HOME » NEWS » Sports » CRICKET SUNIL GAVASKAR POINTS OUT TECH PROBLEM WHY BATSMEN HIT ON THE HELMET SNVS

ಹೆಲ್ಮೆಟ್​ಗೆ ಬಡಿಯುವ ಚೆಂಡು; ಈಗಿನ ಬ್ಯಾಟ್ಸ್​ಮನ್​ಗಳು ತಪ್ಪೆಸಗುತ್ತಿರುವುದು ಏನು? ಗವಾಸ್ಕರ್ ಉತ್ತರ ಇಲ್ಲಿದೆ

ಬಹುತೇಕ ಇಂದಿನ ಬ್ಯಾಟುಗಾರರು ಫ್ರಂಟ್ ಪ್ರೆಸ್​ಗೆ ಮುಂದಾಗುತ್ತಾರೆ. ಬೌನ್ಸ್ ಪಿಚ್​ಗಳಲ್ಲಿ ಹೀಗೆ ಮುನ್ನುಗ್ಗಿ ಆಡುವುದು ತಾಂತ್ರಿಕವಾಗಿ ಸಮತೋಲನಕ್ಕೆ ಕಷ್ಟವಾಗುತ್ತದೆ ಎಂಬುದು ಸುನೀಲ್ ಗವಾಸ್ಕರ್ ಅಭಿಪ್ರಾಯ.

cricketnext
Updated:December 15, 2020, 2:34 PM IST
ಹೆಲ್ಮೆಟ್​ಗೆ ಬಡಿಯುವ ಚೆಂಡು; ಈಗಿನ ಬ್ಯಾಟ್ಸ್​ಮನ್​ಗಳು ತಪ್ಪೆಸಗುತ್ತಿರುವುದು ಏನು? ಗವಾಸ್ಕರ್ ಉತ್ತರ ಇಲ್ಲಿದೆ
ಆಸ್ಟ್ರೇಲಿಯಾದ ಪುಕೋವಸ್ಕಿ
  • Cricketnext
  • Last Updated: December 15, 2020, 2:34 PM IST
  • Share this:
ಈಗಿನ ಕ್ರಿಕೆಟ್ ಆಟದಲ್ಲಿ ವೇಗದ ಬೌಲರ್ ಬೌಲಿಂಗ್ ಮಾಡುವಾಗ ಹೆಲ್ಮೆಟ್ ಹಾಕದೇ ಬ್ಯಾಟ್ಸ್​​ಮನ್ ಬ್ಯಾಟ್ ಮಾಡಲು ಅಸಾಧ್ಯವಾಗಿದೆ. ಚೆಂಡು ಬೌನ್ಸ್ ಆಗಿ ಹೆಲ್ಮೆಟ್​ಗೆ ಬಡಿಯುವ ಘಟನೆಗಳು ಹೆಚ್ಚೆಚ್ಚು ಆಗುತ್ತಿವೆ. ಈಗಿಗಿಂತಲೂ ಹಿಂದಿನ ದಶಕಗಳಲ್ಲಿ ಭಯಂಕರ ವೇಗಿಗಳಿದ್ದರು. ಆದರೆ, ಈಗ ವೇಗಿಗಳ ಎಸೆತವನ್ನು ಸರಿಯಾಗಿ ಎದುರಿಸಲು ಬ್ಯಾಟುಗಾರರು ತಡವರಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಬೌನ್ಸಿಂಗ್ ಪಿಚ್​ನಲ್ಲಿ ಭಾರತ-ಆಸ್ಟ್ರೇಲಿಯಾ ಸರಣಿ ವೇಳೆ ಇಂಥ ಘಟನೆಗಳು ನಡೆದಿವೆ. ರವೀಂದ್ರ ಜಡೇಜಾ, ಪುಕೋವಸ್ಕಿ ಮೊದಲಾದ ಬ್ಯಾಟುಗಾರರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈಗಿನ ಬ್ಯಾಟ್ಸ್​ಮನ್​ಗಳು ಎಲ್ಲಿ ಎಡವುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಎಪ್ಪತ್ತು ಎಂಬತ್ತರ ದಶಕದ ಅಪ್ರತಿಮ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಈ ಪ್ರಶ್ನೆಗೆ ಉತ್ತರ ನೀಡಿದ್ಧಾರೆ. ಈಗಿನ ಬ್ಯಾಟುಗಾರರ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ್ದಾರೆ.

ಬ್ಯಾಟ್ಸ್​ಮನ್ ಮುಂದೆ ನುಗ್ಗಿ ಚೆಂಡನ್ನು ಆಡಲು ಯತ್ನಿಸುತ್ತಿರುವುದು ಇದಕ್ಕೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ. “ಬಹುತೇಕ ಇಂದಿನ ಬ್ಯಾಟುಗಾರರು ಫ್ರಂಟ್ ಪ್ರೆಸ್​ಗೆ ಮುಂದಾಗುತ್ತಾರೆ. ಬೌನ್ಸ್ ಪಿಚ್​ಗಳಲ್ಲಿ ಹೀಗೆ ಮುನ್ನುಗ್ಗಿ ಆಡುವುದು ತಾಂತ್ರಿಕವಾಗಿ ಕಷ್ಟವಾಗುತ್ತದೆ” ಎಂದು ಸುನೀಲ್ ಗವಾಸ್ಕರ್ ಹೇಳುತ್ತಾರೆ.

“ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ನೀವು ಬೌನ್ಸರ್ ಎದುರಿಸುವಾಗ ಬ್ಯಾಕ್ ಫೂಟ್​ನಲ್ಲಿ ಆಡಬೇಕು. ಆದರೆ, ಈಗಿನ ಹುಡುಗರು ಬ್ಯಾಕ್ ಫೂಟ್​ನಲ್ಲಿ ಆಡುತ್ತಿಲ್ಲ. ಫ್ರಂಟ್ ಫೂಟ್​ನಲ್ಲಿ ಆಡುವುದರಿಂದ ತಮ್ಮ ದೇಹದ ತೂಕವನ್ನು ಸರಿಯಾಗಿ ವರ್ಗಾಯಿಸದೇ ಸರಿಯುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಲಾಕ್ ಆಗಿಬಿಡುತ್ತಾರೆ” ಎಂದು ಗವಾಸ್ಕರ್ ವಿಶ್ಲೇಷಿಸುತ್ತಾರೆ. ಸೋನಿ ವಾಹಿನಿಯಲ್ಲಿ ನಡೆದ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bangabandhu T20: ಅದು ನನ್ನ ಕ್ಯಾಚ್...ಸಹ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಮುಷ್ಫಿಕುರ್ ರಹೀಮ್

ಬೌನ್ಸರ್ ಎದುರಿಸುವ ಸರಿಯಾದ ಟೆಕ್ನಿಕ್ ಯಾವುದು?

“ವಿರಾಟ್ ಕೊಹ್ಲಿ ಬೌನ್ಸರ್ ಚೆಂಡುಗಳನ್ನ ಚೆನ್ನಾಗಿ ಎದುರಿಸುತ್ತಾರೆ. ಅದು ಹೇಗೆ ಸಾಧ್ಯ? ಅವರ ಬ್ಯಾಕ್ ಅಂಡ್ ಕ್ರಾಸ್ ಚಲನೆ ಸರಿಯಾಗಿದೆ. ಶಾರ್ಟ್ ಬಾಲ್ ಎದುರಿಸಲು ಅವರು ಬ್ಯಾಕ್ ಫೂಟ್​ನಲ್ಲಿ ನಿಂತು ಕಾಯುತ್ತಾರೆ. ರಾಹುಲ್ ದ್ರಾವಿಡ್ ಕೂಡ ಇದೇ ರೀತಿಯ ಟೆಕ್ನಿಕ್ ಉಪಯೋಗಿಸುತ್ತಿದ್ದರು. ಸಚಿನ್ ತೆಂಡೂಲ್ಕರ್ ಫ್ರಂಟ್ ಫೂಟ್ ಉಪಯೋಗಿಸುತ್ತಿದ್ದರೂ ಅದು ಬಹಳ ಸೂಕ್ಷ್ಮತೆಯಿಂದ ಮಾಡುತ್ತಿದ್ದರು. ತೀರಾ ದೂರಕ್ಕೆ ಕಾಲು ಮುಂದಿಡುತ್ತಿರಲಿಲ್ಲ. ಆದ್ದರಿಂದ ಶಾರ್ಟ್ ಬಾಲ್ ಎದುರಾದಾಗ ಅವರು ಸಮತೋಲನ ಕಳೆದುಕೊಳ್ಳುತ್ತಿರಲಿಲ್ಲ” ಎಂದು ಗವಾಸ್ಕರ್ ತಿಳಿಸುತ್ತಾರೆ.

ಹೆಲ್ಮೆಟ್​ಗೆ ಚೆಂಡು ಬಡಿಯುವ ಬ್ಯಾಟ್ಸ್​ಮನ್​ಗಳನ್ನ ಗಮನಿಸಿ ನೋಡಿ. ಆ ಸಂದರ್ಭದಲ್ಲಿ ಅವರ ಕಾಲುಗಳು ಕ್ರೀಸ್​ಗೆ ಆಚೆ ಈಚೆ ಇರುತ್ತವೆ. ಅವರ ಫ್ರಂಟ್ ಫೂಟ್ ಕ್ರೀಸ್​ನ ಹೊರಗೆ ಇದ್ದರೆ ಬ್ಯಾಕ್ ಫೂಟ್ ಕ್ರೀಸ್​ನ ಒಳಗೆ ಇರುತ್ತದೆ. ಎರಡೂ ಕಾಲುಗಳು ಕ್ರೀಸ್​ನ ಒಳಗೆ ಹಾಗೂ ಸ್ಟಂಪ್​ಗೆ ಸಮೀಪ ಇದ್ದರೆ ಚೆಂಡು ತಲೆಗೆ ಬಡಿಯುವ ಅವಕಾಶ ಕಡಿಮೆ ಇರುತ್ತದೆ. ಆದರೆ, ಈಗಿನ ಅನೇಕ ಬ್ಯಾಟ್ಸ್​ಮನ್​ಗಳು ಫ್ರಂಟ್ ಫೂಟ್ ಇಟ್ಟು ತಪ್ಪು ಮಾಡುತ್ತಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳುತ್ತಾರೆ.ಸುನೀಲ್ ಗವಾಸ್ಕರ್ ಬ್ಯಾಟಿಂಗ್ ಮಾಡುತ್ತಿದ್ದ ಕಾಲಘಟ್ಟದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳಲ್ಲಿ ಭಯಾನಕ ವೇಗದ ಬೌಲರ್​ಗಳಿದ್ದರು. ಆದರೂ ಗವಾಸ್ಕರ್ ಅವರು ಹೆಲ್ಮೆಟ್ ಇಲ್ಲದೆಯೇ ಇಂಥ ಡೆಡ್ಲಿ ಬೌಲರ್​ಗಳ ದಾಳಿಯನ್ನು ಎದುರಿಸುತ್ತಿದ್ದರು. ಹೀಗಾಗಿ, ಇವತ್ತಿನ ಬ್ಯಾಟ್ಸ್​ಮನ್​ಗಳಿಗೆ ಇವರು ನೀಡುವ ಸಲಹೆ ಯಾವತ್ತೂ ತಳ್ಳಿಹಾಕಲು ಸಾಧ್ಯವಾಗದು. ಇದು ಮುಂಬರುವ ಯುವ ಆಟಗಾರರಿಗೂ ಉಪಯುಕ್ತ ಸಲಹೆಗಳೇ ಆಗಿವೆ.
Published by: Vijayasarthy SN
First published: December 15, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories