ಮಹಾರಾಷ್ಟ್ರ ಪಾಲಿಗೂ ಕಂಟಕವಾದ ಕೇದರ್ ಜಾಧವ್ ನಿಧಾನಗತಿಯ ಬ್ಯಾಟಿಂಗ್..!

ಈ ಹಿಂದೆ ಐಪಿಎಲ್​ನಲ್ಲಿ ಕೇದರ್ ಜಾಧವ್ ಅವರ ನಿಧಾನಗತಿಯ ಬ್ಯಾಟಿಂಗ್​ ಕಾರಣದಿಂದ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಸೋಲನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kedar Jadhav

Kedar Jadhav

 • Share this:
  ಮುಂಬರುವ ಐಪಿಎಲ್ ಹರಾಜಿನ ಕಾರಣ ಸೈಯದ್ ಮುಷ್ತಾಕ್ ಅಲಿ ಟೂರ್ನಿ ಕುತೂಹಲದ ಕೇಂದ್ರ ಬಿಂದುವಾಗಿದೆ. ಈ ಟೂರ್ನಿಯಲ್ಲಿ ಮಿಂಚುವ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ನ 8 ತಂಡಗಳ ಫ್ರಾಂಚೈಸಿಗಳು ಮಣೆ ಹಾಕಲಿದೆ. ಹೀಗಾಗಿಯೇ ಈ ಬಾರಿ ಟೂರ್ನಿಯಲ್ಲಿ ಯುವ ಆಟಗಾರರ ಅಬ್ಬರ ಕೂಡ ಕಂಡು ಬರುತ್ತಿದೆ.

  ಆದರೆ ಅತ್ತ ಮಹಾರಾಷ್ಟ್ರ ತಂಡವು ಹಿಮಾಚಲ ಪ್ರದೇಶದ ವಿರುದ್ಧ ಹೀನಾಯ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಹೌದು, ಗ್ರೂಪ್ ಸಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ನಾಯಕ ರುತುರಾಜ್ ಗಾಯಕ್ವಡ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ರುತುರಾಜ್ ಹಾಗೂ ಸ್ವಪ್ನಿಲ್ ಉತ್ತಮ ಆರಂಭ ಒದಗಿಸಿದರು.

  ಆದರೆ ಆರಂಭಿಕರ ಪತನದ ಬಳಿಕ ಹಿಮಾಚಲ ಪ್ರದೇಶ ತಂಡದ ಬೌಲರುಗಳು ಮೇಲುಗೈ ಸಾಧಿಸಿದರು. ಒಂದೆಡೆ ವಿಕೆಟ್ ಉರುಳಿಸಿದರೆ, ಮತ್ತೊಂದೆಡೆ ಮಹಾರಾಷ್ಟ್ರ ತಂಡದ ಹಿರಿಯ ಆಟಗಾರ ಕೇದರ್ ಜಾಧವ್ ಅವರ ನಿಧಾನಗತಿಯ ಆಟ ಎದುರಾಳಿಗೆ ವರವಾಯಿತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ 22 ಎಸೆತಗಳನ್ನು ಎದುರಿಸಿ ಕೇವಲ 16 ರನ್​ ಮಾತ್ರ ಕಲೆಹಾಕಿದರು.

  15 ಓವರ್ ವೇಳೆಗೆ ಜಾಧವ್ ಔಟ್ ಆಗಿ ಹೊರನಡೆದರು. ಆದರೆ ಆ ಬಳಿಕ ಬಂದ ಬ್ಯಾಟ್ಸ್​ಮನ್​ಗಳು ರನ್ ವೇಗವನ್ನು ಹೆಚ್ಚಿಸಲು ಯತ್ನಿಸಿದರೂ ಫಲ ಕೊಡಲಿಲ್ಲ. ಪರಿಣಾಮ ಮಹಾರಾಷ್ಟ್ರ ನಿಗದಿತ 20 ಓವರ್​ಗೆ 9 ವಿಕೆಟ್ ನಷ್ಟಕ್ಕೆ 117 ರನ್​ ಮಾತ್ರ ಗಳಿಸುವಂತಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಹಿಮಾಚಲ ಪ್ರದೇಶ ತಂಡ 6 ವಿಕೆಟ್ ಕಳೆದುಕೊಂಡು 19ನೇ ಓವರ್​ನಲ್ಲಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಆಡಿರುವ 5 ಪಂದ್ಯಗಳಲ್ಲಿ ಮಹಾರಾಷ್ಟ್ರ 4ನೇ ಸೋಲು ಕಾಣುವಂತಾಯಿತು.

  ಈ ಹಿಂದೆ ಐಪಿಎಲ್​ನಲ್ಲಿ ಕೇದರ್ ಜಾಧವ್ ಅವರ ನಿಧಾನಗತಿಯ ಬ್ಯಾಟಿಂಗ್​ ಕಾರಣದಿಂದ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಸೋಲನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ಕಳೆದ ಐಪಿಎಲ್​ ಸೀಸನ್​ನಲ್ಲಿ 8 ಪಂದ್ಯಗನ್ನಾಡಿದ ಜಾಧವ್ ಬರೀ 62 ರನ್ ಗಳಿಸಿ ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಕೇದರ್ ಜಾಧವ್ ಅವರನ್ನೂ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಕೈ ಬಿಡಲಿರುವುದು ಬಹುತೇಕ ಖಚಿತ.
  Published by:zahir
  First published: