ಶ್ರೀಶಾಂತ್ ಗುರಾಯಿಸಿದ್ದಕ್ಕೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಯಶಸ್ವಿ ಜೈಸ್ವಾಲ್: ಇಲ್ಲಿದೆ ವಿಡಿಯೋ

ಶ್ರೀಶಾಂತ್ ಬೌಲಿಂಗ್​ ಮಾಡುವಾಗ ಮೊದಲ ಎಸೆತದಲ್ಲಿ ಜೈಸ್ವಾಲ್ ಮುಂದೆ ಬಂದು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಯತ್ನಿಸಿದರು. ಆದರೆ, ಬ್ಯಾಟ್​ಗೆ ಚೆಂಡು ತಾಗದೆ ಕೀಪರ್ ಕೈ ಸೇರಿತು. ಈ ಸಂದರ್ಭ ಶ್ರೀಶಾಂತ್ ಅವರು ಜೈಸ್ವಾಲ್​ರನ್ನು ಗುರಾಯಿಸಿದರು.

S Sreesanth tries to sledge Yashasvi Jaiswal

S Sreesanth tries to sledge Yashasvi Jaiswal

 • Share this:
  2021ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದಿನದಿಂದ ದಿನಕ್ಕೆ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಯುವ ಆಟಗಾರರ ಅಬ್ಬರ ಜೋರಾಗಿಯೇ ನಡೆಯುತ್ತಿದ್ದು, ಹಿರಿಯ ಅನುಭವಿಗಳೇ ಮಂಕಾಗಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೆ ನಡೆದ ಕೇರಳ ಹಾಗೂ ಮುಂಬೈ ನಡುವಣ ರೋಚಕ ಪಂದ್ಯ. ಈ ಪಂದ್ಯದಲ್ಲಿ ಕೇರಳ ತಂಡದ ಎಸ್. ಶ್ರೀಶಾಂತ್ ಮುಂಬೈ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್ ಅವರನ್ನು ಸ್ಲೆಡ್ಜ್ ಮಾಡಲು ಮುಂದಾದರು. ಇದಕ್ಕೆ ತನ್ನ ಬ್ಯಾಟಿಂಗ್ ಮೂಲಕ ಜೈಸ್ವಾಲ್ ಸರಿಯಾಗೆ ಖಡಕ್ ಉತ್ತರ ಕೊಟ್ಟರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಆದಿತ್ಯ ತಾರೆ ಬಿರುಸಿನ ಆಟವಾಡಿದರು. ಈ ನಡುವೆ ಶ್ರೀಶಾಂತ್ ಬೌಲಿಂಗ್​ ಮಾಡುವಾಗ ಮೊದಲ ಎಸೆತದಲ್ಲಿ ಜೈಸ್ವಾಲ್ ಮುಂದೆ ಬಂದು ಚೆಂಡನ್ನು ಸಿಕ್ಸ್​ಗೆ ಅಟ್ಟಲು ಯತ್ನಿಸಿದರು. ಆದರೆ, ಬ್ಯಾಟ್​ಗೆ ಚೆಂಡು ತಾಗದೆ ಕೀಪರ್ ಕೈ ಸೇರಿತು. ಈ ಸಂದರ್ಭ ಶ್ರೀಶಾಂತ್ ಅವರು ಜೈಸ್ವಾಲ್​ರನ್ನು ಗುರಾಯಿಸಿದರು.

  India vs Australia: ಚೊಚ್ಚಲ ಟೆಸ್ಟ್​ನಲ್ಲೇ ಸ್ಟೀವ್ ಸ್ಮಿತ್ ವಿಕೆಟ್ ಕಿತ್ತು ಮಿಂಚಿದ ವಾಷಿಂಗ್ಟನ್ ಸುಂದರ್

  ಇದರಿಂದ ಕೋಪಗೊಂಡ ಜೈಸ್ವಾಲ್ ಮುಂದಿನ ಎರಡನೇ ಎಸೆತದಲ್ಲಿ ಮತ್ತೆ ಮುಂದೆ ಬಂದು ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಅಲ್ಲದೆ ನಂತರದ ಎಸೆತದಲ್ಲೂ ಸಿಕ್ಸರ್ ಸಿಡಿಸಿದ್ದಾರೆ. ಅಲ್ಲಿಗೆ ತೃಪ್ತಿಯಾಗದ ಜೈಸ್ವಾಲ್ ನಾಲ್ಕನೇ ಎಸೆತದಲ್ಲೂ ಚೆಂಡನ್ನು ಬೌಂಡರಿಗೆ ಅಟ್ಟಿ ಶ್ರೀಶಾಂತ್​ಗೆ ಮುಟ್ಟಿನೋಡುವಂತಹ ತಿರುಗೇಟು ನೀಡಿದರು.

  37 ವರ್ಷದ ಶ್ರೀಶಾಂತ್ ಅನೇಕ ವರ್ಷಗಳ ನಂತರ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ತಾವು ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ, ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ 4 ಓವರ್​ಗಳಲ್ಲಿ 47ರನ್​ ನೀಡಿ ದುಬಾರಿ ಆದರು.

  Sophie Devine: 9 ಸೂಪರ್ ಸಿಕ್ಸ್, 7 ಭರ್ಜರಿ ಬೌಂಡರಿ: ಸೋಫಿ ಸಿಡಿಲಬ್ಬರಕ್ಕೆ ಟಿ20 ದಾಖಲೆ ಉಡೀಸ್..!

  ಈ ಪಂದ್ಯದಲ್ಲಿ ಮುಂಬೈ 20 ಓವರ್​ಗೆ 7 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಕೇರಳ ಮೊಹಮ್ಮದ್ ಅಜರುದ್ದೀನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್ ಕಳೆದುಕೊಂಡು 15.5 ಓವರ್​ನಲ್ಲೇ 201 ರನ್ ಚಚ್ಚಿ ಗೆಲುವು ಸಾಧಿಸಿತು. ಅಜರುದ್ದೀನ್ ಕೇವಲ 54 ಎಸೆತಗಳಲ್ಲಿ 9 ಬೌಂಡರಿ ಹಾಗೂ ಬರೋಬ್ಬರಿ 11 ಸಿಕ್ಸರ್ ಸಿಡಿಸಿ ಅಜೇಯ 137 ರನ್ ಬಾರಿಸಿ ಮಿಂಚಿದರು.
  Published by:Vinay Bhat
  First published: