• Home
 • »
 • News
 • »
 • sports
 • »
 • IPL ನಲ್ಲಿ ಸ್ಥಾನ ಸಿಗದಿದ್ದಕ್ಕೆ ವಿಶೇಷ ಮನವಿ ಮಾಡಿದ Suresh Raina

IPL ನಲ್ಲಿ ಸ್ಥಾನ ಸಿಗದಿದ್ದಕ್ಕೆ ವಿಶೇಷ ಮನವಿ ಮಾಡಿದ Suresh Raina

ಸುರೇಶ್ ರೈನಾ

ಸುರೇಶ್ ರೈನಾ

Suresh Raina Video: ಸೈಲೆಂಟಾಗಿ ಇದ್ದ ರೈನಾ ಈಗ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.ವಿಡಿಯೋದಲ್ಲಿ, ಆಟಗಾರರನ್ನು ಯಾವುದೇ ಐಪಿಎಲ್ ತಂಡ ತೆಗೆದುಕೊಳ್ಳದಿದ್ದರೆ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಆಡದಿದ್ದರೆ, ಬಿಸಿಸಿಐ ಆಟಗಾರರನ್ನು ಹೊರಗಿನ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಬೇಕು ಎಂದಿದ್ದಾರೆ  ಸುರೇಶ್‌ ರೈನಾ

ಮುಂದೆ ಓದಿ ...
 • Share this:

  ಇಂಡಿಯನ್​ ಪ್ರೀಮಿಯರ್​ ಲೀಗ್(IPL)​ ಮೆಗಾ ಹರಾಜಿಗೆ(Mega Auction) ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಮಿಸ್ಟರ್​ ಐಪಿಎಲ್​(Mr.IPL) ಸುರೇಶ್​ ರೈನಾ(Suresh Raina) ಅನ್​ಸೋಲ್ಡ್(Un sold)​ ಆಗಿರೋದು ಹಾಟ್​​ ಚರ್ಚೆಗೆ ಕಾರಣವಾಗಿದೆ. 2 ಕೋಟಿ ರೂ ಮೂಲಬೆಲೆಯುಳ್ಳ ಸುರೇಶ್ ರೈನಾ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್​ ಸೋಲ್ಡ್​ ಆಗಿದ್ದರು. 12 ವರ್ಷ ಸಿಎಸ್​ಕೆ(CSK) ಫ್ರಾಂಚೈಸಿಗೆ ಆಗಿದ್ದರಿಂದ ಮೂಲಬೆಲೆಗಾದರೂ ಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರು ಬಿಡ್​ ಕೂಡ ಮಾಡಲಿಲ್ಲ. ಇದಾದ ಬಳಿಕ ಇಷ್ಟು ದಿನ ಸೈಲೆಂಟ್ ಆಗಿದ್ದ ರೈನಾ ಐಪಿಎಲ್ ನಲ್ಲಿ ಹಾರಾಜು ಆಗದ ಇದ್ದಿದ್ದರೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


  ವಿದೇಶಿ ಲೀಗ್​ಗಳಲ್ಲಿ ಮಾಡಲು ಅನುಮತಿ ಕೇಳಿದ ರೈನಾ


  ಐಪಿಎಲ್ ನಲ್ಲಿ ಹರಾಜು ಆಗದೇ ಉಳಿದುಕೊಂಡ ಬಳಿಕ ಸೈಲೆಂಟಾಗಿ ಇದ್ದ ರೈನಾ ಈಗ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.ವಿಡಿಯೋದಲ್ಲಿ, ಆಟಗಾರರನ್ನು ಯಾವುದೇ ಐಪಿಎಲ್ ತಂಡ ತೆಗೆದುಕೊಳ್ಳದಿದ್ದರೆ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಆಡದಿದ್ದರೆ, ಬಿಸಿಸಿಐ ಆಟಗಾರರನ್ನು ಹೊರಗಿನ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಬೇಕು. ಅದು ಸಿಪಿಎಲ್ ಅಥವಾ ಬಿಗ್ ಬ್ಯಾಷ್ ಲೀಗ್ ಆಗಿರಲಿ, ಆಟಗಾರರು ಅಲ್ಲಿಗೆ ಹೋಗಿ ಪ್ರದರ್ಶನ ನೀಡುತ್ತಾರೆ ಇದರಿಂದ ಅವರು ಮತ್ತೆ ತಂಡಕ್ಕೆ ಹಿಂತಿರುಗಬಹುದು.


  ಇದನ್ನೂ ಓದಿ: ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ


  ವಿದೇಶಿ ಆಟಗಾರರು ಐಪಿಎಲ್‌ಗೆ ಬಂದು ಉತ್ತಮ ಪ್ರದರ್ಶನ ನೀಡಿ ನಂತರ ತಮ್ಮ ತಂಡಗಳಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ನಮಗೂ ಇತರೆ ಲೀಗ್​ಗಳಲ್ಲಿ ಆಡಲು ಅವಕಾಶ ಕೊಡಿ. ನಾವು ಕೂಡ ಇತರ ಲೀಗ್​ಗಳಲ್ಲಿ ಆಡಲು ಸಿದ್ಧರಿದ್ದೇವೆ. ಎಲ್ಲರೂ ನಮ್ಮನ್ನು ನಿರ್ಲಕ್ಷಿಸಿದರೆ, ನಮಗೆ ಪ್ಲಾನ್ ಬಿ ಇಲ್ಲ ಎಂದು ತೋರುತ್ತದೆ. ಹಾಗಾಗಿ ನಾವು ಇತರ ವಿದೇಶಿ ಲೀಗ್​ಗಳಲ್ಲಿ ಆಡಿ, ಫಿಟ್ ಆಗಿರುತ್ತೇವೆ, ನಂತರ ನಮ್ಮ ಲೀಗ್​ನಲ್ಲಿ ಚೆನ್ನಾಗಿ ಆಡುತ್ತೇವೆ ಎಂದಿದ್ದಾರೆ.  2020ರಲ್ಲಿ ಅರ್ಧಕ್ಕೆ IPL ತೊರೆದಿದ್ದ ರೈನಾ


  2008ರಿಂದ 2021ರ ವರೆಗೂ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್‌ ರೈನಾ ( ಒಟ್ಟು ₹110.7 ಕೋಟಿ) ಅವರನ್ನು ಈ ಬಾರಿ ಯಾವುದೇ ತಂಡ ಆಯ್ಕೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರೈನಾ ಬಿಕರಿಯಾಗದೆ ಉಳಿದಿದ್ದಾರೆ. 2021ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದ ಅವರು ಕೇವಲ 160 ರನ್‌ ಗಳಿಸಿದ್ದರು. ಬ್ಯಾಟಿಂಗ್‌ ಸರಾಸರಿ 17.77 ದಾಖಲಾಗಿತ್ತು. ಇನ್ನು 2020ರಲ್ಲಿ ಸುರೇಶ್ ರೈನಾ ತಮ್ಮ ವೈಯಕ್ತಿಕ ಕಾರಣಗಳಿಂದ ಐಪಿಎಲ್ ಆವೃತ್ತಿಯನ್ನು ಮಧ್ಯದಲ್ಲಿಯೇ ತೊರೆದಿದ್ದರು. ಇನ್ನು 2021 ರ ಐಪಿಎಲ್ ಅವರಿಗೆ ಉತ್ತಮವಾಗಿಲ್ಲ. ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದಾಗಿ ರೈನಾ ಕೊನೆಯ ಕೆಲವು ಪಂದ್ಯಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ.


  ಐಪಿಎಲ್‌ ಇತಿಹಾಸದಲ್ಲಿ 5 ಸಾವಿರ ರನ್‌ ಪೇರಿಸಿದ ಮೊದಲ ಆಟಗಾರ, ಚೆನ್ನೈ ಪರ ಅತ್ಯಧಿಕ ರನ್‌, ಅತ್ಯಧಿಕ ಅರ್ಧ ಶತಕ, ಅತ್ಯಧಿಕ ಸಿಕ್ಸರ್‌ ಬಾರಿಸಿದ ಹೆಗ್ಗಳಿಕೆ ಸುರೇಶ್‌ ರೈನಾ ಅವರದು. ಆದರೆ ವೈಯಕ್ತಿಕ ಕಾರಣಗಳಿಂದ ಕಳೆದ ಯುಎಇ ಆವೃತ್ತಿಯನ್ನು ತ್ಯಜಿಸಿ ಭಾರತಕ್ಕೆ ವಾಪಸಾದ ಬಳಿಕ ರೈನಾ ಮೂಲೆಗುಂಪಾಗಬೇಕಾಯಿತು. ಜತೆಗೆ ಅವರ ಫಾರ್ಮ್ ಕೂಡ ಕೈಕೊಟ್ಟಿತ್ತು. ಪರಿಣಾಮ ಅವರನ್ನು ಯಾವುದೇ ಐಪಿಎಲ್​ ತಂಡ ಖರೀದಿಸಿಲ್ಲ..


  ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಭಾವುಕ ಪತ್ರ ಬರೆದ ಯುವರಾಜ್ ಸಿಂಗ್, ಗೋಲ್ಡನ್ ಶೂ ಗಿಫ್ಟ್


  ರೈನಾ ಫಾರ್ಮ್ ಉತ್ತಮವಾಗಿರಲಿಲ್ಲ ಎಂದಿದ್ದ CSK
  ಸಿಇಒ ಕಾಶಿ


  ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕಾಶಿ ವಿಶ್ವನಾಥನ್‌, ರೈನಾ ಕಳೆದ 12 ಆವೃತ್ತಿಗಳಲ್ಲಿ ತಂಡದ ಸ್ಥಿರ ಆಟಗಾರ. ಖಂಡಿತಾ, ರೈನಾ ಅವರನ್ನು ಕಳೆದುಕೊಂಡಿರುವುದು ಬಹಳಾ ಬೇಸರ ತಂದಿದೆ. ಆದರೆ, ತಂಡದ ಸಂಯೋಜನೆ ಫಾರ್ಮ್​ ಆಧಾರವನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಯಾವುದೇ ತಂಡವಾದರೂ ಕೂಡ ಇದೇ ಫಾರ್ಮುಲಾ ಅನುಸರಿಸುತ್ತವೆ. ಹಾಗಾಗಿ ತಂಡದ ಈಗಿನ ಸಂಯೋಜನೆಗೆ ರೈನಾಗೆ ಸೂಕ್ತ ಸ್ಥಾನ ಹೊಂದಿಕೆಯಾಗುವುದಿಲ್ಲ ಎಂದು ನಾವು ಭಾವಿಸಿದೆವು ಎಂದು ತಿಳಿಸಿದ್ದಾರೆ.

  Published by:ranjumbkgowda1 ranjumbkgowda1
  First published: