ಒಂದೇ ಓವರ್​​ನಲ್ಲಿ ಹ್ಯಾಟ್ರಿಕ್ ಸೇರಿ 5 ವಿಕೆಟ್ ಕಿತ್ತ ಕರ್ನಾಟಕ ಬೌಲರ್; ದಾಖಲೆ ಬರೆದ ಅಭಿಮನ್ಯು

ಕರ್ನಾಟಕ 8 ವಿಕೆಟ್​ಗಳ ಗೆಲುವಿನೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮುತ್ತಿಕ್ಕಲು ಅಂತಿಮ ಘಟ್ಟಕೇರಿದೆ. ನಿನ್ನೆ ನಡೆದ ಮತ್ತೊಂದು ಸೆಮಿಫೈನಲ್​ನಲ್ಲಿ ರಾಜಸ್ಥಾನ ವಿರುದ್ಧ ತಮಿಳುನಾಡು ತಂಡ 7 ವಿಕೆಟ್​ಗಳ ಜಯ ಸಾಧಿಸಿದೆ.

Vinay Bhat | news18-kannada
Updated:November 30, 2019, 8:03 AM IST
ಒಂದೇ ಓವರ್​​ನಲ್ಲಿ ಹ್ಯಾಟ್ರಿಕ್ ಸೇರಿ 5 ವಿಕೆಟ್ ಕಿತ್ತ ಕರ್ನಾಟಕ ಬೌಲರ್; ದಾಖಲೆ ಬರೆದ ಅಭಿಮನ್ಯು
ಅಭಿಮನ್ಯು ಮಿಥುನ್
  • Share this:
ಬೆಂಗಳೂರು (ನ. 30): ಕರ್ನಾಟಕದ ಭರ್ಜರಿ ಫಾರಮ್ ನಾಕೌಟ್ ಹಂತದಲ್ಲೂ ಮುಂದುವರಿದಿದೆ. ಅಭಿಮನ್ಯು ಮಿಥುನ್ ಅವರ ಮಾರಕ ಬೌಲಿಂಗ್ ಹಾಗೂ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹರಿಯಾಣ ವಿರುದ್ಧ ಕರ್ನಾಟಕ ತಂಡ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್​ನಲ್ಲಿ 8 ವಿಕೆಟ್​ಗಳಿಂದ ಗೆಲುವು ಸಾಧಿಸಿ ಫೈನಲ್ ತಲುಪಿದೆ.

ಈ ನಡುವೆ ಪಂದ್ಯದ ಪ್ರಮುಖ ಹೈಲೈಟ್ ಆಗಿದ್ದು ಕರ್ನಾಟಕದ ಬೌಲರ್ ಅಭಿಮನ್ಯು ಮಿಥುನ್ ಒಂದೇ ಓವರ್​ನಲ್ಲಿ 5 ವಿಕೆಟ್ ಪಡೆದು ಅಪರೂಪದ ಸಾಧನೆ ಮಾಡಿದ್ದು. ಹರಿಯಾಣ ಬ್ಯಾಟಿಂಗ್​ನ ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಹಿತ ಐದು ವಿಕೆಟ್‌ ಕಿತ್ತು ದಾಖಲೆ ಮಾಡಿದರು.

 ಬಡವಾಗುತ್ತಿದೆ ಪಿಸಿಬಿ; ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್​ನ ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ!

ಮೊದಲ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ವಿಕೆಟ್ ಪಡೆದರೆ ಅಂತಿಮ ಎಸೆತದಲ್ಲೂ ವಿಕೆಟನ್ನು ಪಡೆದು ಹರಿಯಾಣವನ್ನು 194ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹರಿಯಾಣ ತಂಡದ ಹಿಮಾಂಶು ರಾಣಾ ಸೇರಿದಂತೆ ರಾಹುಲ್ ತಿವಾಟಿಯಾ, ಸುಮಿತ್ ಕುಮಾರ್, ಅಮಿತ್ ಮಿಶ್ರಾ, ಜಿತೇಶ್ ಸರೋಹಾ ಅವರನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗೆ ಅಟ್ಟಿದರು.

ಈ ಮೂಲಕ ಶ್ರೀಲಂಕಾದ ಲಸಿತ್​ ಮಲಿಂಗಾ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಪಂದ್ಯದಲ್ಲಿ ನಿರ್ಮಿಸಿದ್ದ ದಾಖಲೆ ಬ್ರೇಕ್​ ಮಾಡಿದರು. ಈ ಪಂದ್ಯದಲ್ಲಿ ಮಲಿಂಗಾ ಒಂದೇ ಓವರ್​​ನಲ್ಲಿ 4 ವಿಕೆಟ್​ ಪಡೆದುಕೊಂಡಿದ್ದರು. ಆದರೆ ಇದೀಗ ಮಿಥುನ್​ 5 ವಿಕೆಟ್​ ಪಡೆದುಕೊಂಡಿದ್ದಾರೆ.

ಕರ್ನಾಟಕ 8 ವಿಕೆಟ್​ಗಳ ಗೆಲುವಿನೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮುತ್ತಿಕ್ಕಲು ಅಂತಿಮ ಘಟ್ಟಕೇರಿದೆ. ನಿನ್ನೆ ನಡೆದ ಮತ್ತೊಂದು ಸೆಮಿಫೈನಲ್​ನಲ್ಲಿ ರಾಜಸ್ಥಾನ ವಿರುದ್ಧ ತಮಿಳುನಾಡು ತಂಡ 7 ವಿಕೆಟ್​ಗಳ ಜಯ ಸಾಧಿಸಿದೆ.

10 ವಿಕೆಟ್ ಕಿತ್ತ ಕಾರ್ನ್​ವಾಲ್​; ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್​ನಲ್ಲಿ ವಿಂಡೀಸ್​ಗೆ ಭರ್ಜರಿ ಜಯ

ಡಿಸೆಂಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಹಾಲಿ ಚಾಂಪಿಯನ್ ಕರ್ನಾಟಕ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಫೇವರಿಟ್ ಎನಿಸಿದೆ.ಕರ್ನಾಟಕ-ಹರಿಯಾಣ ಸ್ಕೋರು ವಿವರ:

ಹರಿಯಾಣ 20 ವರ್ 194/8

(ಹಿಮಾಂಶು ರಾಣಾ 61, ಚೈತನ್ಯ ಬಿಷ್ಣೋಯ್ 55, ಹರ್ಷಲ್ ಪಟೇಲ್ 34, ರಾಹುಲ್ ತೆವಾಟಿಯಾ 32 ರನ್ – ಅಭಿಮನ್ಯು ಮಿಥುನ್ 39/5, ಶ್ರೇಯಸ್ ಗೋಪಾಲ್ 23/2)

ಕರ್ನಾಟಕ 15 ಓವರ್ 195/2

(ದೇವದತ್ ಪಡಿಕ್ಕಲ್ 87, ಕೆಎಲ್ ರಾಹುಲ್ 66, ಮಯಂಕ್ ಅಗರ್ವಾಲ್ ಅಜೇಯ 30 ರನ್)
First published: November 30, 2019, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading