ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೊರೋನಾ ಕಾರಣದಿಂದ ಟೂರ್ನಿ ಆಯೋಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಹಿಂದೆ ಸರಿದಿದೆ. ಅದರಂತೆ 2022ರ ಆತಿಥ್ಯವು ಆಸ್ಟ್ರೇಲಿಯಾಗೆ ದೊರೆಯುವ ಸಾಧ್ಯತೆಯಿದ್ದು, 2021ರ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ ಎನ್ನಲಾಗಿದೆ.
ಈ ಹಿಂದೆ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಂದೂಡಿದ್ರೆ, ಮುಂದಿನ ವರ್ಷದ ಆತಿಥ್ಯದ ಹಕ್ಕು ನೀಡಬೇಕೆಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬೇಡಿಕೆಯಿರಿಸಿತ್ತು. ಆದರೆ ಕೊರೋನಾ ಕಾರಣದಿಂದ ಮುಂದೂಡಲ್ಪಡುತ್ತಿರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಿನ ವರ್ಷದ ವೇಳಾಪಟ್ಟಿಯನ್ನು ಬದಲಿಸಲು ಮುಂದಾಗಲಿಲ್ಲ.
ಹೀಗಾಗಿ 2021 ರ ಟಿ20 ಪಂದ್ಯಾವಳಿ ಭಾರತದಲ್ಲೇ ನಡೆಯಲಿದ್ದು, 2023 ಆತಿಥ್ಯವನ್ನು ಆಸ್ಟ್ರೇಲಿಯಾಗೆ ನೀಡಲಿದೆ ಎಂದು ತಿಳಿದು ಬಂದಿದೆ. ಟಿ 20 ವಿಶ್ವಕಪ್ ಮುಂದೂಡಿಕೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಆಯೋಜಿಸಲು ಬಿಸಿಸಿಐಗೆ ಸಮಯವಕಾಶ ಸಿಕ್ಕಂತಾಗಿದೆ. ಅದರಂತೆ ಸೆಪ್ಟೆಂಬರ್-ನವೆಂಬರ್‌ನಲ್ಲಿ ಯುಎಇನಲ್ಲಿ ಐಪಿಎಲ್ ನಡೆಯುವುದು ಬಹುತೇಕ ಖಚಿತವಾದಂತಾಗಿದೆ.
ಇನ್ನು 2023ರಲ್ಲಿ ಭಾರತದಲ್ಲಿ 50 ಓವರ್ ಪುರುಷರ ವಿಶ್ವಕಪ್ ಮಾರ್ಚ್ ಮತ್ತು ಅಕ್ಟೋಬರ್ ನಡುವೆ ಜರುಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಹಾಗೆಯೇ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಬಗ್ಗೆ ಮುಂದಿನ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
2021 ಪುರುಷರ ಟಿ 20 ವಿಶ್ವಕಪ್ ಪಂದ್ಯಾವಳಿ ನವೆಂಬರ್ 14 ರಂದು ಮುಕ್ತಾಯಗೊಳ್ಳಲಿದ್ದು, ಇಂಗ್ಲೆಂಡ್ ತಮ್ಮ ಆಶಸ್ ಸರಣಿಯನ್ನು ವರ್ಷಾಂತ್ಯದಲ್ಲಿ ಆಡಲಿದೆ ಎಂದು ಐಸಿಸಿ ತಿಳಿಸಿದೆ.
📂 Documents
— T20 World Cup (@T20WorldCup) July 20, 2020
└📁 T20 World Cup
└📁 Hope it doesn't come to this...
2️⃣0️⃣2️⃣0️⃣ ❌😞
The #T20WorldCup scheduled to take place in Australia this year has been officially postponed. pic.twitter.com/PZnzVOmW8T
ಮುಂದಿನ 3 ವರ್ಷ 3 ಟೂರ್ನಿ:
ಐಸಿಸಿಯ ನೂತನ ವೇಳಾಪಟ್ಟಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಮೂರು ದೊಡ್ಡ ಪಂದ್ಯಾವಳಿಗಳು ನಡೆಯಲಿದೆ. 2021ರಲ್ಲಿ ಐಸಿಸಿ ಟಿ 20 ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ನ. 14 ರಂದು ಜರುಗಲಿದೆ. ನಂತರ 2022 ರಲ್ಲಿ ಟಿ 20 ವಿಶ್ವಕಪ್ ನಡೆಯಲಿದ್ದು, ನ.13 ಫೈನಲ್ ದಿನಾಂಕ ನಿಗದಿ ಪಡಿಸಲಾಗಿದೆ. ಇದಾದ ಮರು ವರ್ಷ ಭಾರತದಲ್ಲಿ ಅಕ್ಟೋಬರ್-ನವೆಂಬರ್ ವೇಳೆ 2023 ರ ಏಕದಿನ ವಿಶ್ವಕಪ್ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ