BBL 10: ಇನ್ಮುಂದೆ ಸಿಕ್ಸ್ ಬಾರಿಸುವುದು ಸುಲಭವಲ್ಲ: ಸೂಪರ್ ಮ್ಯಾನ್ ಫೀಲ್ಡಿಂಗ್ ವಿಡಿಯೋ ವೈರಲ್

10ನೇ ಸೀಸನ್ ಬಿಗ್ ಬ್ಯಾಷ್​ ಲೀಗ್​ನ ಮೊದಲ ಪಂದ್ಯದಲ್ಲಿ ಹೊಬರ್ಟ್​ ಹ್ಯುರಿಕೇನ್ಸ್ ಹಾಗೂ ಸಿಡ್ನಿ ಸಿಕ್ಸರ್ ಮುಖಾಮುಖಿಯಾಗಿತ್ತು. ಪಂದ್ಯದ 15ನೇ ಓವರ್​ನಲ್ಲಿ ಹ್ಯುರಿಕೇನ್ಸ್ ತಂಡದ ಕಾಲಿನ್ ಇಂಗ್ರಾಮ್ ಬಾರಿಸಿದ ಚೆಂಡು ಬೌಂಡರಿ ಲೈನ್ ದಾಟಿತ್ತು.

jordan silk fielding bbl video

jordan silk fielding bbl video

  • Share this:
    ಟಿ20 ಕ್ರಿಕೆಟ್​ನಲ್ಲಿ ಕ್ಷೇತ್ರರಕ್ಷಣೆ ಎಂಬುದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಬೌಂಡರಿ ಲೈನ್​​ನಲ್ಲಿ ಮಾಡುವ ಒಂದು ಸಣ್ಣ ತಪ್ಪು ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಹಾಗೆಯೇ ಒಂದು ಅತ್ಯುತ್ತಮ ಫೀಲ್ಡಿಂಗ್ ಇಡೀ ಮ್ಯಾಚ್​ನ ಚಿತ್ರಣ ಬದಲಿಸಬಹುದು. ಹೀಗಾಗಿಯೇ ಚುಟುಕು ಕ್ರಿಕೆಟ್​ನಲ್ಲಿ ಅತ್ಯುತ್ತಮ ಫೀಲ್ಡಿಂಗ್​ಗಳು ಕಂಡು ಬರುತ್ತವೆ.

    ಇದಕ್ಕೆ ತಾಜಾ ಸಾಕ್ಷಿ ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ - ಭಾರತ ನಡುವಣ ಮೂರನೇ ಟಿ20 ಪಂದ್ಯ. ಈ ಪಂದ್ಯದ 14ನೇ ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಆಗಲಿದೆ ಎನ್ನುಷ್ಟರಲ್ಲಿ ಸ್ಯಾಮ್ಸನ್ ಎಂಬ ಸೂಪರ್ ಮ್ಯಾನ್ ಎಂಟ್ರಿ ಕೊಟ್ಟಿದ್ದರು. ರನ್ನಿಂಗ್ ಮೂಲಕ ಗಾಳಿಯಲ್ಲಿ ಜಿಗಿದು ಬೌಂಡರಿ ಲೈನ್ ದಾಟಿದ್ದ ಚೆಂಡನ್ನು ತಡೆದು ಅದ್ಭುತವಾಗಿ 4 ರನ್​ ಉಳಿಸಿದ್ದರು.



    ದ್ವಿತೀಯ ಇನಿಂಗ್ಸ್​ ವೇಳೆ ಸಹ ಇಂತಹದ್ದೇ ಮತ್ತೊಂದು ಅದ್ಭುತ ಫೀಲ್ಡಿಂಗ್ ಕಂಡು ಬಂದಿತ್ತು. 13ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಚೆಂಡು ಸಿಕ್ಸರ್ ಆಗುತ್ತಿತ್ತು. ಆದರೆ ಬೌಂಡರಿ ಲೈನ್​ನಲ್ಲಿ ಸ್ಟೀವ್ ಸ್ಮಿತ್ ಸೂಪರ್ ಮ್ಯಾನ್​ನಂತೆ ಗಾಳಿಯಲ್ಲಿ ಎಗರಿ 4 ರನ್​ಗಳನ್ನು ಉಳಿಸಿದ್ದರು. ಇದೀಗ ಇದೇ ಮಾದರಿಯಲ್ಲಿ ಮತ್ತೊಂದು ಫೀಲ್ಡಿಂಗ್ ಪರಾಕ್ರಮ ಮೆರೆದಿರುವ ವಿಡಿಯೋವೊಂದು ವೈರಲ್ ಆಗಿದೆ.



    10ನೇ ಸೀಸನ್ ಬಿಗ್ ಬ್ಯಾಷ್​ ಲೀಗ್​ನ ಮೊದಲ ಪಂದ್ಯದಲ್ಲಿ ಹೊಬರ್ಟ್​ ಹ್ಯುರಿಕೇನ್ಸ್ ಹಾಗೂ ಸಿಡ್ನಿ ಸಿಕ್ಸರ್ ಮುಖಾಮುಖಿಯಾಗಿತ್ತು. ಪಂದ್ಯದ 15ನೇ ಓವರ್​ನಲ್ಲಿ ಹ್ಯುರಿಕೇನ್ಸ್ ತಂಡದ ಕಾಲಿನ್ ಇಂಗ್ರಾಮ್ ಬಾರಿಸಿದ ಚೆಂಡು ಬೌಂಡರಿ ಲೈನ್ ದಾಟಿತ್ತು. ಆದರೆ ಬಾಲ್ ನೆಲಕ್ಕಪ್ಪಳಿಸುವ ಮುನ್ನ ಸೂಪರ್ ಮ್ಯಾನ್ ರೀತಿ ಹಾರಿ ಜೋರ್ಡನ್ ಸಿಲ್ಕ್ ಚೆಂಡನ್ನು ಹೊರ ಹಾಕಿದರು. ಈ ಅದ್ಭುತ ಫೀಲ್ಡಿಂಗ್ ಸಿಡ್ನಿ ತಂಡಕ್ಕೆ 4 ರನ್ ಉಳಿಸಿದರು.

    ಜೋರ್ಡನ್ ಅವರ ಸೂಪರ್ ಮ್ಯಾನ್ ಫೀಲ್ಡಿಂಗ್​ ನೋಡಿದ ಮೆಲ್ಬೋರ್ನ್ ಸ್ಟಾರ್ಸ್​ ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ ಹಾಡಿ ಹೊಗಳಿದ್ದಾರೆ. ಇದಂತು ಭಯಂಕರ ಎಂಬಾರ್ಥದಲ್ಲಿ ಸಿಲ್ಕ್ ಅವರ ಫೀಲ್ಡಿಂಗ್ ವಿಡಿಯೋವನ್ನು ಮ್ಯಾಕ್ಸ್​ವೆಲ್ ಹಂಚಿಕೊಂಡಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್​ನಲ್ಲಿ ಕಂಡು ಬರುತ್ತಿರುವ ಅತ್ಯಾದ್ಭುತ ಫೀಲ್ಡಿಂಗ್​ಗಳು ಇನ್ಮುಂದೆ ಬ್ಯಾಟ್ಸ್​ಮನ್​ಗಳು ನಿರಾಯಾಸವಾಗಿ ಸಿಕ್ಸ್ ಬಾರಿಸಲಾಗಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.





    ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
    Published by:zahir
    First published: