HOME » NEWS » Sports » CRICKET SUNIL CHHETRI OVERTAKES LIONEL MESSI NOW CHASING CRISTIANO RONALDO FOR MOST INTERNATIONAL GOALS HG

Sunil Chhetri: ಲಿಯೋನೆಲ್​​ ಮೆಸ್ಸಿ ದಾಖಲೆ ಮುರಿದ ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಚೆಟ್ರಿ!

Sunil Chhetri: ಸುನೀಲ್​ ಚೆಟ್ರಿ ಅವರು  ದೋಹಾದಲ್ಲಿ ನಡೆಯುತ್ತಿರುವ ವಿಶ್ವಕಪ್​ ಕ್ವಾಲಿಫೈಯರ್​ ಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ, ಭಾರತ ತಂಡದ ನಾಯಕ ಸಾಧನೆಯನ್ನು ಬರೆದಿದ್ದಾರೆ.

news18-kannada
Updated:June 8, 2021, 1:39 PM IST
Sunil Chhetri: ಲಿಯೋನೆಲ್​​ ಮೆಸ್ಸಿ ದಾಖಲೆ ಮುರಿದ ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಚೆಟ್ರಿ!
Sunil Chhetri
  • Share this:
ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಚೆಟ್ರಿ  ಮೊತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅತಿ ಹೆಚ್ಚು ಗೋಲು ಹೊಡೆದಿರುವ ದಾಖಲೆ ಆಟಗಾರರ ಪಟ್ಟಿಯಲ್ಲಿ ಸುನೀಲ್​ ಚೆಟ್ರಿ ಅವರ ಹೆಸರು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಪ್ರಸಕ್ತ ಆಡುತ್ತಿರುವ ಆಟಗಾರರ ಪೈಕಿ ಮತ್ತು ಅಂತರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಗೋಲು ಬಾರಿಸುವ ಮೂಲಕ ಸುನೀಲ್​ ಅವರು ಎಡನೇ ಸ್ಥಾನದತ್ತ ಮುನ್ನುಗ್ಗಿದ್ದಾರೆ.

ಸುನೀಲ್​ ಚೆಟ್ರಿ ಅವರು  ದೋಹಾದಲ್ಲಿ ನಡೆಯುತ್ತಿರುವ ವಿಶ್ವಕಪ್​ ಕ್ವಾಲಿಫೈಯರ್​ ಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ, ಭಾರತ ತಂಡದ ನಾಯಕ ಸಾಧನೆಯನ್ನು ಬರೆದಿದ್ದಾರೆ. ಅದರ ಜೊತೆಗೆ ಅಂತರಾಷ್ಟ್ರೀಯ ಆಟಗಾರ ಲಿಯೋನೆಲ್​ ಮೆಸ್ಸಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಅರ್ಜೈಂಟೀನಾ ನಾಯಕ ಲಿಯೋನೆಲ್​ ಮೆಸ್ಸಿ  143 ಪಂದ್ಯದಲ್ಲಿ 72 ಗೋಲು ಬಾರಿಸಿದ್ದರು. ಆದರೆ ಸುನೀಲ್​ ಚೆಟ್ರಿ ಅವರು 117 ಪಂದ್ಯದಲ್ಲಿ 74 ಗೋಲು ಬಾರಿಸಿದ್ದಾರೆ. ಇನ್ನು ಕ್ರಿಸ್ಟಿಯಾನೊ ರೊನಾಲ್ಡೊ 174 ಪಂದ್ಯಗಳಲ್ಲಿ  103 ಗೋಲು ಬಾರಿಸಿದ್ದಾರೆ. ಆ ಮೂಲಕ ಮೊದಲ ಸ್ಥಾನದಲ್ಲಿ ಪೋರ್ಚುಗಲ್​ ಆಟಗಾರ ರೊನಾಲ್ಡೊ ಹೆಸರಿದೆ.

ಅಂತರಾಷ್ಟ್ರಿಯ ಆಟಗಾರರ ಸಾರ್ವಕಾಲಿಕ ಗೋಲು ಹೊಡೆದವರ ಪಟ್ಟಿಯಲ್ಲಿ ಸುನೀಲ್​ ಚೇತ್ರಿ 11ನೇ ಸ್ಥಾನ ಪಡೆದಿದ್ದಾರೆ. ಹಂಗೇರಿಯ ಸ್ಯಾಂಡರ್ ಕೊಕ್ಸಿಸ್, ಜಪಾನ್‌ನ ಕುನಿಶಿಜ್ ಕಮಾಮೊಟೊ ಮತ್ತು ಕುವೈತ್‌ನ ಬಶರ್ ಅಬ್ದುಲ್ಲಾ ಅವರು 75 ಗೋಲುಗಳನ್ನು ಹೊಡೆದಿದ್ದಾರೆ.


ಭಾರತ ಫುಟ್​ಬಾಲ್​ ತಂಡದ ಕೋಚ್​ ಇಗೊರ್​ ಸ್ಟಿಮಾಕ್​ ನೇತೃತ್ವದಲ್ಲಿ ಎರಡನೇ ಗೆಲುವು ಪಡೆದುಕೊಂಡಿದೆ. ಭಾರತಕ್ಕಾಗಿ ಚೇತ್ರಿ 79 ಮತ್ತು 92 ನಿಮಿಷದಲ್ಲಿ ಗೋಲು ಬಾರಿಸಿದ್ದಾರೆ.

ಭಾರತದ ಮುಂದಿನ ಪಂದ್ಯ ಯಾವಾಗ?

ಜೂನ್ 15 ರ ಮಂಗಳವಾರ ಕ್ವಾಲಿಫೈಯರ್‌ನಲ್ಲಿ ಭಾರತ ಮುಂದಿನ ಅಫ್ಘಾನಿಸ್ತಾನ ವಿರುದ್ಧ  ಆಟವಾಡಲಿದೆ.
Published by: Harshith AS
First published: June 8, 2021, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories