ಸದ್ಯ ಸಿನಿ ಜಗತ್ತಿನಲ್ಲಂತೂ ‘ಪುಷ್ಪಾ’ (Pushpa) ಸಿನಿಮಾದ್ದೇ ಟಾಕ್ಸ್. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಫುಲ್ ಅಬ್ಬರಿಸಿದ್ದು ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun). ಒಂದೆಡೆ ‘ಊ ಅಂಟಾವಾ ಮಾವ’ ಅಂತ ನಟಿ ಸಮಂತಾ ರಸಿಕರ ಎದೆಯಲ್ಲಿ ಕಿಚ್ಚು ಹಚ್ಚಿದ್ದರು. ಮತ್ತೊಂದೆಡೆ ಶ್ರೀವಲ್ಲಿಯಾಗಿ ‘ನ್ಯಾಷನಲ್ ಕ್ರಶ್’ (National Crush) ರಶ್ಮಿಕಾ ಮಂದಣ್ಣ (Rashmika Mandanna) ಹುಡುಗರ ನಿದ್ದೆಗೆಡಿಸಿದ್ದರು. ‘ಶ್ರೀವಲ್ಲಿ’ ಸಾಂಗ್ ಅಂತೂ (Srivalli Song) ಪಡ್ಡೆಗಳ ಬಾಯಿಪಾಠವಾಗಿತ್ತು. ಇದೀಗ ಈ ಹಾಡು ಕ್ರಿಕೆಟರ್ ಗಳನ್ನೂ ಕಾಡುತ್ತಿದೆ. ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಶ್ರೀವಲ್ಲಿ ಹಾಡಿಗೆ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ. ರೈನಾ ಡ್ಯಾನ್ಸ್ ವಿಡಿಯೋ ಇದೀಗ ಸಖತ್ ವೈರಲ್ (Viral) ಆಗಿದೆ.
ಮನೆಯಲ್ಲೇ ಸುರೇಶ್ ರೈನಾ ‘ಶ್ರೀವಲ್ಲಿ’ ಡ್ಯಾನ್ಸ್
ಶ್ರೀವಲ್ಲಿ ಡ್ಯಾನ್ಸ್ ಗೆ ಈಗಾಗಲೇ ಸಾಕಷ್ಟು ಸಿನಿತಾರೆಯರು, ಕ್ರಿಕೆಟಿಗರು ಹೆಜ್ಜೆ ಹಾಕಿದ್ದಾರೆ. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಪ್ರತಿನಿಧಿಸುವ ಆಸ್ಟ್ರೇಲಿಯಾದ ಖ್ಯಾತ ಪ್ಲೇಯರ್ ಡೇವಿಡ್ ವಾರ್ನರ್, ರವೀಂದ್ರ ಜಡೇಜಾ, ಯುವ ಆಟಗಾರರಾದ ಈಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಸುರೇಶ್ ರೈನಾ ಸರದಿ.
ಮನೆಯಲ್ಲೇ ಸುರೇಶ್ ರೈನಾ ಕುಣಿದಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ರೈನಾ ಕುಣಿತ ವೈರಲ್ ಆಗಿದೆ. ಒರಿಜಿನಲ್ಲಿ ವಿಡಿಯೋದಲ್ಲಿ ಅಲ್ಲು ಅರ್ಜುನ್ ಮಾಡಿರೋ ಸ್ನಿಗೇಚರ್ ಸ್ಟೆಪ್ ಸಾಕಷ್ಟು ಫೇಮಸ್ ಆಗಿತ್ತು. ಅದೇ ಶೈಲಿಯನ್ನು ಅನುಕರಿಸಿರೋ ಪ್ರಯತ್ನ ಮಾಡಿರುವ ರೈನಾ, ತಮ್ಮದೇ ಸ್ಟೈಲ್ ನಲ್ಲಿ ಕುಣಿದಿದ್ದಾರೆ. ಹಿಂದಿ ಅವತರಣಿಕೆಯ ಹಾಡಿಗೆ ಫ್ಯಾಮಿಲಿ ಸದಸ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಯೆಲ್ಲೋ ಟೀಶರ್ಟ್, ಶಾರ್ಟ್ ತೊಟ್ಟಿರೋ ರೈನಾ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಕುಣಿದಿದ್ದಾರೆ.
View this post on Instagram
ಇದನ್ನೂ ಓದಿ: IPL 2021 Qualifier 1| ರೈನಾ ಇಲ್ಲದ ಮೊದಲ ಕ್ವಾಲಿಫೈಯರ್ ಆಡಿದ ಚೆನ್ನೈ; ಪಂದ್ಯ ಗೆದ್ದರೂ ಅಭಿಮಾನಿಗಳಿಗೆ ಭಾರೀ ನಿರಾಸೆ
ಸಡನ್ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟಿದ್ದ ರೈನಾ
2020, ಆಗಸ್ಟ್ 15ರಂದು ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದರು. ಆಪ್ತ ಸ್ನೇಹಿತ, ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ನಿವೃತ್ತಿ ಬೆನ್ನಲ್ಲೇ ರೈನಾ ಕೂಡ ಗುಡ್ ಬೈ ಹೇಳಿದ್ದರು. ಅಗ್ರಸ್ಸಿವ್ ಎಡಗೈ ಬ್ಯಾಟ್ಸ್ ಮನ್ ಆಗಿದ್ದ ರೈನಾ, ಉತ್ತಮ ಫಾರ್ಮ್ ನಲ್ಲಿದ್ದಾಗೇ ಟೀಂ ಇಂಡಿಯಾ ತೊರೆದಿದ್ದರು. ಯಲ್ಲೋ ಜರ್ಸಿ ತೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರೈನಾ, ಧೋನಿ ಟೀಂನ ಅತಿದೊಡ್ಡ ಶಕ್ತಿಯಾಗಿದ್ದರು. ಅಂತಹ ಹೊತ್ತಲ್ಲೇ ವಿದಾಯ ಹೇಳಿ ಎಲ್ಲರಲ್ಲೂ ಅಚ್ಚರಿ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ್ದರು.
ಇದೀಗ ಶ್ರೀವಲ್ಲಿಯ ವಿಡಿಯೋ ಮೂಲಕ ರೈನಾ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟಿಗರು ಶ್ರೀವಲ್ಲಿ ಮೋಡಿಗೆ ಒಳಗಾಗಿದ್ದು, ಈಗ ಸುರೇಶ್ ರೈನಾ ವಿಡಿಯೋ ವೈರಲ್ ಆಗಿದೆ. ಕ್ರಿಕೆಟಿಗನ ಡ್ಯಾನ್ಸ್ ನೋಡಿ ಪುಷ್ಪ ಅಭಿಮಾನಿಗಳು ಬಹುಪರಾಕ್ ಅಂತಿದ್ದಾರೆ.
(ಬರಹ: ಅಣ್ಣಪ್ಪ ಆಚಾರ್ಯ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ