Sunil Gavaskar: ಅವ್ನೊಬ್ಬ ಟೀಂ ಅಲ್ಲಿದ್ರೆ ಎದುರಾಳಿ ಎದೆ ನಡುಗುತ್ತಂತೆ.. ಯಾರ್​ ಬಗ್ಗೆ ಹಿಂಗ್​ ಹೇಳಿದ್ದು ಸುನೀಲ್​ ಗವಾಸ್ಕರ್​?

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್(Sunil Gavaskar) ಅವರು ಏನೇ ಹೇಳಿದರೂ, ಯಾವುದರ ಬಗ್ಗೆ ಹೇಳಿದರೂ ತುಂಬಾ ಮುಂದಾಲೋಚನೆ ಮಾಡಿ ಮಾತನಾಡುವ ವ್ಯಕ್ತಿ ಎಂದರೆ ತಪ್ಪಾಗುವುದಿಲ್ಲ.

ಸುನೀಲ್​ ಗವಾಸ್ಕರ್​

ಸುನೀಲ್​ ಗವಾಸ್ಕರ್​

  • Share this:

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್(Sunil Gavaskar) ಅವರು ಏನೇ ಹೇಳಿದರೂ, ಯಾವುದರ ಬಗ್ಗೆ ಹೇಳಿದರೂ ತುಂಬಾ ಮುಂದಾಲೋಚನೆ ಮಾಡಿ ಮಾತನಾಡುವ ವ್ಯಕ್ತಿ ಎಂದರೆ ತಪ್ಪಾಗುವುದಿಲ್ಲ. ಇವರು ಈಗ ಭಾರತ ಕ್ರಿಕೆಟ್ ತಂಡ(Indian Cricket Team)ಕ್ಕೆ ಮೂರನೆಯ ವೇಗದ ಬೌಲರ್(Third Fast Bowler) ಬಗ್ಗೆ ಯಾರಾಗಬಹುದು ಮತ್ತು ಭುವನೇಶ್ವರ್ ಕುಮಾರ್ ಅವರ ಬಗ್ಗೆ ಏನು ಹೇಳಿದ್ದಾರೆ ನೀವೇ ನೋಡಿ. ವಿರಾಟ್ ಕೊಹ್ಲಿ(Virat Kohli) ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ(Rohit Sharma) ಅವರು ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದು, ಈಗ ತಂಡವು ಭಾರಿ ಪರಿವರ್ತನೆಯ ಹಂತದಲ್ಲಿದೆ ಎಂದು ಹೇಳಬಹುದು. ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಬೇಕಾಗಿತ್ತು, ಆದರೆ ಅವರ ಭುಜದಲ್ಲಿ ಆದ ಗಾಯದಿಂದಾಗಿ ಅವರು ತಂಡದಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಿತು. ಅವರು ಈಗ ಫಿಟ್ ಆಗಿದ್ದಾರೆ ಮತ್ತು ಒಂದು ವಾರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸುವಾಗ ಭಾರತೀಯ ತಂಡವನ್ನು ಮುನ್ನಡೆಸಲು ಸಿದ್ಧರಾಗಲಿದ್ದಾರೆ.


ತಂಡ ಬಲಪಡಿಸುವ ಒತ್ತಡದಲ್ಲಿ ಟೀಂ ಇಂಡಿಯಾ!

ಹೊಸ ತರಬೇತುದಾರ ಮತ್ತು ನಾಯಕತ್ವದಲ್ಲಿ, ಮುಂದಿನ 2 ವರ್ಷಗಳಲ್ಲಿ ಎರಡು ಪ್ರಮುಖ ಐಸಿಸಿ ಟೂರ್ನಿಗಳನ್ನು ಹೊಂದಿರುವುದರೊಂದಿಗೆ ತಂಡದಲ್ಲಿ ಬಹಳಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಜೋಡಿಯು ಎಲ್ಲಾ ರೀತಿಯ ಪಂದ್ಯಗಳಿಗೆ ಸರಿಹೊಂದುವ ಸಾಮರ್ಥ್ಯ ಹೊಂದಿರುವ ಆಟಗಾರರನ್ನು ಗುರುತಿಸಲು ಪ್ರಾರಂಭಿಸುತ್ತದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದ್ದರೂ, 2023ರ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಆದ್ದರಿಂದ ತಂಡವನ್ನು ಬಲಪಡಿಸುವ ಒತ್ತಡ ಇದ್ದೇ ಇರುತ್ತದೆ.


ಫಾರ್ಮ್​ ಕಳೆದುಕೊಂಡಿದ್ದಾರಂತೆ ಭುವನೇಶ್ವರ್​!

ಆಯ್ಕೆದಾರರು ವಿಶೇಷವಾಗಿ ಈ ಎರಡು ಮಹತ್ವದ ಟೂರ್ನಿಗಳಿಗೆ ಸೂಕ್ತವಾದ ವೇಗದ ಬೌಲಿಂಗ್ ಪಡೆಯನ್ನು ಆಯ್ಕೆ ಮಾಡಲು ಪ್ರಯತ್ನಿಸುವುದಂತೂ ಗ್ಯಾರಂಟಿ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ನಿಶ್ಚಿತತೆಗಳಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಮೂರನೇ ವೇಗಿ ಯಾರು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಮೊಹಮ್ಮದ್ ಸಿರಾಜ್ ಈ ಸ್ಪರ್ಧೆಯಲ್ಲಿ ಇದ್ದಾರೆ, ಈ ಪಟ್ಟಿಯಲ್ಲಿ ಸೇರಿಕೊಳ್ಳಲು ತುಂಬಾನೇ ಕಷ್ಟವಾದ ಹೆಸರು ಎಂದರೆ ಅದು ಭುವನೇಶ್ವರ್ ಕುಮಾರ್ ಅವರದ್ದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಮಗಳ ಫೋಟೊ ಶೇರ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದಾರೆ Virat-Anushka

ಭುವಿ ಫಾರ್ಮ್​ಗೆ ಬರದಿದ್ರೆ ಕಷ್ಟ ಎಂದ ಸುನೀಲ್​ ಗವಾಸ್ಕರ್​!

ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಈ 32 ವರ್ಷದ ವೇಗದ ಬೌಲರ್ ಅವರ ಮುಂದಿನ ಹಾದಿಯ ಬಗ್ಗೆ ಅನಿಶ್ಚಿತರಾಗಿದ್ದಾರೆ. "ಭುವನೇಶ್ವರ್ ಕುಮಾರ್‌ಗೆ ಇನ್ನು ಮುಂದೆ ಯಾವ ರೀತಿಯ ಭವಿಷ್ಯವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ವೇಗದಲ್ಲಿ ಸೋತಿದ್ದಾರೆ, ಪಂದ್ಯದ ಆರಂಭದಲ್ಲಿ ಅವರು ಚೆಂಡನ್ನು ಸ್ವಿಂಗ್ ಮಾಡುವುದರ ಮೂಲಕ ವಿಕೆಟ್‌ಗಳನ್ನು ಪಡೆಯುತ್ತಿದ್ದರು. ನಂತರ ಅಂತಿಮ ಓವರ್‌ಗಳಲ್ಲಿ ಮತ್ತೆ ಅವರು ಬರುತ್ತಿದ್ದ ರೀತಿ, ಬೌಲಿಂಗ್ ಮಾಡುವ ರೀತಿ ಬಹುಶಃ ಅವರನ್ನು ತಂಡದಿಂದ ಕೈ ಬಿಡುವಂತೆ ಆಗಿದೆ. ಅವರು ತಮ್ಮ ಲಯವನ್ನು ಕಂಡುಕೊಳ್ಳಲು ಕಠಿಣ ಪರಿಶ್ರಮ ಪಡಲು ಇದು ಸೂಕ್ತವಾದ ಸಮಯ" ಎಂದು ಗವಾಸ್ಕರ್ ಹೇಳಿದರು.


ಇದನ್ನೂ ಓದಿ : ಸ್ಮೃತಿ ಮಂಧಾನ ಮುಕುಟಕ್ಕೆ ಮತ್ತೊಂದು ಗರಿ, `ICC ವರ್ಷದ ಆಟಗಾರ್ತಿ’ಯ ಗೌರವ!

‘ದೀಪಕ್​ ಚಹರ್​​ ಹೆಚ್ಚಿನ ಅವಕಾಶ ಕೊಡಬೇಕು’

ಭುವನೇಶ್ವರ್ ಕುಮಾರ್ ಅವರಂತೆಯೇ ಗುಣಗಳನ್ನು ಹೊಂದಿರುವ ದೀಪಕ್ ಚಹರ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಸಮಯ ಬಂದಿದೆ ಎಂದು ಸುನೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ. "ಈಗ ದೀಪಕ್ ಚಹರ್ ಅವರನ್ನು ನೋಡುವ ಸಮಯ ಇದು ಎಂದು ನಾನು ಭಾವಿಸುತ್ತೇನೆ. ಒಂದೇ ರೀತಿಯ ಬೌಲರ್ ಆಗಿರುವ ಕಿರಿಯ ವಯಸ್ಸಿನ ವ್ಯಕ್ತಿ ಎರಡೂ ರೀತಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡುತ್ತಾರೆ ಮತ್ತು ಉತ್ತಮವಾಗಿ ಬ್ಯಾಟ್ ಸಹ ಮಾಡುತ್ತಾರೆ" ಎಂದು ಹೇಳಿದ್ದಾರೆ.

Published by:Vasudeva M
First published: