ಶಸ್ತ್ರ ಚಿಕಿತ್ಸೆಗೆ ಒಳಗಾದ ಸುರೇಶ್ ರೈನಾ: 4 ರಿಂದ 6 ವಾರಗಳ ಕಾಲ ಕ್ರಿಕೆಟಿನಿಂದ ದೂರ

Suresh Raina : ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಫಿಟ್​ನೆಸ್ ಸಮಸ್ಯೆ ಹಾಗೂ ಕಳಪೆ ಫಾರ್ಮ್​ನಿಂದಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಾಗಿರಲಿಲ್ಲ.

zahir | news18-kannada
Updated:August 10, 2019, 4:31 PM IST
ಶಸ್ತ್ರ ಚಿಕಿತ್ಸೆಗೆ ಒಳಗಾದ ಸುರೇಶ್ ರೈನಾ: 4 ರಿಂದ 6 ವಾರಗಳ ಕಾಲ ಕ್ರಿಕೆಟಿನಿಂದ ದೂರ
suresh-raina
  • Share this:
ಭಾರತ ತಂಡದ ಆಟಗಾರ ಇನ್ನು ನಾಲ್ಕರಿಂದ ಆರು ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರ ಉಳಿಯಲಿದ್ದಾರೆ. ಕಳೆದ ಕೆಲ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಎಡಗೈ ದಾಂಡಿಗ ಇದೀಗ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಹೀಗಾಗಿ ಮುಂದಿನ 2 ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ ಎಂದು  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ. ಈ ಬಗ್ಗೆ ರೈನಾ ಆಸ್ಪತ್ರೆಗೆ ದಾಖಲಿರುವ ಫೋಟೋವನ್ನು ಬಿಸಿಸಿಐ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದೆ.

ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಫಿಟ್​ನೆಸ್ ಸಮಸ್ಯೆ ಹಾಗೂ ಕಳಪೆ ಫಾರ್ಮ್​ನಿಂದಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಾಗಿರಲಿಲ್ಲ. ಇದೀಗ ಮೊಣಕಾಲಿನ ನೋವು ತೀವ್ರಗೊಂಡಿದ್ದರಿಂದ ನೆದರ್​ಲ್ಯಾಂಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಕೆಲ ಕಾಲ ಮೈದಾನದಿಂದ ದೂರ ಉಳಿಯುವಂತೆ ವೈದ್ಯರು ಉತ್ತರ ಪ್ರದೇಶದ ಆಟಗಾರನಿಗೆ ತಿಳಿಸಿದ್ದಾರೆ.


Loading...ಟೀಂ ಇಂಡಿಯಾ ಪರ 18 ಟೆಸ್ಟ್, 226 ಏಕದಿನ ಮತ್ತು 78 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ರೈನಾ ಆಡಿದ್ದಾರೆ. ಕೊನೆಯ ಬಾರಿಗೆ ಜುಲೈ 2018 ರಲ್ಲಿ ಲೀಡ್ಸ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

 

First published:August 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...