48 ಗಂಟೆಯೊಳಗೆ ಎರಡನೇ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ದೀಪಕ್ ಚಹಾರ್!

ಚಹಾರ್‌, 13ನೇ ಓವರ್‌ನಲ್ಲಿ ವಿದರ್ಭ ತಂಡದ ದರ್ಶನ್‌ ನಲ್ಕಂಡೆ, ಶ್ರೀಕಾಂತ್‌ ವಾಘ್‌ ಮತ್ತು ಅಕ್ಷಯ್‌ ವಾಡ್ಕರ್‌ ಅವರನ್ನು ಔಟ್‌ ಮಾಡುವ ಮೂಲಕ ಎರಡು ದಿನಗಳ ಅಂತರದಲ್ಲಿ 2ನೇ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದರು.

Vinay Bhat | news18-kannada
Updated:November 13, 2019, 8:03 AM IST
48 ಗಂಟೆಯೊಳಗೆ ಎರಡನೇ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ದೀಪಕ್ ಚಹಾರ್!
ದೀಪಕ್ ಚಹಾರ್
  • Share this:
ಬೆಂಗಳೂರು (ನ. 13): ಭಾನುವಾರವಷ್ಟೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಸಾಧನೆ ಮಾಡಿದ್ದ ದೀಪಕ್ ಚಹಾರ್ 48 ಗಂಟೆಗಳ ಅಂತರದಲ್ಲಿಯೇ ಇನ್ನೊಂದು ಹ್ಯಾಟ್ರಿಕ್ ಪಡೆದು ಮಿಂಚಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ-20 ಪಂದ್ಯದಲ್ಲಿ ರಾಜಸ್ಥಾನ್ ಪರ ಆಡುತ್ತಿರುವ ದೀಪಕ್ ವಿದರ್ಭ ವಿರುದ್ಧ ಮಾರಕ ದಾಳಿ ಸಂಘಟಿಸಿದರು. ಕೇವಲ 18 ರನ್​ಗೆ 4 ವಿಕೆಟ್ ಕಿತ್ತ ಚಹಾರ್ ಮತ್ತೊಂದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಮಳೆ ಕಾರಣ 13 ಓವರ್​ಗಳಿಗೆ ಸೀಮಿತಗೊಳಿಸಿದ್ದ ಪಂದ್ಯದಲ್ಲಿ ವಿದರ್ಭ ತಂಡ 9 ವಿಕೆಟ್‌ಗೆ 99 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಆದರೆ, ಗುರಿ ಬೆನ್ನತ್ತಿದ ರಾಜಸ್ಥಾನ ತಂಡ 98 ರನ್‌ ಗಳನ್ನಷ್ಟೆ ಕಲೆಹಾಕಿ ಕೇವಲ 1 ರನ್‌ ಅಂತರದಲ್ಲಿ ವೀರೋಚಿತ ಸೋಲು ಕಂಡಿತು.

Syed Mushtaq Ali Trophy: ಪಾಂಡೆ ಆರ್ಭಟಕ್ಕೆ ತಲೆಬಾಗಿದ ಸರ್ವಿಸಸ್ ; ಅಗ್ರಸ್ಥಾನಕ್ಕೇರಿದ ಕರ್ನಾಟಕ ತಂಡ

ಚಹಾರ್‌, 13ನೇ ಓವರ್‌ನಲ್ಲಿ ವಿದರ್ಭ ತಂಡದ ದರ್ಶನ್‌ ನಲ್ಕಂಡೆ, ಶ್ರೀಕಾಂತ್‌ ವಾಘ್‌ ಮತ್ತು ಅಕ್ಷಯ್‌ ವಾಡ್ಕರ್‌ ಅವರನ್ನು ಔಟ್‌ ಮಾಡುವ ಮೂಲಕ ಎರಡು ದಿನಗಳ ಅಂತರದಲ್ಲಿ 2ನೇ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದರು.

ಬಾಂಗ್ಲಾ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ದೀಪಕ್ ಚಹಾರ್ 3.2 ಓವರ್ ಬೌಲಿಂಗ್ ಮಾಡಿ ಕೇವಲ 7 ರನ್ ನೀಡಿ ಬಾಂಗ್ಲಾದ 6 ವಿಕೆಟ್ ಕಬಳಿಸಿದರು.

ಹ್ಯಾಟ್ರಿಕ್ ವಿಕೆಟ್ ಕಿತ್ತ ದೀಪಕ್ ಚಹಾರ್ ತಂಗಿ ಯಾರು ಗೊತ್ತಾ?; ಇಲ್ಲಿದೆ ಅಚ್ಚರಿ ವಿಚಾರಜೊತೆಗೆ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಮೂಲಕ 2019ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪುರುಷ ಕ್ರಿಕೆಟ್​ನ ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಂಡರು.

 

First published: November 13, 2019, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading