ಕ್ರೀಡೆ

  • associate partner
HOME » NEWS » Sports » CRICKET SUNRISERS HYDERABAD NAME TOM MOODY AS DIRECTOR OF CRICKET AHEAD OF IPL 2021 ZP

IPL 2021: ಹಳೇ ಕೋಚ್​ನ್ನು ಹೊಸ ಜವಾಬ್ದಾರಿಯೊಂದಿಗೆ ಮತ್ತೆ ಕರೆಸಿಕೊಂಡ ಸನ್​ರೈಸರ್ಸ್​ ಹೈದರಾಬಾದ್

7 ವರ್ಷಗಳ ಕಾಲ ಎಸ್​ಆರ್​ಹೆಚ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಟಾಮ್ ಮೂಡಿ, ತಮ್ಮ ಅವಧಿಯಲ್ಲಿ ತಂಡವನ್ನು 5 ಬಾರಿ ಪ್ಲೇ ಆಫ್ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

news18-kannada
Updated:December 16, 2020, 8:58 PM IST
IPL 2021: ಹಳೇ ಕೋಚ್​ನ್ನು ಹೊಸ ಜವಾಬ್ದಾರಿಯೊಂದಿಗೆ ಮತ್ತೆ ಕರೆಸಿಕೊಂಡ ಸನ್​ರೈಸರ್ಸ್​ ಹೈದರಾಬಾದ್
SRH
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2021 ಸಿದ್ಧತೆಗಳು ಶುರುವಾಗಿದೆ. ಐಪಿಎಲ್ ಸೀಸನ್ 14 ನಲ್ಲಿ ಹೊಸ ತಂಡಗಳ ಸೇರ್ಪಡೆಯಾಗುವ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ಡಿಸೆಂಬರ್ 24 ರಂದು ಬಿಸಿಸಿಐ ಪ್ರಕಟಿಸುವ ಸಾಧ್ಯತೆಯಿದೆ. ಅದರೊಂದಿಗೆ ಈ ಬಾರಿ ಮೆಗಾ ಹರಾಜು ನಡೆಸುವ ಬಗ್ಗೆ ಕೂಡ ಮಾಹಿತಿ ಹೊರಬೀಳಲಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಫ್ರಾಂಚೈಸಿಗಳು ಸಹ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗೇ ಆರ್​ಸಿಬಿ ತಂಡದಲ್ಲಿದ್ದ ಪಾರ್ಥಿವ್ ಪಟೇಲ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಮುಂಬೈ ಇಂಡಿಯನ್ಸ್​ ತಂಡದ ಪ್ರತಿಭಾ ಅನ್ವೇಷಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತ ಸನ್​ರೈಸರ್ಸ್ ಹೈದರಾಬಾದ್ ತಂಡ ತಮ್ಮ ಮಾಜಿ ಕೋಚ್​ಗೆ ಹೊಸ ಜವಾಬ್ದಾರಿ ನೀಡಿ ತಂಡಕ್ಕೆ ಕರೆಸಿಕೊಂಡಿದ್ದಾರೆ.

ಹೌದು, ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಕೋಚ್ ಟಾಮ್ ಮೂಡಿ ಅವರನ್ನು ತಂಡದ ನೂತನ ಕ್ರಿಕೆಟ್‌ ನಿರ್ದೇಶಯಕನಾಗಿ ನೇಮಕ ಮಾಡಿದೆ. 2019ರವರೆಗೆ ಏಳು ವರ್ಷಗಳ ಕಾಲ ಎಸ್​ಆರ್​ಹೆಚ್ ತಂಡದ ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಕಾರ್ಯನಿರ್ವಹಿಸಿದ್ದರು. ಆದರೆ ಕಳೆದ ಸೀಸನ್​ನಲ್ಲಿ ಮುಖ್ಯ ಕೋಚ್ ಜವಾಬ್ದಾರಿಯನ್ನು ಇಂಗ್ಲೆಂಡ್ ತಂಡದ ಕೋಚ್ ಟ್ರೆವೊರ್ ಬೇಲಿಸ್ ಅವರಿಗೆ ವಹಿಸಲಾಗಿತ್ತು.




7 ವರ್ಷಗಳ ಕಾಲ ಎಸ್​ಆರ್​ಹೆಚ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಟಾಮ್ ಮೂಡಿ, ತಮ್ಮ ಅವಧಿಯಲ್ಲಿ ತಂಡವನ್ನು 5 ಬಾರಿ ಪ್ಲೇ ಆಫ್ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ 2016ರಲ್ಲಿ ಎಸ್​ಆರ್​ಹೆಚ್​ಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಡುವಲ್ಲಿ ಟಾಮ್ ಮೂಡಿ ಪ್ಲ್ಯಾನ್​ಗಳು ಪ್ರಮುಖ ಪಾತ್ರವಹಿಸಿತ್ತು.ಇದಾಗ್ಯೂ ಟಾಮ್ ಮೂಡಿ ಕಳೆದ ಸೀಸನ್​ಗೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ತೊರೆದಿದ್ದರು. ಇತ್ತ ಐಪಿಎಲ್ 2020ಯಲ್ಲೂ ಉತ್ತಮ ಪ್ರದರ್ಶನ ನೀಡಿದ ಎಸ್​ಆರ್​ಹೆಚ್​ ಪ್ಲೇ ಆಫ್ ಪ್ರವೇಶಿಸಿದರೂ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತು.

ಇದೀಗ ತಂಡದ ಡೆರೆಕ್ಟರ್ ಆಗಿ ಟಾಮ್ ಮೂಡಿ ಆಗಮನವಾಗಿದೆ. ಅತ್ತ ಇಂಗ್ಲೆಂಡ್​ಗೆ ವಿಶ್ವಕಪ್ ತಂದುಕೊಟ್ಟ ಕೋಚ್ ಟ್ರೆವೊರ್ ಬೇಲಿಸ್ ಕೋಚ್ ಆಗಿ ಮುಂದುವರೆಯುವ ಸಾಧ್ಯತೆಯಿದೆ. ಇವರಿಬ್ಬರ ನೆರವಿನಿಂದ ಮತ್ತೊಮ್ಮೆ ಐಪಿಎಲ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಭರ್ಜರಿ ಯೋಜನೆಯಲ್ಲಿದ್ದಾರೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ.
Published by: zahir
First published: December 16, 2020, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories