ಕೊಹ್ಲಿ ಬ್ಯಾಟಿಂಗ್​ನಲ್ಲಿದೆ ಈ ಹುಳುಕು; ಸಚಿನ್ ನೆರವು ಪಡೆಯಲು ಸುನೀಲ್ ಗವಾಸ್ಕರ್ ಸಲಹೆ

ಆಫ್ ಸ್ಟಂಪ್ ಆಚೆ ಹೋಗುವ ಚೆಂಡನ್ನ ಕೆಣಕಿ ಕೊಹ್ಲಿ ಪದೇ ಪದೇ ಔಟಾಗುತ್ತಿದ್ದಾರೆ. ಇದಕ್ಕೆ ಅವರ ಬ್ಯಾಟಿಂಗ್ ತಂತ್ರದಲ್ಲಿರುವ ಒಂದು ಹುಳುಕು ಕಾರಣ ಎಂದಿರುವ ಸುನೀಲ್ ಗವಾಸ್ಕರ್ ಅವರು ಸಚಿನ್ ಆಟದ ನಿದರ್ಶನ ಕೊಟ್ಟಿದ್ಧಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ನವದೆಹಲಿ (ಆ. 26): ಇಂಗ್ಲೆಂಡ್​ನ ಲೀಡ್ಸ್ ನಗರದ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಪ್ರದರ್ಶನ ನೀಡುತ್ತಿದೆ. ನಾಯಕ ವಿರಾಟ್ ಕೊಹ್ಲಿ ಅವರು ಕಳಪೆ ಫಾರ್ಮ್​ನಲ್ಲಿದ್ದಾರೆ. ರನ್ ಗಳಿಸಲು ನಾಯಕ ಪರದಾಡುತ್ತಿರುವುದು ತಂಡದ ಇತರ ಸದಸ್ಯರ ಆಟದ ಮೇಲೂ ನಕರಾತ್ಮಕ ಪರಿಣಾಮ ಬೀರುತ್ತಿರುವಂತಿದೆ. ಇಂಗ್ಲೆಂಡ್​ನ ಜೇಮ್ಸ್ ಆಂಡರ್ಸನ್ ಅವರಿಗೆ ಬಾರಿ ಬಾರಿ ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಕೊಹ್ಲಿ ಅವರು ಕಳಪೆ ಫಾರ್ಮ್​ಗೆ ಏನು ಕಾರಣ? ಮಾಜಿ ಇಂಡಿಯಾ ಕ್ಯಾಪ್ಟನ್ ಸುನೀಲ್ ಗವಾಸ್ಕರ್ ಅವರು ಕೊಹ್ಲಿಯ ಬ್ಯಾಟಿಂಗ್ ಹುಳುಕನ್ನ ಎತ್ತಿತೋರಿಸಿದ್ದಾರೆ. ಭಾರತದ ಕಳಪೆ ಇನ್ನಿಂಗ್ಸ್ ವೇಳೆ ಕಾಮೆಂಟರಿ ಬಾಕ್ಸ್​ನಲ್ಲಿ ಕೂತು ಮಾತನಾಡುತ್ತಿದ್ದ ಸುನೀಲ್ ಗವಾಸ್ಕರ್ ಅವರು ಕೊಹ್ಲಿಗೆ ಒಂದು ಸಲಹೆ ಕೂಡ ಕೊಟ್ಟಿದ್ಧಾರೆ.

  ವಿರಾಟ್ ಕೊಹ್ಲಿ ಅವರ ಕವರ್ ಡ್ರೈವ್​ನಲ್ಲಿ ಸಮಸ್ಯೆ ಇದೆ. ಆಫ್​ಸ್ಟಂಪ್ ಆಚೆ ಹೋಗುವ ಚೆಂಡುಗಳನ್ನ ಅವರು ಆಡುವ ರೀತಿ ಕಳವಳಕಾರಿಯಾಗಿದೆ. ಅಫ್ ಸ್ಟಂಪ್ ಆಚೆ ಐದು, ಆರನೇ ಸ್ಟಂಪ್ ಅಲ್ಲ, ಏಳನೇ ಸ್ಟಂಪ್​ನತ್ತ ಹೋಗುವ ಚೆಂಡನ್ನ ಆಡಲು ಹೋಗಿ ಕೊಹ್ಲಿ ಔಟಾಗುತ್ತಿದ್ಧಾರೆ. 2014ರಲ್ಲೂ ಕೊಹ್ಲಿ ಅವರು ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಚೆಂಡಿಗೆ ಹೆಚ್ಚು ಬಲಿಯಾಗುತ್ತಿದ್ದರು. ಬೌಲರ್​ಗಳು ಉದ್ದೇಶಪೂರ್ವಕವಾಗಿ ಕೊಹ್ಲಿಗೆ ಆಫ್ ಸ್ಟಂಪ್ ಆಚೆ ಚೆಂಡೆಸೆಯುತ್ತಿದ್ಧಾರೆ. ಕೊಹ್ಲಿ ತತ್​ಕ್ಷಣಕ್ಕೆ ಕವರ್ ಡ್ರೈವ್ ಮಾಡುವುದನ್ನು ಬಿಡುವುದು ಒಳ್ಳೆಯದು ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

  ಇದನ್ನೂ ಓದಿ: India vs England 3rd Test| ಮೂರನೇ ಟೆಸ್ಟ್​ ಪಂದ್ಯ; ಆಂಗ್ಲರ ಎದುರು ಅತ್ಯಲ್ಪ ಮೊತ್ತಕ್ಕೆ ಕುಸಿದ ಭಾರತ!

  ಹೆಡಿಂಗ್ಲೇ ಟೆಸ್ಟ್​ನಲ್ಲಿ ಭಾರತದ ಮೊದಲ ಇನ್ನಿಂಗ್ಸಲ್ಲಿ ಕೇವಲ 78 ರನ್​ಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ ಕೇವಲ 7 ರನ್​ಗೆ ಔಟಾದರು. ಆಂಡರ್ಸನ್ ಅವರು ಆಫ್ ಸ್ಟಂಪ್ ಆಚೆ ಎಸೆದ ಚೆಂಡನ್ನು ಕವರ್ ಡ್ರೈವ್ ಮಾಡಲು ಹೋಗಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರಿಗೆ ಕ್ಯಾಚಿತ್ತು ಕೊಹ್ಲಿ ಔಟಾದರು. ಆಂಡರ್ಸನ್ ಅವರು 23 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿಯನ್ನ 7 ಬಾರಿ ಔಟ್ ಮಾಡಿದ್ದಾರೆ. ಅಲ್ಲದೇ ಕೊಹ್ಲಿ ಈ ಇಂಗ್ಲೆಂಡ್ ಸರಣಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸಲ್ಲಿ ಒಟ್ಟಾರೆ ಗಳಿಸಿರುವ ರನ್ 69 ಮಾತ್ರ. ಈ ಸಂಕಷ್ಟದ ಸಂದರ್ಭದಿಂದ ಪಾರಾಗಿ ಫಾರ್ಮ್ ಕಂಡುಕೊಳ್ಳಲು ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಸಲಹೆ ಪಡೆಯುವಂತೆ ಸುನೀಲ್ ಗವಾಸ್ಕರ್ ಮನವಿ ಮಾಡಿದ್ಧಾರೆ.

  2003-04ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸಚಿನ್ ಆಡಿದ ಆಟದ ರೀತಿಯನ್ನು ಕೊಹ್ಲಿಗೆ ಗವಾಸ್ಕರ್ ನೆನಪಿಸಿದ್ದಾರೆ. ಸಿಡ್ನಿಯಲ್ಲಿ ನಡೆದ ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಸಹಜ ಆಟದ ಬದಲು ಬಹಳ ಸಂಯಮದಿಂದ ಬ್ಯಾಟಿಂಗ್ ಮಾಡಿ 436 ಬಾಲ್ ಆಡಿ ಅಜೇಯ 241 ರನ್ ಗಳಿಸಿದರು. ಆ ಇನ್ನಿಂಗ್ಸಲ್ಲಿ ಅವರು ಕವರ್ ಡ್ರೈವ್ ಹೊಡೆಯುವ ಆಸೆಯನ್ನ ನಿಯಂತ್ರಿಸಿಕೊಂಡು ಸಂಯಮ ತೋರಿದರು. ಅದಕ್ಕೆ ಅದ್ಬುತ ಪ್ರತಿಫಲವೂ ಸಿಕ್ಕಿತು ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

  ಇದನ್ನೂ ಓದಿ: Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಅನ್ನು ಪಾಕಿಸ್ತಾನದ ಸ್ಪರ್ಧಿ ಎತ್ತುಕೊಂಡಿದ್ದರಾ..? ವೈರಲ್‌ ವಿಡಿಯೋದಲ್ಲಿದೆ ಸತ್ಯ

  ಸಿಡ್ನಿಯಲ್ಲಿ ಸಚಿನ್ ಆಡಿದ ರೀತಿಯಲ್ಲೇ ಹೆಡಿಂಗ್ಲೀಯಲ್ಲೂ ಕೊಹ್ಲಿ ಆಡಬೇಕು. ಅಷ್ಟೇ ಅಲ್ಲ ಕೊಹ್ಲಿ ಈ ಕೂಡಲೇ ಸಚಿನ್​ಗೆ ಕರೆ ಮಾಡಿ ನೆರವು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಭಾರತ ಕ್ರಿಕೆಟ್​ನ ಅಪ್ರತಿಮ ಬ್ಯಾಟ್ಸ್​ಮನ್ ಎನಿಸಿದ್ದ ಸುನೀಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್​ನಲ್ಲಿ 10,000 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಬಾಜನರಾಗಿದ್ದಾರೆ.
  Published by:Vijayasarthy SN
  First published: