HOME » NEWS » Sports » CRICKET SYED KIRMANI NARRATES MAHENDRA SINGH DHONI SELECTION INDIA CRICKET STORY HG

Dhoni: ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕನ್ನಡಿಗ ಕಾರಣ ಎಂದರೆ ನಂಬಲೇ ಬೇಕು!

Mahendra Singh Dhoni: ಧೋನಿ ಕ್ರಿಕೆಟ್​ ಸಾಧನೆಗಾಗಿ ಅವರ ಜೀವನಾಧಾರಿತ ಸಿನಿಮಾ ಕೂಡ ಬಂದಿದೆ. 2011ರ ವಿಶ್ವಕಪ್​​ ಜಯಿಸುವವರೆಗೆ ವೃತ್ತಿ ಜೀವನದಲ್ಲಾದ ಪ್ರಮುಖ ಘಟನೆಯನ್ನು ತೆಗೆದುಕೊಂಡು ‘ಎಂಎಸ್​ ಧೋನಿ ಅನ್​ಟೋಲ್ಡ್​ ಸ್ಟೋರಿ‘ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದರು.

news18-kannada
Updated:June 10, 2020, 7:12 AM IST
Dhoni: ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕನ್ನಡಿಗ ಕಾರಣ ಎಂದರೆ ನಂಬಲೇ ಬೇಕು!
ಹೌದು, ಕ್ರಿಕೆಟ್​ ಕುರಿತಾದ ಚಿಟ್​ ಚಾಟ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಆರಂಭಿಕ ಗಂಭೀರ್, ಒಂದು ವೇಳೆ ಧೋನಿ ನಾಯಕತ್ವದ ಭಾರ ಹೊರದಿದಿದ್ರೆ ಅವರು ವಿಭಿನ್ನ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುತ್ತಿದ್ದರು ಎಂದಿದ್ದಾರೆ.
  • Share this:
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಸಾಕಷ್ಟು ಪಂದ್ಯಗಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ತಮ್ಮ ಬಲದಿಂದ ತಂಡವನ್ನು ಜಯದ ನೆರಳಿಗೂ ಕೊಂಡೊಯ್ದ ಉದಾಹರಣೆಗಳಿವೆ. ಹಿಂದೊಮ್ಮೆ ಧೋನಿ ಮೈದಾನಕ್ಕೆ ಬಂದರೆಂದರೆ ಹೆಲಿಕಾಪ್ಟರ್​ ಶಾಟ್​​ ಬಾರಿಸದೆ ಹೋಗಲಾರರು ಎಂಬುದು ಎಲ್ಲರಲ್ಲೂ ಖಚಿತವಾಗಿತ್ತು. ಅಷ್ಟೇ ಏಕೆ, ಕೀಪಿಂಗ್​ನಲ್ಲೂ ಮೋಡಿ ಮಾಡಿದ್ದ ಧೋನಿ ಕ್ಷಣಾರ್ಧದಲ್ಲೇ ವಿಕಿಟ್​ ಕಿತ್ತು ತಂಡವನ್ನು ಜಯದ ಕಡೆಗೆ ಸಾಗಿಸುವ ಚತುರ ಇವರು. ಧೋನಿ ನಾಯಕತ್ವದಲ್ಲೇ ಭಾರತ 2ನೇ ಬಾರಿ ವಿಶ್ವಕಪ್​ ಜಯ ಸಾಧಿಸಿತ್ತು. ಹೀಗೆ ಮಾಹಿ ಕ್ರಿಕೆಟ್​​ ಅಂಗಳದಲ್ಲಿ ಸಾಕಷ್ಟು ದಾಖಲೆಯನ್ನು ನಿರ್ಮಿಸಿದ್ದಾರೆ.

ಧೋನಿ ಕ್ರಿಕೆಟ್​ ಸಾಧನೆಗಾಗಿ ಅವರ ಜೀವನಾಧಾರಿತ ಸಿನಿಮಾ ಕೂಡ ಬಂದಿದೆ. 2011ರ ವಿಶ್ವಕಪ್​​ ಜಯಿಸುವವರೆಗೆ ವೃತ್ತಿ ಜೀವನದಲ್ಲಾದ ಪ್ರಮುಖ ಘಟನೆಯನ್ನು ತೆಗೆದುಕೊಂಡು ‘ಎಂಎಸ್​ ಧೋನಿ ಅನ್​ಟೋಲ್ಡ್​ ಸ್ಟೋರಿ‘ ಹೆಸರಿನಲ್ಲಿ ಸಿನಿಮಾವನ್ನು ಮಾಡಿದ್ದರು.

ಸಿನಿಮಾದಲ್ಲಿ ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು 2004ರಲ್ಲಿ ದೇವಧರ್​ ಟ್ರೋಫಿ ಪಂದ್ಯದಲ್ಲಿ ಪೂರ್ವ ವಲಯ ಪರ ಧೋನಿ ಬ್ಯಾಟಿಂಗ್​​​ ಅಬ್ಬರ ಎಂದು ಚಿತ್ರಿಸಲಾಗಿದೆ. ಈ ಪಂದ್ಯದಲ್ಲಿ ಧೋನಿ ಸ್ಟೋಟಕ ಬ್ಯಾಟಿಂಗ್​ನಲ್ಲಿ ಮಿಂಚಿದ್ದರು. ಪಂದ್ಯವನ್ನು ವೀಕ್ಷಿಸುತ್ತಿದ್ದ ಆಯ್ಕೆ ಸಮಿತಿ ಧೋನಿಯನ್ನು ಪ್ರದರ್ಶನ ಕಂಡು ರಾಷ್ಟ್ರೀಯ ತಂಡಕ್ಕೆ ಮಣೆ ಹಾಕಿದರು ಎಂದು ತೋರಿಸಲಾಗಿದೆ.

ಆದರೀಗ ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇವಧರ್​ ಟ್ರೋಫಿಗಿಂತ ಮುಖ್ಯವಾಗಿ ಅದಕ್ಕೂ ಮುನ್ನ ರಣಜಿ ಪಂದ್ಯವೇ ಪ್ರಮುಖ ಎಂದು ಅಂದಿನ ಆಯ್ಕೆ ಸಮಿತಿಯ ಮುಖ್ಯಸ್ಥ ಸಯ್ಯದ್​​ ಕಿರ್ಮಾನಿ ಹೇಳಿದ್ದಾರೆ.

ಜಾರ್ಖಂಡ್​ ರಾಜ್ಯದ ರಣಜಿ ಪಂದ್ಯವೊಂದರಲ್ಲಿ ಧೋನಿ  ಅದ್ಭುತ ಬ್ಯಾಟಿಂಗ್​ ಮಾಡಿದ್ದರಂತೆ. ಈ ಪಂದ್ಯದಲ್ಲಿ ಅಂದಿನ ಪೂರ್ವ ವಲಯದ ಆಯ್ಕೆಗಾರ ಪ್ರಣಬ್​​​ ರಾಯ್​​ ಜೊತೆಗೆ ಸಯ್ಯದ್​ ಕಿರ್ಮಾಣಿ ಪಂದ್ಯ ವೀಕ್ಷಿಸುತ್ತಿದ್ದರಂತೆ. ಈ ವೇಳೆ ಪ್ರಣಬ್​ ರಾಯ್​ ಧೋನಿ ಪ್ರದರ್ಶನ ಕಂಡು ಸಮರ್ಥ ಆಟಗಾರ ಎಂದು ಹೇಳಿದ್ದರು. ಹಾಗೆ ನಾನು ಧೋನಿಯನ್ನು ಪೂರ್ವ ವಲಯಕ್ಕೆ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ ಕಿರ್ಮಾನಿ.

PayTm: ಪೇಟಿಯಂ ಪರಿಚಯಿಸಿದೆ ‘ಮೊದಲು ಖರೀದಿಸಿ ನಂತರ ಪಾವತಿಸಿ‘; ಕಿರಾಣಿ ಅಂಗಡಿಯಲ್ಲಿ ಇದರ ಬಳಕೆ ಹೇಗೆ?

Deepika Padukone: ಕೋಟಿ ರೂ. ಮುಟ್ಟಿದ ದೀಪಿಕಾ ಬಾಡಿಗಾರ್ಡ್ ಸಂಬಳ!
First published: June 10, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading