Uttar Pradesh vs Karnataka: ಶ್ರೇಯಸ್ ಭರ್ಜರಿ ಆಟ: ಕರ್ನಾಟಕಕ್ಕೆ ರೋಚಕ ಜಯ: ನಾಕೌಟ್ ಹಂತಕ್ಕೇರಿದ ಹಾಲಿ ಚಾಂಪಿಯನ್

ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ರೋಹನ್ ಕದಮ್(5) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ದೇವದತ್ ಪಡಿಕ್ಕಲ್(34) ಹಾಗೂ ನಾಯಕ ಶ್ರೇಯಸ್ ಅಯ್ಯರ್(21) ಕೊಂಚ ಚೇತರಿಕೆ ನೀಡಿದರು.

Shreays Gopal

Shreays Gopal

 • Share this:
  ಆಲೂರು (ಜ. 18): 2021ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ  ಟಿ-20 ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ನಾಕೌಟ್ ಹಂತಕ್ಕೇರಿದೆ. ಇಲ್ಲಿನ ಕೆಎಸ್​​ಸಿಎ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧ 5 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಶ್ರೇಯಸ್ ಗೋಪಾಲ್ ಅವರ ಸ್ಫೋಟಕ ಆಟದ ನೆರವಿನಿಂದ ರಾಜ್ಯ ತಂಡ ಕೊನೆಯ ಓವರ್​ನಲ್ಲಿ ಗೆಲುವು ತನ್ನದಾಗಿಸಿತು.

  ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಉ. ಪ್ರದೇಶ ಭರ್ಜರಿ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್​ಗಳಾದ ಅಭಿಷೇಕ್ ಗೋಸ್ವಾಮಿ 32 ಎಸೆತಗಳಲ್ಲಿ 47 ಹಾಗೂ ಕರಣ್ ಶರ್ಮಾ 29 ಎಸೆತಗಳಲ್ಲಿ 41 ರನ್ ಬಾರಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ದಾಟಲಿಲ್ಲ. ನಾಯಕ ಪ್ರಿಯಂ ಗರ್ಗ್​ ಕೂಡ ವೈಫಲ್ಯ ಅನುಭವಿಸಿ 6 ರನ್​ಗೆ ಔಟ್ ಆದರು.

  ಠಾಕೂರ್-ಸಿರಾಜ್ ಮಾರಕ ದಾಳಿಗೆ ಆಸೀಸ್ ಆಲೌಟ್: ಭಾರತಕ್ಕೆ 328 ರನ್​ಗಳ ಟಾರ್ಗೆಟ್

  ಪರಿಣಾಮ ಉತ್ತರ ಪ್ರದೇಶ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತಷ್ಟೆ. ಕರ್ನಾಟಕ ಪರ ಜಗದೀಶ್ ಸುಚಿತ್ ಹಾಗೂ ಪ್ರವೀಣ್ ದುಬೆ ತಲಾ 3 ವಿಕೆಟ್ ಕಿತ್ತು ಮಿಂಚಿದರು.

  ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ರೋಹನ್ ಕದಮ್(5) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ದೇವದತ್ ಪಡಿಕ್ಕಲ್(34) ಹಾಗೂ ನಾಯಕ ಶ್ರೇಯಸ್ ಅಯ್ಯರ್(21) ಕೊಂಚ ಚೇತರಿಕೆ ನೀಡಿದರು. ಕೆ. ಎಲ್ ಶ್ರೀಜಿತ್ ಸೊನ್ನೆ ಸುತ್ತಿದರು.

  ಅನಿರುದ್ಧ ಜೋಷಿ 32 ಎಸೆತಗಳಲ್ಲಿ 21 ರನ್ ಗಳಿಸಿ ಔಟ್ ಆದರು. ಆದರೆ, ಇತ್ತ ಶ್ರೇಯಸ್ ಗೋಪಾಲ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆರಂಭದಿಂದ ಬಿರುಸಿನ ಆಟದ ಮೊರೆಹೋದ ಗೋಪಾಲ್ ತಂಡದ ಗೆಲುವನ್ನು ಹತ್ತಿರ ಮಾಡಿದರು. ಪರಿಣಾಮ ಕೊನೆಯ 2 ಓವರ್​ನಲ್ಲಿ ಗೆಲ್ಲಲು 19 ರನ್​ಗಳ ಅವಶ್ಯತೆಯಿತ್ತು.

  B S Chandrasekhar: ಭಾರತದ ಸ್ಪಿನ್ ಮಾಂತ್ರಿಕ ಕನ್ನಡಿಗ ಬಿಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

  ಅದ್ಭುತ ಬ್ಯಾಟಿಂಗ್ ನಡೆಸಿದ ಗೋಪಾಲ್ ಕೇವಲ 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 47 ರನ್ ಸಿಡಿಸಿ ಇನ್ನೂ 3 ಎಸೆತ ಬಾಕಿಇರುವಂತೆ ತಂಡಕ್ಕೆ ಗೆಲುವು ತಂದಿಟ್ಟರು. ಈ ಮೂಲಕ 5 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಕರ್ನಾಕಟ ತಂಡ ನಾಕೌಟ್ ಹಂತ ತಲುಪಿದೆ.
  First published: