ಧೋನಿಯ ಬ್ಯಾಟ್ ಮೆಟ್ಟಿದ ರೈನಾ ಆ ಬಳಿಕ ಮಾಡಿದ್ದೇನು? ವಿಡಿಯೋ ವೈರಲ್

ಧೋನಿ ಐಪಿಎಲ್‌ನಲ್ಲಿ 190 ಪಂದ್ಯಗಳಿಂದ 4432 ರನ್ ಗಳಿಸಿದ್ದಾರೆ. 137 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿರುವ ಕೂಲ್ ಕ್ಯಾಪ್ಟನ್ 23 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

zahir | news18-kannada
Updated:March 11, 2020, 5:41 PM IST
ಧೋನಿಯ ಬ್ಯಾಟ್ ಮೆಟ್ಟಿದ ರೈನಾ ಆ ಬಳಿಕ ಮಾಡಿದ್ದೇನು? ವಿಡಿಯೋ ವೈರಲ್
ಆದರೆ ರೈನಾ ಫಾರ್ಮ್​ನಲ್ಲಿರಲಿಲ್ಲ. ಇದೇ ವೇಳೆ ತಂಡದಲ್ಲಿ ಎಡಗೈ ಸ್ಪಿನ್ನರ್ ಕೊರತೆ ಇತ್ತು. ನಾನು ವಿಕೆಟ್ ಪಡೆಯುತ್ತಿದ್ದರಿಂದ ಅವರಿಗೆ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ತಂಡದಲ್ಲಿ ನನ್ನನ್ನು ಆರಿಸದೇ ಅವರಿಗೆ ಬೇರೆ ದಾರಿ ಇರಲಿಲ್ಲ ಎಂದಿದ್ದರು ಯುವರಾಜ್ ಸಿಂಗ್.
  • Share this:
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2020) 13ನೇ ಸೀಸನ್ ಮಾರ್ಚ್ 29 ರಿಂದ ಶುರುವಾಗಲಿದೆ. ಇದಕ್ಕಾಗಿ ಈಗಾಗಲೇ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಸಿಎಸ್​ಕೆ ತಂಡದ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕ ಆಟಗಾರರು ಚೆಪಾಕ್ ಕ್ರೀಡಾಂಗಣಕ್ಕೆ ತಾಲೀಮು ನಡೆಸುತ್ತಿದ್ದಾರೆ.

ಈ ಅಭ್ಯಾಸದ ಫೋಟೋಗಳು ಮತ್ತು ವಿಡಿಯೋಗಳು ಪ್ರತಿದಿನ ಹೊರಬೀಳುತ್ತಿದ್ದು, ಇದರೊಂದಿಗೆ ಚೆಪಾಕ್ ಕ್ರೀಡಾಂಗಣದಿಂದ ಮತ್ತೊಂದು ಕುತೂಹಲಕಾರಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನಲ್ಲಿ ಸುರೇಶ್ ರೈನಾ ತಮ್ಮ ನಾಯಕ ಧೋನಿಯ ಬ್ಯಾಟ್‌ಗೆ ಕ್ಷಮೆಯಾಚಿಸುತ್ತಿದ್ದಾರೆ.

ಅಸಲಿಗೆ, ರೈನಾ ಮತ್ತು ಧೋನಿ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಸುರೇಶ್ ರೈನಾ ಅವರ ಕಾಲು ಎಂಎಸ್​ಡಿ ಬ್ಯಾಟ್‌ಗೆ ಬಡಿಯಿತು. ಇದನ್ನರಿತ ರೈನಾ, ಧೋನಿಯ ಬ್ಯಾಟ್‌ಗೆ ಸ್ಪರ್ಶಿಸಿ ಕ್ಷಮೆಯಾಚಿಸಿದರು. ರೈನಾ ಮತ್ತು ಧೋನಿ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿಎಸ್​ಕೆ ತಂಡದ ಆಲ್​ರೌಂಡರ್ ಬ್ಯಾಟ್​ಗೆ ನೀಡಿದ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಧೋನಿಗೆ ಮಹತ್ವದ ಟೂರ್ನಿ:
ಈ ಬಾರಿ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಮಿಂಚಿದರೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಆಯ್ಕೆಗೆ ಪರಿಗಣಿಸಲಾಗುತ್ತದೆ​ ಎಂದು ಕೆಲ ದಿನಗಳ ಹಿಂದೆ ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ 13ನೇ ಸೀಸನ್ ಐಪಿಎಲ್ ಧೋನಿಯ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ನಿರ್ಧರಿಸಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್​ ಟೀಂ ಇಂಡಿಯಾ ಮಾಜಿ ನಾಯಕನ ಪಾಲಿಗೆ ಮಹತ್ವದ್ದಾಗಿದೆ.

ಧೋನಿ ಐಪಿಎಲ್‌ನಲ್ಲಿ 190 ಪಂದ್ಯಗಳಿಂದ 4432 ರನ್ ಗಳಿಸಿದ್ದಾರೆ. 137 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿರುವ ಕೂಲ್ ಕ್ಯಾಪ್ಟನ್ 23 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

2019 ರಲ್ಲಿ ಧೋನಿ 15 ಪಂದ್ಯಗಳಲ್ಲಿ 83.20 ಸರಾಸರಿಯಲ್ಲಿ 416 ರನ್ ಗಳಿಸಿದ್ದಾರೆ. 2018 ರ ಐಪಿಎಲ್‌ನಲ್ಲಿ  16 ಇನ್ನಿಂಗ್ಸ್‌ಗಳಲ್ಲಿ 75.83 ಸರಾಸರಿಯಲ್ಲಿ 455 ರನ್ ಗಳಿಸಿದ್ದಾರೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಮಹೇಂದ್ರ ಸಿಂಗ್ ಟೀಂ ಇಂಡಿಯಾಗೆ ಮರಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
First published: March 11, 2020, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading