Syed Mushtaq Ali Trophy: ಪಾಂಡೆ ಆರ್ಭಟಕ್ಕೆ ತಲೆಬಾಗಿದ ಸರ್ವಿಸಸ್ ; ಅಗ್ರಸ್ಥಾನಕ್ಕೇರಿದ ಕರ್ನಾಟಕ ತಂಡ

ಮನೀಶ್ ಪಾಂಡೆ ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಹಾಗೂ 10 ಅಮೋಘ ಸಿಕ್ಸ್ ಸಿಡಿಸಿ ಅಜೇಯ 129 ರನ್ ಚಚ್ಚಿದರು. ಕರ್ನಾಟಕ ತಂಡ ಕಲೆಹಾಕಿದ ಈ ರನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.

Vinay Bhat | news18-kannada
Updated:November 12, 2019, 3:51 PM IST
Syed Mushtaq Ali Trophy: ಪಾಂಡೆ ಆರ್ಭಟಕ್ಕೆ ತಲೆಬಾಗಿದ ಸರ್ವಿಸಸ್ ; ಅಗ್ರಸ್ಥಾನಕ್ಕೇರಿದ ಕರ್ನಾಟಕ ತಂಡ
ಮನೀಶ್ ಪಾಂಡೆ
  • Share this:
ಬೆಂಗಳೂರು (ನ. 12): ವೈಜಾಗ್​ನಲ್ಲಿ ನಡೆದ 2019-20ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ-20 ಟೂರ್ನಮೆಂಟ್​ನಲ್ಲಿ ಕರ್ನಾಟಕ ಭರ್ಜರಿ ಆಟವಾಡುತ್ತಿದೆ. ಇಂದು ನಡೆದ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬೃಹತ್ ಅಂತರದ ಗೆಲುವು ಸಾಧಿಸಿದೆ. ನಾಯಕ ಮನೀಶ್ ಪಾಂಡೆ ಸ್ಫೋಟಕ ಆಟದ ನೆರವಿನಿಂದ ರಾಜ್ಯ ತಂಡ 80 ರನ್​ಗಳಿಂದ ಜಯಿಸಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ಮೊದಲ ಓವರ್​ನಲ್ಲೇ ರೋಹನ್ ಕದಮ್(4) ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ನಾಯಕ ಮನೀಶ್ ಪಾಂಡೆ ಆಟ. 238.89 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ ಪಾಂಡೆ ಎದುರಾಳಿ ಬೌಲರ್​ಗಳ ಮೈಚಳಿ ಬಿಡಿಸಿದರು.

 



ಚೆಂಡನ್ನು ಬೌಂಡರಿ- ಸಿಕ್ಸರ್​ಗೆ ಅಟ್ಟಿದ ಪಾಂಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರಿಗೆ ಕಳೆದ ಪಂದ್ಯದಲ್ಲಿ ಮಿಂಚಿದ್ದ ದೇವದತ್ ಪಡಿಕ್ಕಲ್ ಭರ್ಜರಿ ಸಾತ್ ನೀಡಿದರು. ಮನಬಂದಂತೆ ಆಟವಾಡಿದ ಪಾಂಡೆ ಶತಕ ಸಿಡಿಸಿ ಆರ್ಭಟಿಸಿದರು. 2ನೇ ವಿಕೆಟ್​ಗೆ ದೇವದತ್ ಹಾಗೂ ಪಾಂಡೆ 167 ರನ್​ಗಳ ಅಮೋಘ ಜೊತೆಯಾಟ ಆಡಿದರು.

ಕೊಹ್ಲಿ-ರೋಹಿತ್ ಅಲ್ಲ; 2019ರಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಟೀಂ ಇಂಡಿಯಾದ ಈ 3 ಆಟಗಾರರು!

ಪಟಿಕ್ಕಲ್ 43 ಎಸೆತಗಳಲ್ಲಿ 75 ರನ್ ಗಳಿಸಿ ಔಟ್ ಆದರು. ಬಳಿಕ ಕೃಷ್ಣಪ್ಪ ಗೌಥಮ್(23) ಜೊತೆಗೂಡಿದ ಪಾಂಡೆ ತಮ್ಮ ಬಿರುಸಿನ ಆಟ ಮುಂದುವರೆಸಿದರು. ಪಾಂಡೆ ಅವರ ಅತ್ಯುತ್ತಮ ಶತಕದ ನೆರವಿನಿಂದ ಕರ್ನಾಟಕ ತಂಡ 20 ಓವರ್​ಗೆ 3 ವಿಕೆಟ್ ಕಳೆದುಕೊಂಡು 250 ರನ್ ಕಲೆಹಾಕಿದೆ.

ಮನೀಶ್ ಪಾಂಡೆ ಕೇವಲ 54 ಎಸೆತಗಳಲ್ಲಿ 12 ಬೌಂಡರಿ ಹಾಗೂ 10 ಅಮೋಘ ಸಿಕ್ಸ್ ಸಿಡಿಸಿ ಅಜೇಯ 129 ರನ್ ಚಚ್ಚಿದರು. ಕರ್ನಾಟಕ ತಂಡ ಕಲೆಹಾಕಿದ ಈ ರನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.

IND vs BAN: ವಿರಾಟ್ ಕೊಹ್ಲಿಗೆ ತಲೆನೋವು ಶುರುವಾಗಿದೆ ಎಂದ ರೋಹಿತ್ ಶರ್ಮಾ

ಇತ್ತ ಕರ್ನಾಟಕ ನೀಡಿದ್ದ 251 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಸರ್ವಿಸಸ್ ತಂಡದ ಪರ ರವಿ ಚೌಹಾಣ್(54) ಹಾಗೂ ನಾಯಕ ರಜತ್ ಪಲಿವಾಲ್ (46*) ಬ್ಯಾಟ್ ಬೀಸಿದ್ದು ಬಿಟ್ಟರೆ ಅನ್ಶುಲ್ ಗುಪ್ತಾ 29 ರನ್​ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟ್ಸ್​ಮನ್​ಗಳು ಅಬ್ಬರಿಸುವಲ್ಲಿ ವಿಫಲರಾದರು.

ಶ್ರೇಯಸ್ ಗೋಪಾಲ್ ಸ್ಪಿನ್ ಜಾದುವಿಗೆ ನಲುಗಿದ ಸರ್ವಿಸಸ್ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್ ಗಳನ್ನಷ್ಟೆ ಗಳಿಸಲು ಶಕ್ತವಾಗಿ ಸೋಲೊಪ್ಪಿಗೊಂಡಿತು. ಕರ್ನಾಟಕ ಪರ ಗೋಪಾಲ್ 5 ವಿಕೆಟ್ ಕಿತ್ತರೆ, ಕೃಷ್ಣಪ್ಪ ಗೌಥಮ್ ಹಾಗೂ ವಿ ಕೌಶಿಕ್ ತಲಾ 1 ವಿಕೆಟ್ ಪಡೆದರು.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋತು ಮೂರರಲ್ಲಿ ಗೆದ್ದು ಬೀಗಿರುವ ರಾಜ್ಯ ತಂಡ ಒಟ್ಟು 12 ಅಂಕದೊಂದಿಗೆ ಗ್ರೂಪ್ ಎ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದೆ. ನವೆಂಬರ್ 15 ರಂದು ಬಿಹಾರ್ ವಿರುದ್ಧ ಕೋಲ್ಕತ್ತಾದಲ್ಲಿ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನಾಡಲಿದೆ.

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading