• Home
  • »
  • News
  • »
  • sports
  • »
  • Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!

Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!

ಗೂಗಲ್ ಸಿಇಒ ಸುಂದರ್‌ ಪಿಚ್ಚೈ

ಗೂಗಲ್ ಸಿಇಒ ಸುಂದರ್‌ ಪಿಚ್ಚೈ

ನಿನ್ನೆಯ ಪಂದ್ಯದ ಬಗ್ಗೆ ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಯೊಬ್ಬ ಸುಂದರ್ ಪಿಚ್ಚೈ ಕಾಲೆಳೆದಿದ್ದ. ಇದೀಗ ಆತನ ಟ್ವೀಟ್‌ಗೆ ಸುಂದರ್ ಪಿಚ್ಚೈ ಖಡಕ್ ಆಗಿಯೇ ರಿಪ್ಲೈ ಮಾಡಿದ್ದಾರೆ.

  • Share this:

ಮೆಲ್ಬೋರ್ನ್, ಆಸ್ಟ್ರೇಲಿಯಾ: ಭಾರತೀಯ ಕ್ರೀಡಾ ಅಭಿಮಾನಿಗಳಿಗೆ (Indian sports fans) ನಿನ್ನೆಯೇ ದೀಪಾವಳಿ (Deepavali) ಶುರುವಾಗಿದೆ. T-20 ವರ್ಲ್ಡ್‌ ಕಪ್‌ನಲ್ಲಿ (T20 World Cup) ಪಾಕಿಸ್ತಾನವನ್ನು (Pakistan) ಬಗ್ಗು ಬಡಿದಿರುವ ಭಾರತ (India), ಕ್ರಿಕೆಟ್ ಪ್ರೇಮಿಗಳಿಗೆ (Cricket Lovers) ನಿನ್ನೆಯೇ ದೀಪಾವಳಿ ಗಿಫ್ಟ್ (Gift) ಕೊಟ್ಟಿತ್ತು. ಪಾಕಿಸ್ತಾನ ನೀಡಿದ್ದ 160 ರನ್‌ (160 Run) ಗುರಿ ಹಿಂಬಾಲಿಸಿದ್ದ ಭಾರತ ತಂಡ, ಕೇವಲ 31 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು (4 wicket) ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಟೀಂ ಇಂಡಿಯಾಗೆ (Team India) ಆಸರೆಯಾದ ವಿರಾಟ್‌ ಕೊಹ್ಲಿ (virat Kohli), 53 ಎಸೆತಗಳಲ್ಲಿ ಅಜೇಯ 82 ರನ್‌ ಗಳಿಸಿದರು ಹಾಗೂ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಜೊತೆ 5ನೇ ವಿಕೆಟ್‌ಗೆ 113 ರನ್ ಸಿಡಿಸಿದರು. ಈ ಬಗ್ಗೆ ಖುಷಿ ಹಂಚಿಕೊಂಡಿದ್ದ ಗೂಗಲ್ ಸಿಇಒ ಸುಂದರ್ ಪಿಚ್ಚೈ (Google CEO Sundar Pichai), ಟ್ವೀಟ್‌ನಲ್ಲಿ (Tweet) ಶುಭ ಕೋರಿದ್ದರು. “ಭಾನುವಾರ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಉಸಿರುಗಟ್ಟಿಸುವ ಜಯವನ್ನು ಮತ್ತೊಮ್ಮೆ ವೀಕ್ಷಿಸುವ ಮೂಲಕ ಹಬ್ಬವನ್ನು ಆಚರಿಸಿದ್ದೇನೆ” ಎಂದು ಪಿಚೈ ಹೇಳಿದ್ದರು. ಇದಕ್ಕೆ ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಯೊಬ್ಬ ಸುಂದರ್ ಪಿಚ್ಚೈ ಕಾಲೆಳೆದಿದ್ದ. ಇದೀಗ ಆತನ ಟ್ವೀಟ್‌ಗೆ ಸುಂದರ್ ಪಿಚ್ಚೈ ಖಡಕ್ ಆಗಿಯೇ ರಿಪ್ಲೈ ಮಾಡಿದ್ದಾರೆ.


 ಪಂದ್ಯದ ಬಗ್ಗೆ ಟ್ವೀಟ್ ಮಾಡಿದ್ದ ಸುಂದರ್ ಪಿಚ್ಚೈ


ನಿನ್ನೆಯ ಪಂದ್ಯ ಮುಗಿದ ಬಳಿಕ ಭಾರತೀಯ ಮೂಲದ ಗೂಗಲ್ ಸಿಇಓ ಸುಂದರ್‌ ಪಿಚೈ ಅವರು, ದೀಪಾವಳಿ ಹಬ್ಬಕ್ಕೆ ಶುಭ ಕೋರಿದರು. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯದ ಕೊನೆಯ ಮೂರು ಓವರ್‌ಗಳನ್ನು ವೀಕ್ಷಿಸುವ ಮೂಲಕ ನಾನು ದೀಪಾವಳಿಯನ್ನು ಆಚರಿಸಿದೆ ಎಂದು ಟ್ವೀಟ್‌ ಮಾಡಿದ್ದರು.


ಸುಂದರ್ ಪಿಚ್ಚೈ ಕಿಚಾಯಿಸಲು ಪಾಕ್ ಕ್ರಿಕೆಟ್ ಅಭಿಮಾನಿ ಯತ್ನ


 ಪಂದ್ಯದ ಬಗ್ಗೆ ಪಿಚ್ಚೈ ಟ್ವೀಟ್


"ದೀಪಾವಳಿ ಹಬ್ಬದ ಶುಭಾಶಯಗಳು! ಪ್ರತಿಯೊಬ್ಬರು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸೇರಿ ಹಬ್ಬವನ್ನು ಆಚರಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು (ಅಂದರೆ ನಿನ್ನೆ ಭಾನುವಾರ) ಪಂದ್ಯದ ಕೊನೆಯ ಮೂರು ಓವರ್‌ಗಳನ್ನು ನೋಡುವ ಮೂಲಕ ನಾನು ಹಬ್ಬವನ್ನು ಆಚರಿಸಿದ್ದೇನೆ. ಎಂಥಾ ಪಂದ್ಯ ಹಾಗೂ ಎಂಥಾ ಪ್ರದರ್ಶನ," ಎಂದು ಸುಂದರ್‌ ಪಿಚೈ ಟ್ವೀಟ್‌ ಮಾಡಿದ್ದರು.


ಖಡಕ್ ರಿಪ್ಲೈ ಕೊಟ್ಟ ಸುಂದರ್ ಪಿಚ್ಚೈ


ಇದನ್ನೂ ಓದಿ: ಪಾಕಿಸ್ತಾನಿ ಕ್ರಿಕೆಟಿಗನ ಬಾಯಲ್ಲಿ ರಾಮನಾಮ ಜಪ!


ಸುಂದರ್ ಪಿಚ್ಚೈ ಕಾಲೆಳೆಯಲು ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿ ಯತ್ನ


ಇನ್ನು ಸುಂದರ್ ಪಿಚ್ಚೈ ಟ್ವೀಟ್‌ಗೆ ರಿಪ್ಲೈ ಮಾಡಿದ್ದ ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿ  ಮುಹಮ್ಮದ್ ಸಹಜೈದ್ ಎಂಬಾತ ಕಾಲೆಳೆಯುವ ಯತ್ನ ಮಾಡಿದ್ದ. "ನೀವು ಮೊದಲು ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಆರಂಭಿಕ ಮೂರು ಪಂದ್ಯಗಳನ್ನು ನೋಡಿ" ಎಂದು ಕಿಚಾಯಿಸಿದ್ದ.


ಪಾಕ್ ಕ್ರಿಕೆಟ್ ಪ್ರೇಮಿಗೆ ಪಿಚ್ಚೈ ಖಡಕ್ ಉತ್ತರ


ಇನ್ನು ಆತನ ಟ್ವೀಟ್‌ಗೆ ರಿಪ್ಲೈ ಮಾಡಿದ ಸುಂದರ್ ಪಿಚ್ಚೈ, ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿ  ಮುಹಮ್ಮದ್ ಸಹಜೈದ್‌ಗೆ ಸರಿಯಾಗಿಯೇ ರಿಪ್ಲೈ ಮಾಡಿದ್ದಾರೆ. "ಅದನ್ನು ಕೂಡ ನಾನು ನೋಡಿದ್ದೇನೆ. ಭುವನೇಶ್ವರ್‌ ಕುಮಾರ್‌ ಹಾಗೂ ಅರ್ಷದೀಪ್‌ ಅವರಿಂದ ಎಂಥಾ ಸ್ಪೆಲ್‌,"  ಎಂದು ಸುಂದರ್ ಪಿಚ್ಚೈ ತಿರುಗೇಟು ಕೊಟ್ಟಿದ್ದಾರೆ.


ಇದನ್ನೂ ಓದಿ: Anushka Sharma: ಫೀಲ್ಡ್​ನಲ್ಲಿ ವಿರಾಟ್ ಅಬ್ಬರಕ್ಕೆ ಅನುಷ್ಕಾ ಫಿದಾ; ಕೊಹ್ಲಿಯನ್ನು ಕೊಂಡಾಡಿದ ಪತ್ನಿ


ಟೀಂ ಇಂಡಿಯಾ ಗೆಲುವಿಗೆ ಪಾಕ್ ಕಿರಿಕ್


ಇನ್ನು ಟಿ-20 ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆಲ್ಲುತ್ತಿದ್ದ ಪಂದ್ಯದಲ್ಲಿ ಸೋಲು ಕಂಡಿದ್ದು ಪಾಕಿಸ್ತಾನಕ್ಕೆ ತೀವ್ರ ಹತಾಶೆ ಮೂಡಿಸಿದೆ. ಕೊಹ್ಲಿ ಸಿಕ್ಸರ್ ಅಟ್ಟಿದ ನವಾಜ್‍ನ 4ನೇ ಎಸೆತವನ್ನು ಅಂಪೈರ್ ನೋಬಾಲ್ ಅಂತಾ ಹೇಳಿದ್ದು ತಂಪು ಅಂತಾ ಪಾಕ್ ವಾದಿಸಿದೆ. ಈ ಬಗ್ಗೆ ನಮ್ಮ ಆಟಗಾರರು ಮೈದಾನದಲ್ಲಿಯೇ ಪ್ರಶ್ನಿಸಿದ್ದರು. ಆದರೆ ಇದಕ್ಕೆ ಅಂಪೈರ್ ತಪ್ಪು ತೀರ್ಪು ನೀಡಿದರು ಅಂತಾ ಬೇಸರ ವ್ಯಕ್ತಪಡಿಸಿದೆ.

Published by:Annappa Achari
First published: