಅಭ್ಯಾಸ ಪಂದ್ಯಗಳು (Warm-up matches) ಚಾಲನೆಗೊಂಡಿವೆ. ಇವತ್ತು ಒಂದು ದಿನದಲ್ಲಿ 4 ವಾರ್ಮಪ್ ಮ್ಯಾಚ್ಗಳು ನಡೆಯುತ್ತಿವೆ. ಅ. 12, 14, 18 ಮತ್ತು 22ರಂದು ಈ ನಾಲ್ಕು ದಿನದಲ್ಲಿ ಒಟ್ಟು 16 ಅಭ್ಯಾಸ ಪಂದ್ಯಗಳು ನಡೆಯಲಿವೆ. ವಿಶ್ವಕಪ್ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ 16 ತಂಡಗಳಿಗೂ ಎರಡೆರಡು ವಾರ್ಮಪ್ ಮ್ಯಾಚ್ಗಳ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ತಂಡವೂ ಕೂಡ ವಿಶ್ವಕಪ್ನಲ್ಲಿ ತಾವಿರದ ಗುಂಪಿನಲ್ಲಿ ತಂಡಗಳೊಂದಿಗೆ ಅಭ್ಯಾಸ ಪಂದ್ಯದಲ್ಲಿ ಆಡಲಿದೆ.
ಭಾರತವೂ ಎರಡು ಅಭ್ಯಾಸ ಪಂದ್ಯಗಳನ್ನ ಆಡಲಿದೆ. ಈಗಾಗಲೇ ಯುಎಇಯಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಭಾರತ ತಂಡದ ಆಟಗಾರರಿಗೆ ವಾರ್ಮಪ್ ಆಗಿಹೋದಂತಾಗಿದೆ. ಅ. 18 ಮತ್ತು 20ರಂದು ಆಸ್ಟ್ರೇಲಿಯಾ ಹಾಗೂ ಸೌಥ್ ಆಫ್ರಿಕಾ ತಂಡಗಳ ವಿರುದ್ಧ ಭಾರತ ವಾರ್ಮಪ್ ಮ್ಯಾಚ್ಗಳನ್ನ ಆಡಲಿದೆ. ಅ. 15ರಂದು ಐಪಿಎಲ್ ಫೈನಲ್ ಮುಗಿದ ಕೂಡಲೇ ಟೀಮ್ ಇಂಡಿಯಾ ಆಟಗಾರರು ವಾರ್ಮಪ್ಗಾಗಿ ಸಿದ್ಧತೆ ನಡೆಸಲಿದ್ದಾರೆ.
ಟಿ20 ವಿಶ್ವಕಪ್ 2021- ಅಭ್ಯಾಸ ಪಂದ್ಯಗಳ ವೇಳಾಪಟ್ಟಿ:
ದಿನಾಂಕ
ಪಂದ್ಯ
ಸ್ಥಳ
ಅ. 12
ಪಪುವಾ ನ್ಯೂಗಿನಿಯಾ vs ಐರ್ಲೆಂಡ್
ಅಬುಧಾಬಿ
ಅ. 12
ಬಾಂಗ್ಲಾದೇಶ vs ಶ್ರೀಲಂಕಾ
ಅಬುಧಾಬಿ (TO)
ಅ. 12
ನಮೀಬಿಯಾ vs ಓಮನ್
ದುಬೈ
ಅ. 12
ನೆದರ್ಲೆಂಡ್ಸ್ vs ಸ್ಕಾಟ್ಲೆಂಡ್
ಅಬುಧಾಬಿ (N)
ಅ. 14
ಪಪುವಾ ನ್ಯೂಗಿನಿಯಾ vs ಶ್ರೀಲಂಕಾ
ಅಬುಧಾಬಿ (TO)
ಅ. 14
ಬಾಂಗ್ಲಾದೇಶ vs ಐರ್ಲೆಂಡ್
ಅಬುಧಾಬಿ
ಅ. 14
ನಮೀಬಿಯಾ vs ಸ್ಕಾಟ್ಲೆಂಡ್
ದುಬೈ
ಅ. 14
ನೆದರ್ಲೆಂಡ್ಸ್ vs ಓಮನ್
ದುಬೈ
ಅ. 18
ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್
ಅಬುಧಾಬಿ
ಅ. 18
ಅಫ್ಘಾನಿಸ್ತಾನ vs ಸೌಥ್ ಆಫ್ರಿಕಾ
ದುಬೈ
ಅ. 18
ಇಂಗ್ಲೆಂಡ್ vs ಪಾಕಿಸ್ತಾನ
ಅಬುಧಾಬಿ (TO)
ಅ. 18
ಭಾರತ vs ಆಸ್ಟ್ರೇಲಿಯಾ
ದುಬೈ
ಅ. 20
ಪಾಕಿಸ್ತಾನ vs ವೆಸ್ಟ್ ಇಂಡೀಸ್
ಅಬುಧಾಬಿ (TO)
ಅ. 20
ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ
ದುಬೈ
ಅ. 20
ಇಂಗ್ಲೆಂಡ್ vs ನ್ಯೂಜಿಲೆಂಡ್
ಅಬುಧಾಬಿ
ಅ. 20
ಭಾರತ vs ಸೌಥ್ ಆಫ್ರಿಕಾ
ದುಬೈ
ಭಾರತ ಈ ಟಿ20 ವಿಶ್ವಕಪ್ನಲ್ಲಿ ಸೂಪರ್-12 ಹಂತದಲ್ಲಿದೆ. ಒಟ್ಟು 16 ತಂಡಗಳು ಈ ವಿಶ್ವಕಪ್ನಲ್ಲಿ ಪಾಲ್ಗೊಂಡಿವೆ. ಟಿ20 ಕ್ರಿಕೆಟ್ನಲ್ಲಿ ಮೊದಲ ಎಂಟು ಶ್ರೇಯಾಂಕಿತ ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಕ್ವಾಲಿಫೈ ಆಗಿವೆ. ಇನ್ನುಳಿದ 8 ತಂಡಗಳು ಎರಡು ಗ್ರೂಪ್ಗಳಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆಯಲು ಸೆಣಸಲಿವೆ. ಪ್ರತೀ ಗುಂಪಿನಲ್ಲಿ ಎರಡು ತಂಡಗಳು ಸೂಪರ್-12 ಹಂತಕ್ಕೆ ತೇರ್ಗಡೆ ಆಗುತ್ತವೆ. ಈ ಗ್ರೂಪ್ ಹಂತದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳೂ ಇವೆ. ಗ್ರೂಪ್ ಹಂತದ ಪಂದ್ಯಗಳು ಅ. 17ರಿಂದ ಅ. 22ರವರೆಗೆ ನಡೆಯಲಿವೆ. ಅ. 23ರಿಂದ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತವೆ. ಅ. 24ರಂದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪಂದ್ಯ ಇದೆ.
ಇಲ್ಲಿದೆ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ:
ದಿನಾಂಕ
ಸಮಯ
ಪಂದ್ಯಗಳು
ಸ್ಥಳ
ಅ. 17
ಮಧ್ಯಾಹ್ನ 3:30
ಓಮನ್ vs ಪಪುವಾ ನ್ಯೂಗಿನಿಯಾ
ಮಸ್ಕಟ್
ಅ. 17
ಸಂಜೆ 7:30
ಬಾಂಗ್ಲಾದೇಶ vs ಸ್ಕಾಟ್ಲೆಂಡ್
ಮಸ್ಕಟ್
ಅ. 18
ಮಧ್ಯಾಹ್ನ 3:30
ಐರ್ಲೆಂಡ್ vs ನೆದರ್ಲೆಂಡ್ಸ್
ಅಬುಧಾಬಿ
ಅ. 18
ಸಂಜೆ 7:30
ನಮೀಬಿಯಾ vs ಶ್ರೀಲಂಕಾ
ಅಬುಧಾಬಿ
ಅ. 19
ಮಧ್ಯಾಹ್ನ 3:30
ಪಪುವಾ ನ್ಯೂಗಿನಿಯಾ vs ಸ್ಕಾಟ್ಲೆಂಡ್
ಮಸ್ಕಟ್
ಅ. 19
ಸಂಜೆ 7:30
ಓಮನ್ vs ಬಾಂಗ್ಲಾದೇಶ
ಮಸ್ಕಟ್
ಅ. 20
ಮಧ್ಯಾಹ್ನ 3:30
ನಮೀಬಿಯಾ vs ನೆದರ್ಲೆಂಡ್ಸ್
ಅಬುಧಾಬಿ
ಅ. 20
ಸಂಜೆ 7:30
ಐರ್ಲೆಂಡ್ vs ಶ್ರೀಲಂಕಾ
ಅಬುಧಾಬಿ
ಅ. 21
ಮಧ್ಯಾಹ್ನ 3:30
ಬಾಂಗ್ಲಾದೇಶ vs ಪಪುವಾ ನ್ಯೂಗಿನಿಯಾ
ಮಸ್ಕಟ್
ಅ. 21
ಸಂಜೆ 7:30
ಓಮನ್ vs ಸ್ಕಾಟ್ಲೆಂಡ್
ಮಸ್ಕಟ್
ಅ. 22
ಮಧ್ಯಾಹ್ನ 3:30
ಐರ್ಲೆಂಡ್ vs ನಮೀಬಿಯಾ
ಶಾರ್ಜಾ
ಅ. 22
ಸಂಜೆ 7:30
ನೆದರ್ಲೆಂಡ್ಸ್ vs ಶ್ರೀಲಂಕಾ
ಶಾರ್ಜಾ
ಅ. 23
ಮಧ್ಯಾಹ್ನ 3:30
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
ಅಬುಧಾಬಿ
ಅ. 23
ಸಂಜೆ 7:30
ಇಂಗ್ಲೆಂಡ್ vs ವೆಸ್ಟ್ ಇಂಡೀಸ್
ದುಬೈ
ಅ. 24
ಮಧ್ಯಾಹ್ನ 3:30
TBA vs TBA
ಶಾರ್ಜಾ
ಅ. 24
ಸಂಜೆ 7:30
ಭಾರತ vs ಪಾಕಿಸ್ತಾನ
ದುಬೈ
ಅ. 25
ಸಂಜೆ 7:30
ಆಫ್ಘಾನಿಸ್ತಾನ vs TBA
ಶಾರ್ಜಾ
ಅ. 26
ಮಧ್ಯಾಹ್ನ 3:30
ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್
ದುಬೈ
ಅ. 26
ಸಂಜೆ 7:30
ಪಾಕಿಸ್ತಾನ್ vs ನ್ಯೂಜಿಲೆಂಡ್
ಶಾರ್ಜಾ
ಅ. 27
ಮಧ್ಯಾಹ್ನ 3:30
ಇಂಗ್ಲೆಂಡ್ vs TBA
ಅಬುಧಾಬಿ
ಅ. 27
ಸಂಜೆ 7:30
TBA vs TBA
ಅಬುಧಾಬಿ
ಅ. 28
ಸಂಜೆ 7:30
ಆಸ್ಟ್ರೇಲಿಯಾ vs TBA
ದುಬೈ
ಅ. 29
ಮಧ್ಯಾಹ್ನ 3:30
ವೆಸ್ಟ್ ಇಂಡೀಸ್ vs TBA
ಶಾರ್ಜಾ
ಅ. 29
ಸಂಜೆ 7:30
ಅಫ್ಘಾನಿಸ್ತಾನ್ vs ಪಾಕಿಸ್ತಾನ್
ದುಬೈ
ಅ. 30
ಮಧ್ಯಾಹ್ನ 3:30
ದಕ್ಷಿಣ ಆಫ್ರಿಕಾ vs TBA
ಶಾರ್ಜಾ
ಅ. 30
ಸಂಜೆ 7:30
ಆಸ್ಟ್ರೇಲಿಯಾ vs ಇಂಗ್ಲೆಂಡ್
ದುಬೈ
ಅ. 31
ಮಧ್ಯಾಹ್ನ 3:30
ಅಫ್ಘಾನಿಸ್ತಾನ್ vs TBA
ಅಬುಧಾಬಿ
ಅ. 31
ಸಂಜೆ 7:30
ಭಾರತ vs ನ್ಯೂಜಿಲೆಂಡ್
ದುಬೈ
ನ. 1
ಸಂಜೆ 7:30
ಇಂಗ್ಲೆಂಡ್ vs TBA
ಶಾರ್ಜಾ
ನ. 2
ಮಧ್ಯಾಹ್ನ 3:30
ದಕ್ಷಿಣ ಆಫ್ರಿಕಾ vs TBA
ಅಬುಧಾಬಿ
ನ. 2
ಸಂಜೆ 7:30
ಪಾಕಿಸ್ತಾನ್ vs TBA
ಅಬುಧಾಬಿ
ನ. 3
ಮಧ್ಯಾಹ್ನ 3:30
ನ್ಯೂಜಿಲೆಂಡ್ vs TBA
ದುಬೈ
ನ. 3
ಸಂಜೆ 7:30
ಅಫ್ಘಾನಿಸ್ತಾನ್ vs ಭಾರತ
ಅಬುಧಾಬಿ
ನ. 4
ಮಧ್ಯಾಹ್ನ 3:30
ಆಸ್ಟ್ರೇಲಿಯಾ vs TBA
ದುಬೈ
ನ. 4
ಸಂಜೆ 7:30
ವೆಸ್ಟ್ ಇಂಡೀಸ್ vs TBA
ಅಬುಧಾಬಿ
ನ. 5
ಮಧ್ಯಾಹ್ನ 3:30
ನ್ಯೂಜಿಲೆಂಡ್ vs TBA
ಶಾರ್ಜಾ
ನ. 5
ಸಂಜೆ 7:30
ಭಾರತ vs TBA
ದುಬೈ
ನ. 6
ಮಧ್ಯಾಹ್ನ 3:30
ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್
ಅಬುಧಾಬಿ
ನ. 6
ಸಂಜೆ 7:30
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ
ಶಾರ್ಜಾ
ನ. 7
ಮಧ್ಯಾಹ್ನ 3:30
ಅಫ್ಘಾನಿಸ್ತಾನ್ vs ನ್ಯೂಜಿಲೆಂಡ್
ಅಬುಧಾಬಿ
ನ. 7
ಸಂಜೆ 7:30
ಪಾಕಿಸ್ತಾನ್ vs TBA
ಶಾರ್ಜಾ
ನ. 8
ಸಂಜೆ 7:30
ಭಾರತ vs TBA
ದುಬೈ
ನ. 10
ಸಂಜೆ 7:30
ಸೆಮಿಫೈನಲ್
ಅಬುಧಾಬಿ
ನ. 11
ಸಂಜೆ 7:30
ಸೆಮಿಫೈನಲ್
ದುಬೈ
ನ. 14
ಸಂಜೆ 7:30
ಫೈನಲ್
ದುಬೈ
ಭಾರತದ ಪಂದ್ಯಗಳು:
ಅ. 24: ಪಾಕಿಸ್ತಾನ
ಅ. 31: ನ್ಯೂಜಿಲೆಂಡ್
ನ. 3: ಅಫ್ಘಾನಿಸ್ತಾನ್
ನ. 5: TBA
ನ. 8: TBA
ಭಾರತ ಒಮ್ಮೆ ಮಾತ್ರ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತದ ಕೊನೆಯ ವಿಶ್ವಕಪ್ ಇದಾಗಿದೆ. ಈ ವಿಶ್ವಕಪ್ ಬಳಿಕ ನಾಯಕತ್ವ ಬಿಡುವುದಾಗಿ ವಿರಾಟ್ ಕೊಹ್ಲಿ ಹೇಳಿದ್ಧಾರೆ. ಹೀಗಾಗಿ, ಕೊಹ್ಲಿ ವೃತ್ತಿಜೀವನದಲ್ಲಿ ನಾಯಕನಾಗಿ ಒಂದಾದರೂ ವಿಶ್ವಕಪ್ಗೆ ಮುತ್ತಿಡುತ್ತಾರಾ ಎಂಬ ಕುತೂಹಲ ಇದೆ. ವೆಸ್ಟ್ ಇಂಡೀಸ್ ತಂಡ ಹಾಲಿ ಚಾಂಪಿಯನ್ ಅಷ್ಟೇ ಅಲ್ಲ, ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ಏಕೈಕ ತಂಡವೆನಿಸಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ