T20 World Cup 2021: ಟಿ20 ವಿಶ್ವಕಪ್ ಟೂರ್ನಿ ಭಾರತದಿಂದ ಇನ್ನೊಂದು ದೇಶಕ್ಕೆ ಶಿಫ್ಟ್..?

ಸದ್ಯ ವಾಸಿಂ ಖಾನ್ ಹೇಳಿಕೆಗೆ ಬಿಸಿಸಿಐ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೊರೋನಾ ಲಸಿಕೆ ಮುಂದಿನ ವರ್ಷ ಭಾರತದಲ್ಲಿ ಲಭ್ಯವಾದರೆ ಮಾತ್ರ ಟಿ20 ವಿಶ್ವಕಪ್ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Team india

Team india

  • Share this:
    ಇಡೀ ಕ್ರಿಕೆಟ್​ ಪ್ರೇಮಿಗಳು 2021ರ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಎದುರು ನೋಡುತ್ತಿದೆ. ಮುಂದಿನ ವರ್ಷ ಅಕ್ಟೋಬರ್​ ತಿಂಗಳಲ್ಲಿ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನದಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ ಈ ಟೂರ್ನಿಗಾಗಿ ಸಿದ್ಧತೆಗಳು ಆರಂಭವಾಗಿದ್ದು, ಅದರ ಬೆನ್ನಲ್ಲೇ ಟಿ20 ವಿಶ್ವಕಪ್ ಭಾರತದಲ್ಲಿ ಅಲ್ಲ, ಬೇರೊಂದು ದೇಶದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಇಒ ವಾಸಿಂ ಖಾನ್‌ ಬಾಂಬ್ ಸಿಡಿಸಿದ್ದಾರೆ.

    ಹೌದು, ಭಾರತದಲ್ಲಿ ಕೊರೋನಾ ಸೋಂಕು ಎರಡನೇ ಹಂತದಲ್ಲಿ ಪರಸರಿಸಲು ಆರಂಭಿಸಿದ್ದು, ಹೀಗಾಗಿ ಮತ್ತಷ್ಟು ಹೊಸ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಐಸಿಸಿ ಟಿ20 ವಿಶ್ವಕಪ್​ನ್ನು ಭಾರತದ ಬದಲಿಗೆ ಯುಎಇ ದೇಶದಲ್ಲಿ ನಡೆಯಲಿದೆ. ಭಾರತದಲ್ಲಿ ಟೂರ್ನಿ ಆಯೋಜನೆಯ ಬಗ್ಗೆ ಯಾವುದೇ ಸ್ಫಷ್ಟತೆ ದೊರೆತಿಲ್ಲ. ಕೊರೋನಾ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಅಲ್ಲಿ ಆಡುವುದು ಆಟಗಾರರ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಾಸಿಂ ಖಾನ್ ಹೇಳಿದ್ದಾರೆ.

    ಇನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೂಡ ಟೂರ್ನಿಯನ್ನು ಹೊರ ದೇಶದಲ್ಲಿ ನಡೆಸುವಂತೆ ಈ ಹಿಂದೆ ಐಸಿಸಿಗೆ ಪತ್ರ ಬರೆದಿತ್ತು. ಭಾರತದಲ್ಲಿ ಆಡಲು ಪಾಕ್ ಆಟಗಾರರಿಗೆ ವೀಸಾ ಸಮಸ್ಯೆ ಉಂಟಾಗಬಹುದು. ಹೀಗಾಗಿ ಐಸಿಸಿ ಮತ್ತು ಬಿಸಿಸಿಐ ಪತ್ರದ ಮೂಲಕ ಭರವಸೆ ನೀಡಬೇಕೆಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿತ್ತು.

    ಸದ್ಯ ವಾಸಿಂ ಖಾನ್ ಹೇಳಿಕೆಗೆ ಬಿಸಿಸಿಐ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೊರೋನಾ ಲಸಿಕೆ ಮುಂದಿನ ವರ್ಷ ಭಾರತದಲ್ಲಿ ಲಭ್ಯವಾದರೆ ಮಾತ್ರ ಟಿ20 ವಿಶ್ವಕಪ್ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಏಕೆಂದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ನಡೆಯಬೇಕಿದ್ದ ಟಿ20 ಟೂರ್ನಿಯನ್ನು ಆಸ್ಟ್ರೇಲಿಯಾ 2022ಕ್ಕೆ ಮುಂದೂಡಿದೆ. ಹೀಗಾಗಿ ಮುಂದಿನ ವರ್ಷ ಚುಟುಕು ಕ್ರಿಕೆಟ್ ಟೂರ್ನಿ ನಡೆಸಲೇ ಬೇಕಾದ ಅನಿವಾರ್ಯತೆ ಕೂಡ ಬಿಸಿಸಿಐ ಮುಂದಿದೆ.

    ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
    Published by:zahir
    First published: