HOME » NEWS » Sports » CRICKET SYED MUSHTAQ ALI TROPHY TOURNAMENT DETAILS OF GROUPS AND TEAMS SNVS

Syed Mushtaq Ali Trophy: ಸಯದ್ ಮುಷ್ತಾಕ್ ಅಲಿ ಟಿ20: ಚಾಂಪಿಯನ್ ಕರ್ನಾಟಕದ ಎದುರಾಳಿಗಳು ಯಾರು?

ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಇಲೈಟ್ ಎ ಗುಂಪಿನಲ್ಲಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ರೈಲ್ವೇಸ್ ಈ ಗುಂಪನಲ್ಲಿರುವ ಪ್ರಮುಖ ಎದುರಾಳಿಗಳು. ಹಾಗೆಯೇ, ಜಮ್ಮು-ಕಾಶ್ಮೀರ ಮತ್ತು ತ್ರಿಪುರಾ ತಂಡಗಳೂ ಇದೇ ಗುಂಪಿನಲ್ಲಿವೆ.

news18
Updated:December 18, 2020, 8:03 AM IST
Syed Mushtaq Ali Trophy: ಸಯದ್ ಮುಷ್ತಾಕ್ ಅಲಿ ಟಿ20: ಚಾಂಪಿಯನ್ ಕರ್ನಾಟಕದ ಎದುರಾಳಿಗಳು ಯಾರು?
Cricket
  • News18
  • Last Updated: December 18, 2020, 8:03 AM IST
  • Share this:
ಬೆಂಗಳೂರು: ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಇದೇ ಜನವರಿ 10ರಿಂದ 31ರವರೆಗೆ ನಡೆಯಲಿದೆ. ದೇಶೀಯ ಟಿ20 ಟೂರ್ನಿಯಾದ ಇದರಲ್ಲಿ ದೇಶದ ವಿವಿಧ ರಾಜ್ಯಗಳ 38 ತಂಡಗಳು ಹಣಾಹಣಿ ನಡೆಸಲಿವೆ. ಒಟ್ಟು ಆರು ಗುಂಪುಗಳನ್ನ ರಚಿಸಲಾಗಿದೆ. ಮೇಲಿನ ಹಂತದ ಐದು ಇಲೈಟ್ ಗುಂಪು ಹಾಗೂ ಕೆಳಗಿನ ಹಂತದ ಒಂದು ಪ್ಲೇಟ್ ಗುಂಪು. ಕರ್ನಾಟಕ ತಂಡ ಇಲೈಟ್ ವಿಭಾಗದ ಎ ಗುಂಪಿನಲ್ಲಿದೆ. ಎ ಗುಂಪಿನ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುತ್ತವೆ. ಕರ್ನಾಟಕದ ಪಂದ್ಯಗಳನ್ನ ಕಣ್ತುಂಬಿಸಿಕೊಳ್ಳುವ ಸದವಕಾಶ ಬೆಂಗಳೂರಿಗರಿಗೆ ಸಿಕ್ಕಿದೆ. ಜನವರಿ 26ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ.

ಬೆಂಗಳೂರು ಅಲ್ಲದೆ ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ ಮತ್ತು ಚೆನ್ನೈನಲ್ಲಿಯೂ ಪ್ರತ್ಯೇಕ ಗುಂಪುಗಳ ಪಂದ್ಯಗಳು ನಡೆಯುತ್ತವೆ. ಪ್ಲೇಟ್ ವಿಭಾಗದ ಪಂದ್ಯಗಳು ಚೆನ್ನೈನಲ್ಲಿಯೇ ನಡೆಯಲಿವೆ. ಆದರೆ, ತಮಿಳುನಾಡು ಇರುವ ಬಿ ಗುಂಪಿನ ಎಲ್ಲಾ ಪಂದ್ಯಗಳು ಕೋಲ್ಕತಾದಲ್ಲಿ ನಡೆಯಲಿವೆ. ಹೀಗಾಗಿ ತಮಿಳುನಾಡಿಗೆ ತವರಿನಲ್ಲಿ ಆಡುವ ಅವಕಾಶ ಕೈತಪ್ಪಿದೆ. ಫೈನಲ್ ಸೇರಿದಂತೆ ನಾಕೌಟ್ ಪಂದ್ಯಗಳು ಅಹ್ಮದಾಬಾದ್​ನ ಮೊಟೇರಾದಲ್ಲಿ ನಡೆಯುತ್ತವೆ. 2015ರ ನಂತರ ಇಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಲಿದೆ.

ಎಲ್ಲಾ 38 ತಂಡಗಳ ಆಟಗಾರರು ಮತ್ತು ಸಿಬ್ಬಂದಿಗೆ ಟೂರ್ನಿ ಆರಂಭಕ್ಕೆ ಮುನ್ನ ಮೂರು ಸುತ್ತುಗಳ ಕೋವಿಡ್ ಪರೀಕ್ಷೆ ಇರುತ್ತದೆ. ಜನವರಿ 2, 4 ಮತ್ತು 6ರಂದು ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಆ ನಂತರವಷ್ಟೇ ಟ್ರೈನಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ಗ್ರೂಪ್ ಹಂತದ ಪಂದ್ಯಗಳು ಮುಗಿದ ಬಳಿಕ ನಾಕೌಟ್ ಶುರುವಾಗುವ ಮುನ್ನ ಜನವರಿ 20 ಮತ್ತು 22ರಂದು ಇನ್ನೆರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ.

ಇದನ್ನೂ ಓದಿ: Mohammad Amir: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

ಹಾಲಿ ಟಿ20 ಚಾಂಪಿಯನ್ ಕರ್ನಾಟಕ ತಂಡ ತನ್ನ ಮೊದಲ ಪಂದ್ಯವನ್ನ ಜಮ್ಮು-ಕಾಶ್ಮೀರ ವಿರುದ್ಧ ಆಡಲಿದೆ. ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್ ಮತ್ತು ತ್ರಿಪುರಾ ರಾಜ್ಯ ತಂಡಗಳು ಇದೇ ಎ ಗುಂಪಿನಲ್ಲಿವೆ.

ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ವಿವರ:
ಟೂರ್ನಿ ಆರಂಭ: ಜನವರಿ 10ಕ್ವಾರ್ಟರ್​ಫೈನಲ್: ಜನವರಿ 26 ಮತ್ತು 27
ಸೆಮಿಫೈನಲ್: ಜನವರಿ 29
ಫೈನಲ್: ಜನವರಿ 31

ಗ್ರೂಪ್​ಗಳು:

ಇಲೈಟ್ ಎ ಗುಂಪು: ಕರ್ನಾಟಕ, ಜಮ್ಮು-ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್, ತ್ರಿಪುರಾ (ಬೆಂಗಳೂರಿನಲ್ಲಿ ಎಲ್ಲಾ ಪಂದ್ಯಗಳು ನಡೆಯುತ್ತವೆ)

ಇಲೈಟ್ ಬಿ ಗುಂಪು: ಬಂಗಾಳ, ಒಡಿಶಾ, ಜಾರ್ಖಂಡ್, ತಮಿಳುನಾಡು, ಅಸ್ಸಾಮ್ ಮತ್ತು ಹೈದರಾಬಾದ್ (ಕೋಲ್ಕತಾದಲ್ಲಿ ಪಂದ್ಯಗಳು)

ಇಲೈಟ್ ಸಿ ಗುಂಪು: ಗುಜರಾತ್, ಮಹಾರಾಷ್ಟ್ರ, ಛತ್ತೀಸ್​ಗಡ, ಹಿಮಾಚಲ ಪ್ರದೇಶ, ಬರೋಡಾ, ಉತ್ತರಾಖಂಡ್ (ವಡೋದರಾದಲ್ಲಿ ಪಂದ್ಯಗಳು)

ಇಲೈಟ್ ಡಿ ಗುಂಪು: ಮಧ್ಯ ಪ್ರದೇಶ, ಸರ್ವಿಸಸ್, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ ಮತ್ತು ಗೋವಾ (ಇಂದೋರ್​ನಲ್ಲಿ ಪಂದ್ಯಗಳು)

ಇಲೈಟ್ ಇ ಗುಂಪು: ಮುಂಬೈ, ಹರಿಯಾಣ, ಆಂಧ್ರ ಪ್ರದೇಶ, ದೆಹಲಿ, ಕೇರಳ ಮತ್ತು ಪುದುಚೇರಿ. (ಮುಂಬೈನಲ್ಲಿ ಪಂದ್ಯಗಳು)

ಪ್ಲೇಟ್ ಗುಂಪು: ಚಂಡೀಗಡ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಮ್, ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶ. (ಚೆನ್ನೈನಲ್ಲಿ ಈ ಗುಂಪಿನ ಎಲ್ಲಾ ಪಂದ್ಯಗಳು ನಡೆಯುತ್ತವೆ.)
Published by: Vijayasarthy SN
First published: December 18, 2020, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories