news18-kannada Updated:January 12, 2021, 12:42 PM IST
S Sreesanth
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಕೇರಳ ವೇಗಿ ಎಸ್. ಶ್ರೀಶಾಂತ್, ಇದೀಗ ಮತ್ತೆ ಕ್ರಿಕೆಟ್ಗೆ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡದ ಪರ ಶ್ರೀಶಾಂತ್ ಕಣಕ್ಕಿಳಿದಿದ್ದು, ಸುದೀರ್ಘ 7 ವರ್ಷಗಳ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ವಿಶೇಷ ಎಂದರೆ ತಾನು ಆಡಿದ ಮೊದಲ ಪಂದ್ಯದಲ್ಲೇ ಶ್ರೀಶಾಂತ್ ವಿಕೆಟ್ ಕಿತ್ತು ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೇರಳ ಹಾಗೂ ಪುದುಚೆರಿ ತಂಡಗಳ ಮಧ್ಯೆ ನಡೆದ ಪಂದ್ಯ ಶ್ರೀಶಾಂತ್ ಕಮ್ಬ್ಯಾಕ್ಗೆ ವೇದಿಕೆಯಾಯಿತು. ತಾನು ಮಾಡಿದ ಎರಡನೇ ಓವರ್ನಲ್ಲೇ ವಿಕೆಟ್ ಕಿತ್ತು ಮಿಂಚಿದರು. ಪುದುಚೇರಿಯ ಓಪನರ್ ಫಾಬಿದ್ ಅಹ್ಮದ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಶ್ರೀಶಾಂತ್ 2804 ದಿನಗಳ ಬಳಿಕ ಮೊದಲ ವಿಕೆಟ್ ಕಿತ್ತರು. ಇವರು ಕೊನೆಯದಾಗಿ ಎಬಿ ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದ್ದರು.
IPL 2021: ರಾಜಸ್ಥಾನ್ ರಾಯಲ್ಸ್ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ
ಒಟ್ಟು ನಾಲ್ಕು ಓವರ್ ಬೌಲಿಂಗ್ ಮಾಡಿದ ಶ್ರೀಶಾಂತ್ ರನ್ ನಿಯಂತ್ರಣ ಮಾಡಿ 7.20 ಎಕಾನಮಿಯಲ್ಲಿ 29 ರನ್ನಗಳನ್ನಷ್ಟೇ ನೀಡಿ ಒಂದು ವಿಕೆಟ್ ಪಡೆದರು. ಅಲ್ಲದೆ ತನ್ನ 4 ಓವರ್ ಮುಗಿಯುತ್ತಿದ್ದಂತೆ ಪಿಚ್ ಬಳಿ ಬಂದು ಧನ್ಯವಾದ ಹೇಳಿ ಸಮಸ್ಕರಿಸಿದರು.
ಎಸ್. ಶ್ರೀಶಾಂತ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ನಿಷೇಧ ಕಳೆದ ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು. ಇತ್ತೀಚೆಗಷ್ಟೆ ಶ್ರೀಶಾಂತ್ ಅವರು 2021ನೇ ಐಪಿಎಲ್ ಟೂರ್ನಿಯಲ್ಲೂ ಕಣಕ್ಕಿಳಿಯುವ ನಿರೀಕ್ಷೆ ಇದೆ ಎಂದಿದ್ದರು. ಅಲ್ಲದೆ ವಿವಿಧ ಐಪಿಎಲ್ ತಂಡಗಳು ತಮ್ಮನ್ನು ಸಂಪರ್ಕಿಸುತ್ತಿವೆ ಎಂದು ಹೇಳಿಕೊಂಡಿದ್ದರು.
Jasprit Bumrah: ಭಾರತಕ್ಕೆ ಶಾಕ್ ಮೇಲೆ ಶಾಕ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಿಂದ ಜಸ್ಪ್ರೀತ್ ಬುಮ್ರಾ ಹೊರಕ್ಕೆ
ಪುದುಚೆರಿ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ಕೇರಳ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪುದುಚೆರಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಕೇರಳ 18.2 ಓವರ್ಗಲ್ಲೇ 4 ವಿಕೆಟ್ ಕಳೆದುಕೊಂಡು 139 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
Published by:
Vinay Bhat
First published:
January 12, 2021, 12:42 PM IST