Syed Mushtaq Ali Trophy: ಹರಿಯಾಣ ಬೌಲರ್​ಗಳನ್ನು ಚೆಂಡಾಡಿ ಫೈನಲ್​ಗೇರಿದ ಕರ್ನಾಟಕ

ಕರ್ನಾಟಕ ಈ ಗೆಲುವಿನೊಂದಿಗೆ ಸಯದ್ ಮುಷ್ತಾಕ್ ಅಲಿ ಟ್ರೋಫಿ ಮುತ್ತಿಕ್ಕಲು ಅಂತಿಮ ಘಟ್ಟಕೇರಿತು. ಡಿಸೆಂಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಕರ್ನಾಟಕ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಫೇವರಿಟ್ ಎನಿಸಿದೆ.

Vijayasarthy SN | news18
Updated:November 29, 2019, 6:49 PM IST
Syed Mushtaq Ali Trophy: ಹರಿಯಾಣ ಬೌಲರ್​ಗಳನ್ನು ಚೆಂಡಾಡಿ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್
  • News18
  • Last Updated: November 29, 2019, 6:49 PM IST
  • Share this:
ಸೂರತ್(ನ. 29): ಕರ್ನಾಟಕದ ಭರ್ಜರಿ ಫಾರಮ್ ನಾಕೌಟ್ ಹಂತದಲ್ಲೂ ಮುಂದುವರಿದಿದೆ. ಅಭಿಮನ್ಯು ಮಿಥುನ್ ಅವರ ಮಾರಕ ಬೌಲಿಂಗ್ ಹಾಗೂ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್​ನಲ್ಲಿ ಹರಿಯಾಣ ವಿರುದ್ಧ ನಿರಾಯಾಸ ಗೆಲುವು ಪಡೆದಿದೆ. ಇಲ್ಲಿಯ ಲಾಲಾಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ಪಡೆದ ಕರ್ನಾಟಕ ಫೈನಲ್ ತಲುಪಿದೆ.

ಹರಿಯಾಣ ಗಳಿಸಿದ 194 ರನ್​ಗಳಿಗೆ ಪ್ರತಿಯಾಗಿ ಕರ್ನಾಟಕ ಇನ್ನೂ 5 ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತು. ಕೆಎಲ್ ರಾಹುಲ್ ಕೇವಲ 31 ಎಸೆತದಲ್ಲಿ 66 ರನ್ ಚಚ್ಚಿದರು. ಅವರ ಇನ್ನಿಂಗ್ಸ್ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಒಳಗೊಂಡಿತ್ತು. ಇಡೀ ಟೂರ್ನಿಯ ಅತ್ಯುತ್ತಮ ಫಾರ್ಮ್​ನಲ್ಲಿದ್ದ ದೇವದತ್ ಪಡಿಕ್ಕಲ್ 4 ಸಿಕ್ಸರ್, 11 ಬೌಂಡರಿಗಳನ್ನೊಂಡು ಕೇವಲ 42 ಬಾಲ್​ನಲ್ಲಿ 87 ರನ್ ಭಾರಿಸಿದರು. ಇವರಿಬ್ಬರು ಮೊದಲ ವಿಕೆಟ್​ಗೆ ಕೇವಲ 9.3 ಓವರ್​ನಲ್ಲಿ 123 ರನ್ ಸೇರಿಸಿದರು. ಇದರಿಂದಾಗಿ ಹರಿಯಾಣದ ಬೃಹತ್ ಮೊತ್ತದ ಸವಾಲನ್ನು ಕರ್ನಾಟಕ ನಿರೀಕ್ಷೆಮೀರಿ ಸುಲಭವಾಗಿ ಮುಟ್ಟಲು ಸಾಧ್ಯವಾಯಿತು. ರಾಹುಲ್ ನಿರ್ಗಮನದ ನಂತರ ಮಯಂಕ್ ಅಗರ್ವಾಲ್ ಕೂಡ ಸ್ಫೋಟಕ ಆಟವಾಡಿ ಕರ್ನಾಟಕವನ್ನು ಗೆಲುವಿನ ದಡ ಮುಟ್ಟಿಸಿದರು.

ಇದನ್ನೂ ಓದಿ: ಬಡವಾಗುತ್ತಿದೆ ಪಿಸಿಬಿ; ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್​ನ ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿ ಹರಿಯಾಣ ತಂಡ 20 ಓವರ್​ನಲ್ಲಿ 194 ರನ್ ಕಲೆಹಾಕಿತು. ಹಿಮಾಂಶು ರಅಣಾ ಮತ್ತು ಚೈತನ್ಯ ಬಿಷ್ಣೋಯ್ ಅರ್ಧ ಶತಕ ಭಾರಿಸಿದ್ದು ಹರಿಯಾಣ ಇನ್ನಿಂಗ್ಸ್​ನ ಹೈಲಟ್ ಎನಿಸಿತು. ಹರ್ಷಲ್ ಪಟೇಲ್ ಮತ್ತು ರಾಹುಲ್ ತೆವಾಟಿಯಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕರ್ನಾಟಕದ ಅಭಿಮನ್ಯು ಮಿಥುನ್ 5 ವಿಕೆಟ್ ಕಬಳಿಸಿದರು. ಶ್ರೇಯಸ್ ಗೋಪಾಲ್ 4 ಓವರ್​ನಲ್ಲಿ ಕೇವಲ 23 ರನ್ನಿತ್ತು 2 ವಿಕೆಟ್ ಪಡೆದು ಗಮನ ಸೆಳೆದರು.

ಕರ್ನಾಟಕ ಈ ಗೆಲುವಿನೊಂದಿಗೆ ಸಯದ್ ಮುಷ್ತಾಕ್ ಅಲಿ ಟ್ರೋಫಿ ಮುತ್ತಿಕ್ಕಲು ಅಂತಿಮ ಘಟ್ಟಕೇರಿತು. ಮತ್ತೊಂದು ಸೆಮಿಫೈನಲ್​ನಲ್ಲಿ ರಾಜಸ್ಥಾನ ಮತ್ತು ತಮಿಳುನಾಡು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆದ್ದವರು ಫೈನಲ್​ನಲ್ಲಿ ಕರ್ನಾಟಕವನ್ನು ಎದಿರುಗೊಳ್ಳಲಿದ್ಧಾರೆ. ಡಿಸೆಂಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಕರ್ನಾಟಕ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಫೇವರಿಟ್ ಎನಿಸಿದೆ.

ಇದನ್ನೂ ಓದಿ: 42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಬೌಲರ್ ದೀಪಕ್ ಚಹಾರ್ ಬಾರಿಸಿದ ರನ್ ಎಷ್ಟು ಗೊತ್ತಾ?

ಕರ್ನಾಟಕ-ಹರಿಯಾಣ ಸ್ಕೋರು ವಿವರ:ಹರಿಯಾಣ 20 ವರ್ 194/8
(ಹಿಮಾಂಶು ರಾಣಾ 61, ಚೈತನ್ಯ ಬಿಷ್ಣೋಯ್ 55, ಹರ್ಷಲ್ ಪಟೇಲ್ 34, ರಾಹುಲ್ ತೆವಾಟಿಯಾ 32 ರನ್ – ಅಭಿಮನ್ಯು ಮಿಥುನ್ 39/5, ಶ್ರೇಯಸ್ ಗೋಪಾಲ್ 23/2)

ಕರ್ನಾಟಕ 15 ಓವರ್ 195/2
(ದೇವದತ್ ಪಡಿಕ್ಕಲ್ 87, ಕೆಎಲ್ ರಾಹುಲ್ 66, ಮಯಂಕ್ ಅಗರ್ವಾಲ್ ಅಜೇಯ 30 ರನ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 29, 2019, 6:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading