• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Sunil Gavaskar: ಐಸಿಸಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಹತ್ವದ ಸೂಚನೆ ನೀಡಿದ ಗವಾಸ್ಕರ್

Sunil Gavaskar: ಐಸಿಸಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಹತ್ವದ ಸೂಚನೆ ನೀಡಿದ ಗವಾಸ್ಕರ್

ಸುನೀಲ್ ಗವಾಸ್ಕರ್

ಸುನೀಲ್ ಗವಾಸ್ಕರ್

ಇಂದೋರ್ ಪಿಚ್‌ಗೆ ಐಸಿಸಿ ಸಂಸ್ಥೆಯು ನ್ಯೂನತೆ ಅಂಕಗಳನ್ನು ಪ್ರಕಟಿಸಿದ್ದರ ಕುರಿತು ಗವಾಸ್ಕರ್ ಸಂಸ್ಥೆಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಡೀಮೆರಿಟ್ ಅಂಕಗಳನ್ನು ನೀಡಿದ್ದಕ್ಕೆ ಟೀಕಿಸಿದ್ದಾರೆ. 

 • Share this:

  ಇಂದೋರ್‌: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನ್ನನುಭವಿಸಿದ ನಂತರ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trpophy) ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕಾಗಿ (Test Match) ಅಹಮದಾಬಾದ್‌ನಲ್ಲಿನ ಪಿಚ್ ಮೇಲೆ ಭಾರತ ತೀವ್ರ ಗಮನ ಹರಿಸಿದೆ. ಇಂದೋರ್‌ನಲ್ಲಿ ನಡೆದ ಸರಣಿಯಲ್ಲಿನ ಎಲ್ಲಾ ಮೂರು ಟೆಸ್ಟ್ ಪಂದ್ಯಗಳು ಮೂರು ದಿನಗಳಲ್ಲಿ ಕೊನೆಗೊಂಡಿದ್ದು ಪಿಚ್ ಕಳಪೆಯಾಗಿದೆ ಎಂಬ ಟೀಕೆಗೆ ಗುರಿಯಾಗಿದೆ. ಅಂತೆಯೇ ತಂಡಕ್ಕೆ ನ್ಯೂನತೆಯ ಅಂಕಗಳನ್ನು ತಂದಿವೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಪಿಚ್‌ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ತಂಡ ಸರ್ವಸನ್ನದ್ಧವಾಗಿ ಸಜ್ಜಾಗುತ್ತಿದೆ.


  ಭಾರತದ ಕ್ರಿಕೆಟ್ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಸುನಿಲ್ ಗವಾಸ್ಕರ್, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸರಣಿ ನಿರ್ಧಾರಕ್ಕೆ ಮುನ್ನ ಪಿಚ್‌ಗಳ ಗುಣಮಟ್ಟ ಕಾಯ್ದುಕೊಳ್ಳುವಂತೆ ಹಾಗೂ ಸಮತೋಲನವನ್ನು ನಿರ್ವಹಿಸುವಂತೆ ಕರೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಈ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಭಾರತ ಗೆಲುವು ದಾಖಲಿಸಿದರೂ ಐಸಿಸಿ ಡೀಮೆರಿಟ್ ಪಡೆಯಲು ಮೈದಾನವೇ ಕಾರಣವಾಗಬಹುದು ಎಂಬ ಸೂಚನೆ ನೀಡಿದ್ದಾರೆ.


  ಇಂದೋರ್ ಕ್ರಿಕೆಟ್ ಮೈದಾನಕ್ಕೆ ಕಳಪೆ ಅಂಕ
  ಇಂದೋರ್‌ನ ಹೋಲ್ಕಟ್ ಸ್ಟೇಡಿಯಂ ಪಿಚ್ ಅನ್ನು 'ಕಳಪೆ' ಎಂದು ಐಸಿಸಿ ರೇಟ್ ಮಾಡಿದ ನಂತರ ತಂಡಕ್ಕೆ ಮೂರು ಡಿಮೆರಿಟ್ (ನ್ಯೂನತೆ) ಅಂಕಗಳನ್ನು ನೀಡಲಾಗಿದೆ. 2012-13 ರಲ್ಲಿ ಗ್ರೇಮ್ ಸ್ವಾನ್ ಮತ್ತು ಮಾಂಟಿ ಪನೇಸರ್ ಇಂಗ್ಲೆಂಡ್ ಅನ್ನು ಗೆಲುವಿನತ್ತ ತಿರುಗಿಸಿದಾಗ ಈ ಪಿಚ್ ಹಿನ್ನಡೆ ಕಂಡುಕೊಂಡಿತು.


  "ಈ ಗುಣಮಟ್ಟದ ಪಿಚ್‌ಗಳನ್ನು ಹೊಂದುವುದು ಉತ್ತಮ ಆಲೋಚನೆ ಎಂದು ನಾನು ಭಾವಿಸುವುದಿಲ್ಲ. ಬ್ಯಾಟ್ ಮತ್ತು ಚೆಂಡಿನ ನಡುವೆ ಉತ್ತಮ ಸಮತೋಲನವಿರುವ ಪಿಚ್‌ಗಳನ್ನು ಆಟಗಾರರ ಹೊಂದಲು ಬಯಸುತ್ತಾರೆ.


  ಮೊದಲೆರಡು ದಿನಗಳವರೆಗೆ ಹೊಸ ಬೌಲರ್‌ಗಳು ಸ್ವಲ್ಪ ಸಹಕಾರಿಯಾಗಿರುವ ಪಿಚ್ ಅನ್ನು ಹೊಂದಲು ಬಯಸುತ್ತಾರೆ. ಬ್ಯಾಟ್ಸ್‌ಮನ್‌ಗಳು ಶ್ರೇಣಿಯಲ್ಲಿ ಆಡಬಹುದು. ರನ್ ಗಳಿಸಬಹುದು. ತದನಂತರ 3 ಮತ್ತು 4 ನೇ ದಿನದಿಂದ ಚೆಂಡು ಸ್ವಲ್ಪ ತಿರುಗುತ್ತದೆ" ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.


  ಅಹಮದಾಬಾದ್‌ನ ಸ್ಟೇಡಿಯಂ ಪಿಚ್ ಕಡೆಗೆ ಹೆಚ್ಚಿನ ಕಾಳಜಿ
  "ಅಹಮದಾಬಾದ್‌ನಲ್ಲಿ ಪಂದ್ಯ ಹೇಗೆ ನಡೆಯಲಿದೆ ಎಂಬುದು ನನಗೆ ತಿಳಿದಿಲ್ಲ. ಅಲ್ಲಿನ ಪಿಚ್ ಆಟಗಾರರಿಗೆ ಸಹಕಾರಿಯಾಗಿದ್ದರೆ ಭಾರತ ಗೆಲ್ಲುವ ಸಾಧ್ಯತೆ ಇದೆ. ಆದರೆ ಪಿಚ್ ನ್ಯೂನತೆ ಅಂಕಗಳನ್ನು ಪಡೆದುಕೊಳ್ಳಬಹುದು ಎಂಬ ಸಂದೇಹ ಕೂಡ ಇವೆ" ಎಂದು ಗವಾಸ್ಕರ್ ತಿಳಿಸಿದ್ದಾರೆ.


  ಇದನ್ನೂ ಓದಿ: WPL 2023: ಮ್ಯಾಥ್ಯೂಸ್​ ಸ್ಫೋಟಕ ಬ್ಯಾಟಿಂಗ್​ನಿಂದ ಮುಂಬೈಗೆ ಬ್ಯಾಕ್​ ಟು ಬ್ಯಾಕ್ ಗೆಲುವು, ಆರ್​ಸಿಬಿಗೆ ಸತತ 2ನೇ ಸೋಲು!
  ಐಸಿಸಿಯನ್ನು ತರಾಟೆಗೆ ತೆಗೆದುಕೊಂಡ ಗವಾಸ್ಕರ್
  ಇಂದೋರ್ ಪಿಚ್‌ಗೆ ಐಸಿಸಿ ಸಂಸ್ಥೆಯು ನ್ಯೂನತೆ ಅಂಕಗಳನ್ನು ಪ್ರಕಟಿಸಿದ್ದರ ಕುರಿತು ಗವಾಸ್ಕರ್ ಸಂಸ್ಥೆಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಡೀಮೆರಿಟ್ ಅಂಕಗಳನ್ನು ನೀಡಿದ್ದಕ್ಕೆ ಟೀಕಿಸಿದ್ದಾರೆ. ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯವು ಎರಡು ದಿನಗಳಲ್ಲಿ ಕೊನೆಗೊಂಡಾಗ ಗಬ್ಬಾ ಪಿಚ್‌ಗೆ ಎಷ್ಟು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.


  ಇದನ್ನೂ ಓದಿ: Team India: 28ರ ಯುವತಿ ಜೊತೆ 66 ವರ್ಷದ ಭಾರತೀಯ ಕ್ರಿಕೆಟಿಗನ ಮದುವೆ! ಮೊದಲ ಹೆಂಡತಿಯ ಗ್ರೀನ್‌ ಸಿಗ್ನಲ್, ಕಿಸ್ಸಿಂಗ್ ಫೋಟೋ ವೈರಲ್!


  ಇಂದೋರ್ ಮೈದಾನಕ್ಕೆ ಮಾತ್ರ ಏಕೆ ಕಳಪೆ ಪಟ್ಟ?
  "ಇಲ್ಲಿ ನಾನು ಸಂಸ್ಥೆಗೆ ಕೇಳುತ್ತಿರುವ ಪ್ರಶ್ನೆ ಹಾಗೂ ಇದಕ್ಕೆ ಉತ್ತರ ತಿಳಿದುಕೊಳ್ಳಲು ನಾನು ಬಯಸುತ್ತೇನೆ. ಅದೇನೆಂದರೆ ನವೆಂಬರ್‌ನಲ್ಲಿ ಬ್ರಿಸ್ಬೇನ್ ಗಬ್ಬಾದಲ್ಲಿ ಈ ಟೆಸ್ಟ್ ಪಂದ್ಯವಿತ್ತು, ಅಲ್ಲಿ ಪಂದ್ಯವು 2 ದಿನಗಳಲ್ಲಿ ಮುಗಿದಿದೆ. ಆ ಪಿಚ್ ಎಷ್ಟು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿತು ಮತ್ತು ಅಲ್ಲಿ ಮ್ಯಾಚ್ ರೆಫರಿ ಯಾರು? ನನ್ನ ಪ್ರಕಾರ 3 ಡಿಮೆರಿಟ್ ಅಂಕಗಳು ಸ್ವಲ್ಪ ಕಠೋರವಾದ ನಿರ್ಣಯ, ಇಂದೋರ್ ಮೈದಾನಕ್ಕೆ ಮಾತ್ರವೇ ಕಳಪೆ ಪಿಚ್ ಎಂಬ ಅಂಕಗಳನ್ನು ನೀಡಿದ್ದೇಕೆ ಇದು ನನಗೆ ಅರ್ಥವಾಗುತ್ತಿಲ್ಲ" ಎಂದು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು