ಛತ್ತೀಸ್​ಗಢ ವಿರುದ್ಧವೂ ಜಯ; ಕರ್ನಾಟಕಕ್ಕೆ ಸತತ 5ನೇ ಗೆಲುವು

172 ರನ್​​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳು ಬ್ಯಾಟ್ ಬೀಸಿದ ಪರಿಣಾಮ ತಂಡಕ್ಕೆ ಜಯ ಒಲಿಯಿತು.

Vinay Bhat | news18
Updated:March 13, 2019, 5:18 PM IST
ಛತ್ತೀಸ್​ಗಢ ವಿರುದ್ಧವೂ ಜಯ; ಕರ್ನಾಟಕಕ್ಕೆ ಸತತ 5ನೇ ಗೆಲುವು
ವಿನಯ್ ಕುಮಾರ್
  • News18
  • Last Updated: March 13, 2019, 5:18 PM IST
  • Share this:
ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿಯ ಟಿ-20 ಪಂದ್ಯದಲ್ಲಿ ಕರ್ನಾಟಕ ತಂಡ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ಐದನ್ನೂ ಗೆದ್ದು ಬೀಗಿರುವ ಮನೀಶ್ ಪಾಂಡೆ ಬಳಗ ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದೆ.

ಇಂದು ನಡೆದ ಛತ್ತೀಸ್​ಗಢ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 4 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಮೊದಲು ಬ್ಯಾಟ್ ಮಾಡಿದ ಛತ್ತೀಸ್​ಗಢ ಉತ್ತಮ ಆಟ ಪ್ರದರ್ಶಿಸಿತು. ನಾಯಕ ಹರ್​ಪ್ರೀತ್ ಸಿಂಗ್​​ ಹಾಗೂ ಅಮನ್​ದೀಪ್ ಖೇರ್ ಅವರ 93 ರನ್​ಗಳ ಜೊತೆಯಾಟದ ನೆರವಿನಿಂದ ತಂಡ ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 171ರನ್ ಬಾರಿಸಿತು. ಹರ್​​ಪ್ರೀತ್ 79 ರನ್ ಚಚ್ಚಿದರೆ, ಅಮನ್​ದೀಪ್ ಅಜೇಯ 45 ರನ್ ಗಳಿಸಿ ಸವಾಲಿನ ಟಾರ್ಗೆಟ್ ನೀಡಿದರು.

ಇದನ್ನೂ ಓದಿ: ಮತ್ತೆ ಅಬ್ಬರಿಸಿದ ಪಾಂಡೆ ಬಳಗ; ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಕರ್ನಾಟಕ

172 ರನ್​​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳು ಬ್ಯಾಟ್ ಬೀಸಿದ ಪರಿಣಾಮ ತಂಡಕ್ಕೆ ಜಯ ಒಲಿಯಿತು. ಕರುಣ್ ನಾಯರ್ 35 ಹಾಗೂ ಜಗದೀಶ್ ಸುಚಿತ್ 34 ರನ್ ಗಳಿಸಿದರೆ, ಕೊನೆಯಲ್ಲಿ ಆರ್ಭಟಿಸಿದ ವಿನಯ್ ಕುಮಾರ್ ಕೇವಲ 13 ಎಸೆತಗಳಲ್ಲಿ 4 ಸಿಕ್ಸ್​ ಸಿಡಿಸಿ ಅಜೇಯ 34 ರನ್ ಬಾರಿಸಿ ರಾಜ್ಯ ತಂಡಕ್ಕೆ ಗೆಲುವು ತಂದಿಟ್ಟರು. ಈ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆಯೆ ಕರ್ನಾಟಕ ತಂಡ 6 ವಿಕೆಟ್ ಕಳೆದುಕೊಂಡರು 175 ರನ್ ಗಳಿಸಿ ಜಯ ಸಾಧಿಸಿತು. ಛತ್ತೀಸ್​ಗಢ ಪರ ವಿಶಾಲ್, ಶುಭಂ ಹಾಗೂ ಮೌರ್ಯ 2 ವಿಕೆಟ್ ಪಡೆದರಾದರು ಯಾವುದೆ ಪ್ರಯೋಜನವಾಗಿಲ್ಲ.

ಈ ಮೂಲಕ ಕರ್ನಾಟಕ 4 ವಿಕೆಟ್​ಗಳ ಗೆಲುವಿನೊಂದಿಗೆ ಆಡಿದ 5 ಪಂದ್ಯಗಳಲ್ಲಿ ಐದನ್ನೂ ಗೆದ್ದು 20 ಅಂಕ ತನ್ನ ಖಾತೆಗೆ ಸೇರಿಸಿ ಅಗ್ರಸ್ಥಾನದಲ್ಲಿದೆ.

First published:February 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading