ಕ್ಲಾಸ್ ಬಂಕ್ ಮಾಡಿ ಸಚಿನ್ ಬ್ಯಾಟಿಂಗ್ ನೋಡುತ್ತಿದ್ದ ಟೀಂ ಇಂಡಿಯಾ ಆಟಗಾರ ಯಾರು ಗೊತ್ತೇ?

1998ರಲ್ಲಿ ಶಾರ್ಜಾದಲ್ಲಿ ನಡೆದ ಕೋಕಾ ಕೋಲ ಕಪ್‌ ಪಂದ್ಯಾವಳಿ ಸಚಿನ್‌ ತೆಂಡುಲ್ಕರ್‌ ಅವರ ಅಮೋಘ ಮೆರೆದಾಟಕ್ಕೆ ಸಾಕ್ಷಿಯಾಗಿತ್ತು. ಅಂದು ಆಸ್ಟ್ರೇಲಿಯ ವಿರುದ್ಧ ಸಚಿನ್‌ ಬೆನ್ನು ಬೆನ್ನಿಗೆ ಶತಕ ಬಾರಿಸಿ ಅಬ್ಬರಿಸಿದ್ದರು. ತಾನಿದನ್ನು ಕ್ಲಾಸಿಗೆ ಚಕ್ಕರ್‌ ಹೊಡೆದು ಕಣ್ತುಂಬಿಸಿಕೊಂಡಿದ್ದೆ

news18-kannada
Updated:June 2, 2020, 12:24 PM IST
ಕ್ಲಾಸ್ ಬಂಕ್ ಮಾಡಿ ಸಚಿನ್ ಬ್ಯಾಟಿಂಗ್ ನೋಡುತ್ತಿದ್ದ ಟೀಂ ಇಂಡಿಯಾ ಆಟಗಾರ ಯಾರು ಗೊತ್ತೇ?
ಸಚಿನ್ ತೆಂಡೂಲ್ಕರ್ ಹಾಗೂ ಸುರೇಶ್ ರೈನಾ.
  • Share this:
ಭಾರತೀಯ ಕ್ರಿಕೆಟ್ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ ಕೊಡುಗೆ ಅಪಾರ. ಅನೇಕ ದಾಖಲೆಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿರುವ ಕ್ರಿಕೆಟ್ ದೇವರು ಅದೆಷ್ಟೊ ಆಟಗಾರರಿಗೆ ಮಾದರಿಯಾಗಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್​ನಲ್ಲೂ ದ್ವಿಶತಕ ಸಿಡಿಸಬಹುದು ಎಂಬುವುದನ್ನು ತೋರಿಸಿಕೊಟ್ಟವರು. ಆ ಬಳಿಕ ರೋಹಿತ್ ಶರ್ಮಾ ಸೇರಿ ಇತರೆ ಆಟಗಾರರು ಈ ಸಾಧನೆ ಮಾಡಿದರು.

ಹೀಗೆ ಬ್ಯಾಟಿಂಗ್​ನಲ್ಲಿ ತನ್ನದೆ ಆದ ವಿಶಿಷ್ಠ ಛಾಪು ಮೂಡಿಸಿದ್ದ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್​ನ ಆರಾಧ್ಯ ದೈವ ಕೂಡ ಹೌದು. ಒಂದು ಕಾಲದಲ್ಲಿ ಸಚಿನ್‌ ತೆಂಡುಲ್ಕರ್‌ ಬ್ಯಾಟಿಂಗ್‌ ನೋಡಲು ಅದೆಷ್ಟೊ ಅಭಿಮಾನಿಗಳು ಕಾದುಕುಳಿತಿದ್ದರು. ತೆಂಡೂಲ್ಕರ್‌ ಕ್ರೀಸಿನಲ್ಲಿದ್ದರೆ ಕ್ಲಾಸಿಗೆ ಬಂಕ್‌ ಮಾಡಿ ಟಿವಿ ಮುಂದೆ ಹಾಜರಿರುತ್ತಿದ್ದ ವಿದ್ಯಾರ್ಥಿಗಳೂ ಇದ್ದರು. ಇದರಿಂದ ಸುರೇಶ್‌ ರೈನಾ ಕೂಡ ಹೊರತಾಗಿರಲಿಲ್ಲ!

ಶ್ರೀಲಂಕಾ ಬ್ಯಾಟ್ಸ್​ಮನ್ ಕೂತ ಜಾಗದಲ್ಲೇ ಕೂತು ಲಾರ್ಡ್ಸ್​ನಲ್ಲಿ ಶತಕ ಸಿಡಿಸಿದ್ದರು ರಾಹುಲ್ ದ್ರಾವಿಡ್..!

1998ರಲ್ಲಿ ಶಾರ್ಜಾದಲ್ಲಿ ನಡೆದ ಕೋಕಾ ಕೋಲ ಕಪ್‌ ಪಂದ್ಯಾವಳಿ ಸಚಿನ್‌ ತೆಂಡುಲ್ಕರ್‌ ಅವರ ಅಮೋಘ ಮೆರೆದಾಟಕ್ಕೆ ಸಾಕ್ಷಿಯಾಗಿತ್ತು. ಅಂದು ಆಸ್ಟ್ರೇಲಿಯ ವಿರುದ್ಧ ಸಚಿನ್‌ ಬೆನ್ನು ಬೆನ್ನಿಗೆ ಶತಕ ಬಾರಿಸಿ ಅಬ್ಬರಿಸಿದ್ದರು. ತಾನಿದನ್ನು ಕ್ಲಾಸಿಗೆ ಚಕ್ಕರ್‌ ಹೊಡೆದು ಕಣ್ತುಂಬಿಸಿಕೊಂಡಿದ್ದೆ ಎಂದು ರೈನಾ ನೆನಪಿಸಿಕೊಂಡಿದ್ದಾರೆ. ಅಂದ ಹಾಗೆ ರೈನಾಗೆ ಅಂದು ಕೇವಲ 12 ವರ್ಷ.

"ನಾನು 7ನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನನಗೆ ಸಚಿನ್ ತೆಂಡೂಲ್ಕರ್‌ ಅವರ ಬ್ಯಾಟಿಂಗ್ ನೋಡೋದು ಅಂದ್ರೆ ಸಖತ್‌ ಕ್ರೇಜ್‌. ಇದೇ ವೇಳೆ 1998ರಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಏಕದಿನ ಸರಣಿ ನಡೀತಿತ್ತು. ಆಗ ನಾನು ಶಾಲೆಯ ಕೊನೆಯ ಎರಡು ಕ್ಲಾಸ್‌ಗಳನ್ನು ಬಂಕ್ ಮಾಡಿ ದೂರದರ್ಶನದಲ್ಲಿ ಬರುತ್ತಿದ್ದ ಕ್ರಿಕೆಟ್‌ ನೋಡೋಕೆ ಮನೆಗೆ ಹೋಗ್ತಿದ್ದೆ. ಆಗ 'ಪಾಜಿ'(ಸಚಿನ್ ತೆಂಡೂಲ್ಕರ್) ಓಪನಿಂಗ್ ಬ್ಯಾಟ್ಸ್‌ಮನ್ ಆಗಿದ್ದರು. ನಾವು ನೋಡುತ್ತಿದ್ದುದು ಸಚಿನ್‌ ಪಾಜಿ ಮತ್ತು ದ್ರಾವಿಡ್‌ ಬಾಯ್‌ ಆಟ ಮಾತ್ರ. ಸಚಿನ್‌ ಔಟಾದೊಡನೆ ನಾವು ಖಾಲಿ ಮಾಡುತ್ತಿದ್ದೆವು" ಎಂದು ಸುರೇಶ್‌ ರೈನಾ ನೆನಪಿಸಿಕೊಂಡರು.

ಟೀಮ್ ಇಂಡಿಯಾ ಪರ ಧೋನಿ ಆಟ ಮುಗಿದಿದೆ: ಸಹ ಆಟಗಾರನಿಂದ ಅಚ್ಚರಿಯ ಹೇಳಿಕೆ..!

2018-19ರಸಾಲಿನಲ್ಲಿ ಸುರೇಶ್‌ ರೈನಾ ದೇಶಿ ಟೂರ್ನಿಗಳಲ್ಲಿ ನೀಡಿದ್ದ ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಪರಿಣಾಮ ಅವರು ಮತ್ತೆ ಭಾರತ ತಂಡಕ್ಕೆ ಮರಳಿ ಆಯ್ಕೆ ಆಗಲಿಲ್ಲ. 33 ವರ್ಷದ ಸ್ಟೈಲಿಷ್‌ ಎಡಗೈ ಬ್ಯಾಟ್ಸ್‌ಮನ್‌ ಟೀಂ ಇಂಡಿಯಾ ಪರ 226 ಒಡಿಐ ಮತ್ತು 78 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದು, ಟೆಸ್ಟ್‌ನಲ್ಲೂ 18 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 2018ರಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ ಬಳಿಕ ರೈನಾ ಅವರನ್ನು ಭಾರತ ತಂಡದಿಂದ ಹೊರಗಿಡಲಾಗಿದೆ.
First published: June 2, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading