cricketnext Updated:December 17, 2020, 12:20 PM IST
ಸುರೇಶ್ ರೈನಾ
- Cricketnext
- Last Updated:
December 17, 2020, 12:20 PM IST
ನವದೆಹಲಿ(ಡಿ. 17): ಕೆಲ ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಇದೀಗ ದೇಶೀಯ ಕ್ರಿಕೆಟ್ಗೆ ಅಣಿಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಯದ್ ಮುಷ್ತಾಕ್ ಅಲಿ ಟ್ರೋಫಿ ಸೀಮಿತ ಓವರ್ಗಳ ಟೂರ್ನಿಯಲ್ಲಿ ಅವರು ಆಡಲಿದ್ದಾರೆ. ತಮ್ಮ ಉತ್ತರ ಪ್ರದೇಶ ರಾಜ್ಯ ತಂಡದ ಪರವಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದಕ್ಕಾಗಿ ಕೆಲ ದಿನಗಳಿಂದ ಫಿಟ್ನೆಸ್ಗಾಗಿ ದೈಹಿಕ ಕಸರತ್ತು ನಡೆಸುತ್ತಿದ್ದಾರೆ. ನೆಟ್ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ಅವರು ಇದರ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ಇದೇ ಆಗಸ್ಟ್ ತಿಂಗಳಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಕೆಲ ವರ್ಷಗಳ ಕಾಲ ಅವರು ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲಿದ್ದಾರೆ. ಯುಎಇಯಲ್ಲಿ ನಡೆದ ಈ ಋತುವಿನ ಐಪಿಎಲ್ನಲ್ಲಿ ವೈಯಕ್ತಿಕ ಕಾರಣದಿಂದ ಆಡದ ಅವರು ಮುಂದಿನ ವರ್ಷದ ಐಪಿಎಲ್ನಲ್ಲಿ ಲಭ್ಯ ಇರಲಿದ್ದಾರೆ.
ಇನ್ನು, ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಾಗಿದ್ದು ಸುರೇಶ್ ರೈನಾ ಅವರಿಗೆ ಹೇಳಿ ಮಾಡಿಸಿದ್ದಾಗಿದೆ. ಈ ವರ್ಷದ ನವೆಂಬರ್ ಡಿಸೆಂಬರ್ನಲ್ಲೇ ಈ ಟೂರ್ನಿ ನಡೆಯಬೇಕಿದ್ದರೂ ಕೋವಿಡ್ ಕಾರಣದಿಂದಾಗಿ ಜನವರಿ 10ರಿಂದ 31ರವರೆಗೆ ನಡೆಯುತ್ತಿದೆ. ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್, ಮುಂಬೈ, ಚೆನ್ನೈ, ಅಹ್ಮದಾಬಾದ್ನಲ್ಲಿ ಟೂರ್ನಿಯ ಪಂದ್ಯಗಳು ನಡೆಯಲು ನಿಗದಿಯಾಗಿವೆ. ಕರ್ನಾಟಕ ಕಳೆದ ಬಾರಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೂರ್ನಿಯ ಮೊದಲ ಪಂದ್ಯ ಕರ್ನಾಟಕ ವರ್ಸಸ್ ಜಮ್ಮು ಕಾಶ್ಮೀರ ಮಧ್ಯೆ ನಡೆಯಲಿದೆ.ಮತ್ತೊಬ್ಬ ಮಾಜಿ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರೂ ಪಂಜಾಬ್ ರಾಜ್ಯ ತಂಡವನ್ನು ಪ್ರತಿನಿಧಿಸಿ ಈ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ.
Published by:
Vijayasarthy SN
First published:
December 17, 2020, 12:20 PM IST