T20 World Cup 2021| 'ನಾನು 3ನೇ ಸ್ಥಾನದಲ್ಲೇ ಆಡುತ್ತೇನೆ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ'; ವಿರಾಟ್ ಕೊಹ್ಲಿ

Virat Kohli: ಭಾರತ ತಂಡ ಅಕ್ಟೋಬರ್​24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ತಂಡದ ಅಗ್ರ 6 ಬ್ಯಾಟ್ಸ್​ಗಳು ಯಾರು? ಎಂಬುದನ್ನು ನಾಯಕ ವಿರಾಟ್​ ಕೊಹ್ಲಿ ಖಚಿತಪಡಿಸಿಕೊಳ್ಳಬೇಕಿದೆ.

ರೋಹಿತ್ ಶರ್ಮಾ- ವಿರಾಟ್​ ಕೊಹ್ಲಿ .

ರೋಹಿತ್ ಶರ್ಮಾ- ವಿರಾಟ್​ ಕೊಹ್ಲಿ .

 • Share this:
  ಟಿ-20 ವಿಶ್ವಕಪ್​ (T20 World Cup) ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್​ (England) ವಿರುದ್ಧ ಭಾರತ (Team India) ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಬ್ಯಾಟಿಂಗ್​ಗೆ ಇಳಿದ ಕೆ.ಎಲ್​. ರಾಹುಲ್ (KL Rahul) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅರ್ಧ ಶತಕ ಗಳಿಸಿ ಗಮನ ಸೆಳೆದಿದ್ದರು. ಮತ್ತೊಂದು ಬದಿಯಲ್ಲಿ ಇಶಾನ್ ಕಿಶನ್ (Ishan Kishan) ಸಹ ತಾನೇಉ ಕಡಿಮೆ ಇಲ್ಲ ಎಂಬಂತೆ ಬ್ಯಾಟ್​ ಬೀಸಿದ್ದರು. ಆದರೆ, ಕಳೆದ ಹಲವು ದಿನಗಳಿಂದ ರೋಹಿತ್​ ಶರ್ಮಾ (Rohit Sharma) ಜೊತೆಗೆ ಟಿ20 ವಿಶ್ವಕಪ್​ನಲ್ಲಿ ಆರಂಭಿಕರಾಗಿ ಬ್ಯಾಟ್​ ಮಾಡುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗಿತ್ತು. ಕೆ.ಎಲ್. ರಾಹುಲ್ ಅಥವಾ ಇಶಾನ್ ಕಿಶನ್ ಈ ಇಬ್ಬರಲ್ಲಿ ಯಾರು? ಅರಂಭಿಕರು ಎಂಬ ಪ್ರಶ್ನೆ ಎದ್ದಿತ್ತು. ಒಂದು ಹಂತದಲ್ಲಿ ನಾಯಕ ವಿರಾಟ್​ ಕೊಹ್ಲಿ ತಾನೇ ಆರಂಭಿಕನಾಗಿ (Opening Batsman) ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದ್ದರು. ಆದರೆ, ಕೊನೆಗೂ ಈ ಪ್ರಶ್ನೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಸ್ವತಃ ವಿರಾಟ್​ ಕೊಹ್ಲಿ (Virat Kohli) ಉತ್ತರ ನೀಡಿದ್ದಾರೆ. 

  ಇಂಗ್ಲೆಂಡ್​ ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, "ನಾನು ಈ ವರ್ಷದ ಟಿ20 ವಿಶ್ವಕಪ್​ನಲ್ಲಿ ಇನ್ನಿಂಗ್ಸ್​ ಆರಂಭಿಸುವುದಿಲ್ಲ. ಬದಲಾಗಿ ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಲಿದ್ದು, ರೋಹಿತ್​ ಶರ್ಮಾ ಜೊತೆಗೆ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

  ತಂಡದ ಅಗ್ರ 6 ಬ್ಯಾಟ್ಸ್​ಮನ್​ಗಳು ಯಾರು?

  ಭಾರತ ತಂಡ ಅಕ್ಟೋಬರ್​24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ತಂಡದ ಅಗ್ರ 6 ಬ್ಯಾಟ್ಸ್​ಗಳು ಯಾರು? ಎಂಬುದನ್ನು ನಾಯಕ ವಿರಾಟ್​ ಕೊಹ್ಲಿ ಖಚಿತಪಡಿಸಿಕೊಳ್ಳಬೇಕಿದೆ. ಈ ಬಗೆಗಿನ ಪ್ರಶ್ನೆಗೆ ಉತ್ತರ ನೀಡಿರುವ ವಿರಾಟ್​ ಕೊಹ್ಲಿ, "ಐಪಿಎಲ್‌ಗಿಂತ ಮೊದಲು ವಿಷಯಗಳು ವಿಭಿನ್ನವಾಗಿದ್ದವು. ಆದರೆ, ಈಗ ಕೆ.ಎಲ್. ರಾಹುಲ್ ಅನ್ನು ಮೀರಿ ನೋಡುವುದು ಕಷ್ಟಕರವಾಗಿದೆ.

  ರೋಹಿತ್ ಶರ್ಮ ವಿಶ್ವ ದರ್ಜೆಯ ಆಟಗಾರ. ಅವರ ಜೊತೆಗೆ ಇನ್ನಿಂಗ್ಸ್​ ಆರಂಭಿಸುವವರು ರೋಹಿತ್​ಗೆ ಸರಿಯಾದ ಸಾಥ್ ನೀಡಬೇಕು. ಹೀಗಾಗಿ ಪ್ರಚಂಡ ಫಾರ್ಮ್​ನಲ್ಲಿರುವ ಕೆ.ಎಲ್. ರಾಹುಲ್ ಇದಕ್ಕೆ ಸರಿಯಾದ ಆಯ್ಕೆ. ರಾಹುಲ್ ಮತ್ತು ರೋಹಿತ್ ಇನ್ನಿಂಗ್ಸ್​ ಆರಂಭಿಸಲಿದ್ದು, ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿದ್ದೇನೆ" ಎಂದು ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

  ಕೆ.ಎಲ್​. ರಾಹುಲ್ ಈ ವರ್ಷ 14 ಐಪಿಎಲ್​ ಪಂದ್ಯಗಳಲ್ಲಿ 628 ರನ್​ ಗಳಿಸುವ ಮೂಲಕ ಐಪಿಎಲ್​ನಲ್ಲಿ ಅತಿಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅಧಿಕ ಸಂಖ್ಯೆಯ (30) ಸಿಕ್ಸ್​ ಭಾರಿಸಿದ ದಾಖಲೆ ಸಹ ಅವರ ಹೆಸರಿನಲ್ಲಿದೆ.

  ಇದನ್ನೂ ಓದಿ: ICC Rule: ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ 12 ಜನ ಒಂದೇ ತಂಡದಲ್ಲಿ ಆಡಬಹುದು ಹೇಗೆ ಗೊತ್ತಾ?

  ಪಾಕ್ ವಿರುದ್ಧದ ಪಂದ್ಯಕ್ಕೆ ತಯಾರಿ:

  ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಇಡೀ ತಂಡ ಸಂಪೂರ್ಣವಾಗಿ ತಯಾರಾಗಿದೆ. ಪಾಕ್ ತಂಡವನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ಈ ಪಂದ್ಯಕ್ಕೆ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಭಾರತ ಆಡಲಿದೆ. ಈ ಪಂದ್ಯ ಆಟಗಾರರು ಆಟಕ್ಕೆ ಕುದುರಿಕೊಳ್ಳಲು ಮತ್ತಷ್ಟು ಸಹಾಯ ಮಾಡುತ್ತದೆ. ಐಪಿಎಲ್​ ಈಗಾಗಲೇ ಭಾರತೀಯ ಆಟಗಾರರಿಗೆ ಸಾಕಷ್ಟು ಸಹಕಾರಿಯಾಗಿದೆ. ಐಪಿಎಲ್ ಅನುಭವವನ್ನು ನಾನು ಇಲ್ಲಿ ಪ್ರಯೋಗಕ್ಕೆ ಒಳಪಡಿಸಲಿದ್ದೇವೆ.

  ಇದನ್ನೂ ಓದಿ: ‘16ನೇ ವಯಸ್ಸಿಗೆ ಇಂಗ್ಲೆಂಡ್​ನಲ್ಲಿ ಶತಕಗಳನ್ನ ಭಾರಿಸುತ್ತಿದ್ದ ಈತ ಭಾರತ ತಂಡದಲ್ಲಿ ಇರಬೇಕಿತ್ತು’

  ಇನ್ನೂ ಪಾಕಿಸ್ತಾನದ ವಿರುದ್ಧ ವಿಶ್ವಕಪ್​ನಲ್ಲಿ ಭಾರತದ ದಾಖಲೆ ಉತ್ತಮವಾಗಿದೆ. ಪಾಕ್​ ವಿರುದ್ಧ ನಾನು ಈ ಹಿಂದೆ ಯಶಸ್ವಿಯಾಗಿದ್ದೇವೆ. ಆದ್ದರಿಂದ ನಾವು ಅದೇ ಸಾಮರ್ಥ್ಯದೊಂದಿಗೆ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದೇವೆ. 11 ಜನ ಆಟಗಾರರು ಒಟ್ಟಿಗೆ ಅಂಗಳಕ್ಕೆ ಇಳಿದ ನಂತರ ಗೆಲುವಿನ ಲೆಕ್ಕಾಚಾರ ಮಾಡುವುದು ನಮಗೆ ಮತ್ತಷ್ಟು ಬಲ ತುಂಬಲಿದೆ. ಭಾರತ ತಂಡದಲ್ಲಿ ಎಲ್ಲಾ ಆಟಗಾರರಿಗೂ ಆದ್ಯತೆ ನೀಡಲಿದ್ದು, ಎಲ್ಲರೂ ಅತ್ಯತ್ತಮ ಪ್ರದರ್ಶನ ನೀಡುವ ವಿಶ್ವಾಸವಿದ್ದು, ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿದೆ" ಎಂದು ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.
  Published by:MAshok Kumar
  First published: