25 ಎಸೆತಗಳಲ್ಲಿ ಸೆಂಚುರಿ: ಒಂದೇ ಓವರ್​ನಲ್ಲಿ 6 ಸಿಕ್ಸರ್: ನೂತನ ವಿಶ್ವದಾಖಲೆ ಬರೆದ ಯುವ ಆಟಗಾರ

ಇವೆಲ್ಲಕ್ಕಿಂತ ಹೆಚ್ಚಾಗಿ ವಿಶ್ವ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಖ್ಯಾತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಜಾಕ್ಸ್

ಜಾಕ್ಸ್

  • News18
  • Last Updated :
  • Share this:
ಕ್ರಿಕೆಟ್ ಜಗತ್ತು ಮತ್ತೊಂದು ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. ಇಂಗ್ಲೆಂಡ್​ನ ಬ್ಯಾಟ್ಸ್​​ಮನ್ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲಿಷ್ ಕೌಂಟಿ ಟಿ10 ಲೀಗ್​ನ ಸರ್ರೆ ತಂಡದ ಪರವಾಗಿ ಬ್ಯಾಟಿಂಗ್​ ಮಾಡಿದ ವಿಲ್​​ ಜಾಕ್ಸ್​ ಈ ಅದ್ವಿತೀಯ ಸಾಧನೆ ಮಾಡಿದ ಆಟಗಾರ.

ಲಂಕಾಷೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ 20 ರ ಹರೆಯದ ಜಾಕ್ಸ್​ ಅವರ ಬ್ಯಾಟ್​ನಿಂದ 8 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್​ಗಳು ಸಿಡಿದೆವು. ಅದರಲ್ಲೂ ಸ್ಟೀಫನ್ ಪೆರ್ರಿ ಓವರ್​ನಲ್ಲಿ ಸತತ 6 ಎಸೆತಗಳನ್ನು ಸಿಕ್ಸರ್​ಗೆ ಅಟ್ಟುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಒಂದೇ ಓವರ್​ನ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಾಕ್ಸ್​ ಸ್ಥಾನ ಪಡೆದಿದ್ದಾರೆ.


ಇವೆಲ್ಲಕ್ಕಿಂತ ಹೆಚ್ಚಾಗಿ ವಿಶ್ವ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಖ್ಯಾತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಟಿ20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್​ 31 ಎಸೆತಗಳಲ್ಲಿ ಶತಕ ಪೂರೈಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಜಾಕ್ಸ್​ ಕೇವಲ 25 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಯೋಧರಿಗಾಗಿ 175 ಎಕರೆ ಭೂಮಿ ದಾನ ಮಾಡಿದ ಕನ್ನಡ ನಟ ಸುಮನ್
First published: