IPL 2021: ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿಯೂ ಸೋಲಿಸಲು ಕಷ್ಟವಾಗುತ್ತದೆ; ಸುನೀಲ್‌ ಗವಾಸ್ಕರ್‌

IPL‌ 2021 ಅಂದರೆ ಈ ಋತುವಿನಲ್ಲಿ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಗೆಲ್ಲಲು ಮುಂಬೈ ಇಂಡಿಯನ್ಸ್ (ಎಂಐ) ಅಚ್ಚುಮೆಚ್ಚಿನ ತಂಡ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸುನೀಲ್‌ ಗವಾಸ್ಕರ್

ಸುನೀಲ್‌ ಗವಾಸ್ಕರ್

 • Share this:
  ಕೊರೋನಾ ಸಾಂಕ್ರಾಮಿಕದ ನಡುವೆಯೇ ಮತ್ತೊಂದು ಐಪಿಎಲ್‌ಗೆ ದೇಶದ ಕ್ರಿಕೆಟ್‌ ಪ್ರಿಯರು ಸಿದ್ಧವಾಗುತ್ತಿದ್ದಾರೆ. ಆರ್‌ಸಿಬಿ ಈ ಬಾರಿಯಾದರೂ ಕಪ್‌ ಗೆಲ್ಲುತ್ತಾ ಎಂದು ಆರ್‌ಸಿಬಿ ಅಭಿಮಾನಿಗಳು ಕುತೂಹಲದಿಂದ ಐಪಿಎಲ್‌ 2021 ಅನ್ನು ಎದುರು ನೋಡುತ್ತಿದ್ದಾರೆ. ಆದರೆ, ಈಗಾಗಲೇ ಐದು ಸೀಸನ್‌ಗಳಲ್ಲಿ ಚುಟುಕು ಆವೃತ್ತಿಯನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಇತರ ತಂಡಗಳಿಗೆ ಕಠಿಣ ಸ್ಪರ್ಧಿ ಎನಿಸಿದೆ. ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ ಮುಂಬೈ ಇಂಡಿಯನ್ಸ್ ತಂಡದ ಪರ ಬ್ಯಾಟ್‌ ಬೀಸಿದ್ದಾರೆ.

  ಐಪಿಎಲ್‌ 2021 ಅಂದರೆ ಈ ಋತುವಿನಲ್ಲಿ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಗೆಲ್ಲಲು ಮುಂಬೈ ಇಂಡಿಯನ್ಸ್ (ಎಂಐ) ಅಚ್ಚುಮೆಚ್ಚಿನ ತಂಡ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಎಂಐ ಎರಡು ಬಾರಿ ಸತತವಾಗಿವೈಪಿಎಲ್‌ ಟ್ರೋಫಿ ಗೆದ್ದಿರುವ ಹಾಲಿ ಚಾಂಪಿಯನ್ ಮತ್ತು ಬಲವಾದ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ ಅತ್ಯಂತ ಬಲವಾದ ತಂಡವನ್ನು ಹೊಂದಿದೆ.

  "ಮುಂಬೈ ಇಂಡಿಯನ್ಸ್ ಅನ್ನು ಸೋಲಿಸುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಅವರ ತಂಡದ ಆಟಗಾರರು ಫಾರ್ಮ್‌ಗೆ ಬರುತ್ತಿರುವುದನ್ನು ನಾವು ನೋಡಿದ್ದೇವೆ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಇಂಗ್ಲೆಂಡ್ ವಿರುದ್ಧ ಟಿ 20 ಅಂತಾರಾಷ್ಟ್ರೀಯ ಸರಣಿ ಮತ್ತು ಏಕದಿನ ಸರಣಿಯಲ್ಲಿ ಉತ್ತಮವಾಗಿ ಆಡಿದ್ದಾರೆ. ಅಲ್ಲದೆ, ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಭಾಗವಹಿಸಿದ ಮುಂಬೈ ಇಂಡಿಯನ್ಸ್ ಆಟಗಾರರು ತಾವು ಉತ್ತಮ ಫಾರ್ಮ್‌ನಲ್ಲಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ ” ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಮಾತನಾಡಿದ ಗವಾಸ್ಕರ್ ಹೇಳಿದರು.

  ಅವರ ಬೌಲಿಂಗ್ ತಂಡವನ್ನು ಭಾರತದ ಜಸ್ಪ್ರಿತ್ ಬುಮ್ರಾ ಮತ್ತು ನ್ಯೂಜಿಲೆಂಡ್‌ನ ಟೆಂಟ್ ಬೌಲ್ಟ್ ನೇತೃತ್ವ ವಹಿಸುತ್ತಿದ್ದರೆ, ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಶಕ್ತಿ ತುಂಬಿದ ಬ್ಯಾಟಿಂಗ್ ಲೈನ್ ಅಪ್‌ ಹೊಂದಿದ್ದಾರೆ.

  ಈ ಋತುವಿನಲ್ಲಿ ಅವರಿಗೆ ಹೆಚ್ಚುವರಿ ಬೋನಸ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬೌಲಿಂಗ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ 20 ಅಂತಾರಾಷ್ಟ್ರೀಯ ಸರಣಿಯಲ್ಲಿ ಬಲಗೈ ಆಟಗಾರ 17 ಓವರ್‌ಗಳನ್ನು ಬೌಲ್ ಮಾಡಿದ್ದಾರು. ಆ ಸರಣಿಯನ್ನು ಭಾರತ 3-2ರಿಂದ ಗೆದ್ದುಕೊಂಡಿತು. ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಅವರು ಒಂಬತ್ತು ಓವರ್‌ಗಳನ್ನು ಬೌಲ್‌ ಮಾಡಿದರು ಮತ್ತು ಆ ಪಂದ್ಯದಲ್ಲಿ ಎಕನಾಮಿಕಲ್‌ ಆಗಿದ್ದು, ಹೆಚ್ಚು ರನ್‌ ನೀಡಿರಲಿಲ್ಲ. ಅಲ್ಲದೆ, ಭಾರತ ಸರಣಿ ಗೆಲ್ಲಲು ಅವರೂ ಸಹ ಪ್ರಮುಖ ಪಾತ್ರ ವಹಿಸಿದ್ದರು.

  "ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮಾತ್ರವಲ್ಲ, ಅವರು ಒಂಬತ್ತು ಓವರ್‌ಗಳನ್ನು ಬೌಲ್ ಮಾಡುವುದನ್ನು ನೋಡುವುದು ಭಾರತ ತಂಡಕ್ಕೂ ಮುಖ್ಯವಾಗಿತ್ತು. ಅಂದರೆ ಅವರು ಒಂಬತ್ತು ಓವರ್ ಬೌಲ್‌ ಮಾಡಲು ಸಿದ್ಧರಾಗಿದ್ದಾರೆ ಎಂದರ್ಥ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್‌ನಲ್ಲಿ ನಡೆಯಲಿದೆ, ಅದಕ್ಕೆ ಇನ್ನೂ ಸಮಯವಿದೆ ಆದರೆ ಅವರು ಕಮ್‌ ಬ್ಯಾಕ್‌ ಮಾಡಿದ ರೀತಿ ಮುಂಬೈ ಮತ್ತು ಭಾರತೀಯ ಕ್ರಿಕೆಟ್‌ಗೆ ತುಂಬಾ ಒಳ್ಳೆಯದು ” ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ಸುನೀಲ್‌ ಗವಾಸ್ಕರ್‌ ಹೇಳಿದರು.
  First published: