HOME » NEWS » Sports » CRICKET SURYAKUMAR YADAV SHOULD HAVE BEEN SELECTED IN INDIA SQUAD BRIAN LARA ZP

Brian Lara: ಆತ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು: ಕ್ರಿಕೆಟ್ ದಿಗ್ಗಜ ಲಾರಾ ಅಭಿಲಾಷೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ನವೆಂಬರ್ 27 ರಿಂದ ಆರಂಭವಾಗಲಿದ್ದು, ಉಳಿದೆರಡು ಮ್ಯಾಚ್​ಗಳು ನವೆಂಬರ್ 29 ಹಾಗೂ ಡಿಸೆಂಬರ್ 2 ರಂದು ನಡೆಯಲಿದೆ.

news18-kannada
Updated:November 24, 2020, 5:20 PM IST
Brian Lara: ಆತ ಟೀಮ್ ಇಂಡಿಯಾದಲ್ಲಿ ಇರಬೇಕಿತ್ತು: ಕ್ರಿಕೆಟ್ ದಿಗ್ಗಜ ಲಾರಾ ಅಭಿಲಾಷೆ
lara
  • Share this:
ಈ ಬಾರಿಯ ಐಪಿಎಲ್​ ಮೂಲಕ ಎಲ್ಲರ ಕೇಂದ್ರ ಬಿಂದುವಾದ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್. ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸಿದ್ದ ಸೂರ್ಯ ಐಪಿಎಲ್​ 13ನೇ ಸೀಸನ್​ನಲ್ಲಿ ಅತೀ ರನ್ ಗಳಿಸಿದ ರನ್​ ಸರದಾರರ ಪಟ್ಟಿಯಲ್ಲಿ 7ನೇ ಸ್ಥಾನ ಅಲಂಕರಿಸಿದ್ದರು. 145 ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ನಡೆಸಿದ್ದ ಬಲಗೈ ದಾಂಡಿಗ ಒಟ್ಟು 480 ರನ್​ ಬಾರಿಸಿದ್ದರು. ಇದರ ನಡುವೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದ ತಂಡದಲ್ಲಿ ಸೂರ್ಯಕುಮಾರ್ ಅವರಿಗೆ ಸ್ಥಾನ ನೀಡಲಾಗಿರಲಿಲ್ಲ. ಇದರ ಬೆನ್ನಲ್ಲೇ ಸೂರ್ಯನ ಪರವಾಗಿ ಅನೇಕ ಮಾಜಿ ಕ್ರಿಕೆಟರುಗಳು ಬ್ಯಾಟ್ ಬೀಸಿದ್ದರು.

ಇದೀಗ ಭಾರತ- ಆಸ್ಟ್ರೇಲಿಯಾ ನಡುವಣ ಸರಣಿ ಆರಂಭಕ್ಕೆ ದಿನಗಳು ಮಾತ್ರ ಬಾಕಿಯಿವೆ. ಇದಾಗ್ಯೂ ಟೀಮ್ ಇಂಡಿಯಾದಲ್ಲಿ ಸೂರ್ಯಕುಮಾರ್ ಅವರು ಇರಬೇಕಿತ್ತು ಎಂದು ವಿಶ್ವ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸೂರ್ಯ ಉತ್ತಮ ಬ್ಯಾಟ್ಸ್​ಮನ್, ಅವರು ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕಿತ್ತು ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ರಿಕೆಟ್ ಶೋವೊಂದರಲ್ಲಿ ಮಾತನಾಡಿದ ಲಾರಾ, ಭಾರತ ತಂಡವನ್ನು ನೋಡುವಾಗ ಸೂರ್ಯ ಕುಮಾರ್ ಯಾದವ್ ತಂಡದ ಭಾಗವಾಗದಿರಲು ನನಗೆ ಯಾವುದೇ ಕಾರಣ ಕಾಣಿಸುತ್ತಿಲ್ಲ. ಆತನನನ್ನು ಕೇವಲ ರನ್​ಗಳಿಂದ ಮಾತ್ರ ಅಳೆಯುತ್ತಿಲ್ಲ. ಸೂರ್ಯ ರನ್​ಗಳಿಸಿದ ರೀತಿಯಿಂದಲೂ ಪ್ರಭಾವಿತನಾಗಿರುವುದಾಗಿ ಇದೇ ವೇಳೆ ಲಾರಾ ಹೇಳಿದರು.

ಹೌದು, ಖಂಡಿತವಾಗಿಯು ಸೂರ್ಯಕುಮಾರ್ ಯಾದವ್ ಕ್ಲಾಸ್ ಪ್ಲೇಯರ್. ನಾನು ರನ್ ಗಳಿಸುವ ಆಟಗಾರರನ್ನು ನೋಡುವುದಿಲ್ಲ. ಅವರ ತಂತ್ರಗಾರಿಕೆ, ಒತ್ತಡದ ಸಮಯದ ಸಾಮರ್ಥ್ಯಗಳು, ಅವರು ಬ್ಯಾಟಿಂಗ್ ಮಾಡುತ್ತಿರುವ ಕ್ರಮಾಂಕ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. 30 ವರ್ಷದ ಕ್ರಿಕೆಟಿಗ ಆಯ್ಕೆಗೆ ಅರ್ಹನಾಗಿದ್ದ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಹೊಂದಿಕೊಳ್ಳುತ್ತಿದ್ದರು ಲಾರಾ ತಿಳಿಸಿದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ನವೆಂಬರ್ 27 ರಿಂದ ಆರಂಭವಾಗಲಿದ್ದು, ಉಳಿದೆರಡು ಮ್ಯಾಚ್​ಗಳು ನವೆಂಬರ್ 29 ಹಾಗೂ ಡಿಸೆಂಬರ್ 2 ರಂದು ನಡೆಯಲಿದೆ. ಹಾಗೆಯೇ ಮೊದಲ ಟಿ20 ಪಂದ್ಯ ಡಿಸೆಂಬರ್ 4 ರಂದು ನಡೆಯಲಿದ್ದು, ಡಿಸೆಂಬರ್ 6 ಮತ್ತು 8 ರಂದು 2ನೇ ಮತ್ತು 3ನೇ ಟಿ20 ಪಂದ್ಯ ಜರುಗಲಿದೆ.

ಇನ್ನು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಹಾಗೆಯೇ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ.

ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.10 ಕ್ಕೆ ಆರಂಭವಾಗಲಿದ್ದು, ಹಾಗೆಯೇ ಟಿ20 ಪಂದ್ಯಗಳು ಮಧ್ಯಾಹ್ನ 1.40 ಕ್ಕೆ ನಡೆಯಲಿದೆ. ಇನ್ನು ಡೇ-ನೈಟ್​ ಟೆಸ್ಟ್ ಪಂದ್ಯ ಬೆಳಿಗ್ಗೆ 9.30 ರಿಂದ ಆರಂಭವಾದರೆ, ಉಳಿದೆರೆಡು ಟೆಸ್ಟ್​ ಪಂದ್ಯಗಳು ಮುಂಜಾನೆ 5 ಕ್ಕೆ ಶುರುವಾಗಲಿದೆ.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 24, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading