T20 records- ಟಿ20 ಕ್ರಿಕೆಟ್​ನಲ್ಲಿ ಸೋಲೇ ಕಾಣದ 2 ತಂಡಗಳು; 10 ಇಂಟರೆಸ್ಟಿಂಗ್ ಸಂಗತಿಗಳು

Interesting T20 Facts- ಟಿ20 ಕ್ರಿಕೆಟ್ನಲ್ಲಿ ಹಲವು ಅಚ್ಚರಿಯ ದಾಖಲೆ ಮತ್ತು ವಿಷಯಗಳು ಅಡಗಿವೆ. ಸೋಲೇ ಕಾಣದ ಎರಡು ತಂಡಗಳು; ಅತಿ ಹೆಚ್ಚು ಪಂದ್ಯಗಳನ್ನ ಗೆದ್ದ ತಂಡ ಯಾವುದು? ಇಂಥ 10 ಸಂಗತಿಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಮತ್ತು ಪಾಕ್ ಬ್ಯಾಟರ್ಸ್

ವಿರಾಟ್ ಕೊಹ್ಲಿ ಮತ್ತು ಪಾಕ್ ಬ್ಯಾಟರ್ಸ್

  • Share this:
    ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳು ಬಂದಿವೆ. ಹೇಳಹೆಸರಿಲ್ಲದಂತಿದ್ದ ನಮೀಬಿಯಾ ಸೂಪರ್-12 ಹಂತಕ್ಕೆ ಲಗ್ಗೆ ಹಾಕಿ ಒಂದು ಪಂದ್ಯವನ್ನೂ ಗೆದ್ದಿದೆ. ಯಾವುದೇ ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಗೆಲುವೇ ಕಾಣದ ಪಾಕಿಸ್ತಾನ ಈ ವಿಶ್ವಕಪ್​ನಲ್ಲಿ ಅದನ್ನ ಸಾಧಿಸಿದೆ. ಹಾಲಿ ವಿಶ್ವ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ಸತತ ಎರಡು ಸೋಲು ಕಂಡು ಹೀನಾಯ ಸ್ಥಿತಿಯಲ್ಲಿ ಇದೆ. ಇದೇ ವೇಳೆ, ವಿಶ್ವಕಪ್ ಆಚೆ ಟಿ20 ಕ್ರಿಕೆಟ್​ನಲ್ಲಿ ಇನ್ನೂ ಹಲವು ಅಚ್ಚರಿಯ ಸಂಗತಿಗಳಿವೆ.

    ಟಿ20 ಕ್ರಿಕೆಟ್​ನಲ್ಲಿ ಕೆಲ ಕುತೂಹಲಕಾರಿ ಸಂಗತಿಗಳು:

    1) Argentina 5-0 record: ಅರ್ಜೆಂಟೀನಾ ತಂಡ ಫುಟ್ಬಾಲ್​ನಲ್ಲಿ ವಿಶ್ವದಲ್ಲೇ ಬಲಾಢ್ಯ. ಆದರೆ, ಟಿ20 ಕ್ರಿಕೆಟ್​ನಲ್ಲಿ ಇನ್ನೂ ಹಸುಳೆ. ಈ ಅರ್ಜೆಂಟೀನಾ ಕ್ರಿಕೆಟ್ ತಂಡದ ಹೆಸರಿನಲ್ಲಿ ವಿಶೇಷ ದಾಖಲೆ ಇದೆ. ಇದೂವರೆಗೆ ಐದು ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನ ಆಡಿರುವ ಅರ್ಜೆಂಟೀನಾ ಒಮ್ಮೆಯೂ ಸೋತಿಲ್ಲ. ಎಲ್ಲಾ ಐದು ಪಂದ್ಯಗಳನ್ನ ಗೆದ್ದಿದೆ.

    2) Belize 3-0 record: ಬೆಲೀಸ್ ಎಂಬುದು ವೆಸ್ಟ್ ಇಂಡೀಸ್​ನಂತೆ ಮಧ್ಯ ಅಮೆರಿಕದಲ್ಲಿರುವ ಕೆರಿಬಿಯನ್ ದೇಶವಾಗಿದೆ. ಇದೂ ಕೂಡ ಒಂದೂ ಟಿ20 ಪಂದ್ಯ ಸೋತಿಲ್ಲ. ಇದು ಆಡಿರುವ ಎಲ್ಲಾ 3 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನ ಗೆದ್ದು ಬೀಗಿದೆ. ಆದರೆ, ಅರ್ಜೆಂಟೀನಾ ಆಗಲೀ ಬೆಲೀಸ್ ಆಗಲೀ ಇನ್ನೂ ಪ್ರಬಲ ತಂಡಗಳನ್ನ ಎದುರಿಸಿಲ್ಲ ಎಂಬುದು ಬೇರೆ ಮಾತು.

    3) Pakistan: ವಿಶ್ವದಲ್ಲೇ ಅತಿ ಹೆಚ್ಚು ಟಿ20 ಪಂದ್ಯಗಳನ್ನ ಗೆದ್ದ ದೇಶ ಎಂದರೆ ಪಾಕಿಸ್ತಾನ. ಇದು ಆಡಿರುವ 179 ಅಂತರರಾಷ್ಟ್ರೀಯ ಪಂದ್ಯಗಳ ಪೈಕಿ 108ರಲ್ಲಿ ಗೆಲುವು ಪಡೆದಿದೆ. ಹಾಗೆಯೇ, ನೂರು ಟಿ20 ಪಂದ್ಯಗಳನ್ನ ಗೆದ್ದ ಮೊದಲ ರಾಷ್ಟ್ರ ಎಂಬ ದಾಖಲೆ ಪಾಕಿಸ್ತಾನಕ್ಕೆ ಖಾಯಂ ಆಗಿ ಅಂಟಿಕೊಳ್ಳುತ್ತದೆ. ವಿನಿಂಗ್ ಪರ್ಸೆಂಟೇಜ್ ಶೇ. 60.34.

    4) India: ಅತಿ ಹೆಚ್ಚು ಟಿ20 ಪಂದ್ಯಗಳನ್ನ ಗೆದ್ದ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ನಂತರದ ಸ್ಥಾನದಲ್ಲಿರುವುದು ಟೀಮ್ ಇಂಡಿಯಾ. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಆಡಿರುವ 146 ಪಂದ್ಯಗಳಲ್ಲಿ 89 ಪಂದ್ಯಗಳನ್ನ ಗೆದ್ದಿದೆ. ವಿನಿಂಗ್ ಪರ್ಸೆಂಟೇಜ್ ಶೇ. 61.

    5) Sri Lanka: ಟಿ20 ಪಂದ್ಯಗಳ ಗೆಲುವಿನಲ್ಲಿ ಪಾಕಿಸ್ತಾನ ಮತ್ತು ಭಾರತ ಟಾಪ್ ಆಗಿದ್ದರೆ, ಸೋಲಿನಲ್ಲಿ ಶ್ರೀಲಂಕಾ ತಂಡ ಮುಂದಿದೆ. ಇದು 144 ಪಂದ್ಯಗಳ ಪೈಕಿ 74 ಪಂದ್ಯಗಳಲ್ಲಿ ಸೋತಿದೆ.

    6) WI & BAN: ಅತಿ ಹೆಚ್ಚು ಟಿ20 ಪಂದ್ಯಗಳನ್ನ ಸೋತ ತಂಡಗಳ ಪಟ್ಟಿಯಲ್ಲಿ ಶ್ರೀಲಂಕಾ ನಂತರದ ಸ್ಥಾನ ಬಾಂಗ್ಲಾದೇಶ ಮತ್ತು ವೆಸ್ಟ್ ತಂಡಗಳಿವೆ. ಇವೆರಡೂ ಕೂಡ ತಲಾ 72 ಪಂದ್ಯಗಳಲ್ಲಿ ಸೋತಿವೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ಸ್ವಲ್ಪ ಕೆಳಗಿದೆ ಅಷ್ಟೇ.

    ಇದನ್ನೂ ಓದಿ: Ind vs Pak- ನಾನು ಕಂಡ ಅತ್ಯುತ್ತಮ ಎಸೆತಗಳವು: ಆ ಸೂಪರ್ ಓವರ್​ಗೆ ಹೇಡನ್ ಫುಲ್ ಮಾರ್ಕ್ಸ್

    7) First Match: ಟಿ20 ಕ್ರಿಕೆಟ್​ನ ಮೊತ್ತಮೊದಲ ಪಂದ್ಯ ನಡೆದದ್ದು 2006ರಲ್ಲಿ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯ ನಡೆಯಿತು. ಅ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿ ತನ್ನ ಹೆಸರಿಗೆ ದಾಖಲೆ ಬರೆಯಿತು.

    8) First T20 World Cup: ಮೊದಲ ಟಿ20 ವಿಶ್ವಕಪ್ ನಡೆದದ್ದು 2007ರಲ್ಲಿ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಎನಿಸಿತು. ಆಗಿನ್ನೂ ಭಾರತಕ್ಕೆ ಟಿ20 ಕ್ರಿಕೆಟ್ ಹೊಸದು. ಬೇರೆಡೆ ಪಂದ್ಯಗಳು ಚಾಲನೆಯಲ್ಲಿದ್ದರೂ ಭಾರತ ಈ ಚುಟುಕು ಕ್ರಿಕೆಟ್​ಗೆ ಬೇಗ ತೆರೆದುಕೊಳ್ಳಲಿಲ್ಲ. ಹೀಗಾಗಿ, 2007ರ ಟಿ20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಆಗುತ್ತೆ ಎಂದು ಯಾರೂ ಎಣಿಸಿರಲಿಲ್ಲ.

    9) Virat Kohli: ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಕಿಂಗ್ ಆಗಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಇವರ ರನ್ ಸರಾಸರಿ 50ಕ್ಕಿಂತ ಹೆಚ್ಚಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 91 ಪಂದ್ಯಗಳಿಂದ 3216 ರನ್ ಗಳಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಟಿ20 ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

    10) T20 World Cup 2021 official host- ಈ ಬಾರಿ ನಡೆಯುತ್ತಿರುವ ಟಿ20 ವಿಶ್ವಕಪ್ ಏಳನೆಯದ್ದಾಗಿದೆ. ಈ ವಿಶ್ವಕಪ್ ಯುಎಇಯಲ್ಲಿ ನಡೆಯುತ್ತಿದ್ದರೂ ಇದರ ಅಧಿಕೃತ ಆತಿಥೇಯ ದೇಶ ಭಾರತವೇ ಆಗಿದೆ. ಯಾಕೆಂದರೆ, ಭಾರತದಲ್ಲಿ ನಡೆಯಬೇಕಿದ್ದ ಈ ವಿಶ್ವಕಪ್ ಕೋವಿಡ್ ಕಾರಣಕ್ಕೆ ಯುಎಇಗೆ ಶಿಫ್ಟ್ ಆಗಿದೆ.
    Published by:Vijayasarthy SN
    First published: