HOME » NEWS » Sports » CRICKET STREETS NAMED AFTER TEAM INDIA CRICKETERS SACHIN TENDULKAR KAPIL DEV VIRAT KOHLI IN AUSTRALIA HG

ಆಸ್ಟ್ರೇಲಿಯಾದ ಬೀದಿಗಳಿಗೆ ಕ್ರಿಕೆಟ್ ದೇವರು- ಕೊಹ್ಲಿ ಹೆಸರು!; ಯಾಕೆ ಗೊತ್ತಾ?

ಆಸ್ಟ್ರೇಲಿಯಾ ಮೆಲ್ಬೋರ್ನ್​ ಪಶ್ಚಿಮ ಭಾಗದ ಜನರು ಅಲ್ಲಿನ ಬೀದಿಗಳಿಗೆ ಸಚಿನ್​ ತೆಂಡೂಲ್ಕರ್​​, ವಿರಾಟ್​ ಕೊಹ್ಲಿ ಹೆಸರನ್ನು ಇಟ್ಟಿದ್ದಾರೆ

news18-kannada
Updated:June 12, 2020, 7:39 PM IST
ಆಸ್ಟ್ರೇಲಿಯಾದ ಬೀದಿಗಳಿಗೆ ಕ್ರಿಕೆಟ್ ದೇವರು- ಕೊಹ್ಲಿ ಹೆಸರು!; ಯಾಕೆ ಗೊತ್ತಾ?
ವಿರಾಟ್​ ಕೊಹ್ಲಿ-ಸಚಿನ್​ ತೆಂಡೂಲ್ಕರ್​
  • Share this:
ಟೀಂ ಇಂಡಿಯಾದ ಕ್ರಿಕೆಟಿಗರು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಕೂಡ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ಕಪಿಲ್​ ದೇವ್​ ಸೇರಿದಂತೆ ಅನೇಕರ ಫ್ಯಾನ್ಸ್​ಗಳು ಇದ್ದಾರೆ. ಮೊದಲೇ ಭಾರತೀಯರಿಗೆ ಕ್ರಿಕೆಟ್​ ಎಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಮೈದಾನದಲ್ಲಿ ಅಬ್ಬರಿಸುವ ದಾಂಡಿಗರೆಂದರೆ ಕೊಂಚ ಜಾಸ್ತಿಯೇ ಪ್ರೀತಿ. ಹಾಗಾಗಿ ಆಸ್ಟ್ರೇಲಿಯಾದ ಕೆಲವು ಬೀದಿಗೆ ಅಲ್ಲಿನ ಜನರು ಕ್ರಿಕೆಟಿಗರ ಹೆಸರನ್ನು ಇಟ್ವಿದ್ದಾರೆ!.

ಆಸ್ಟ್ರೇಲಿಯಾ ಮೆಲ್ಬೋರ್ನ್​ ಪಶ್ಚಿಮ ಭಾಗದ ಜನರು ಅಲ್ಲಿನ ಬೀದಿಗಳಿಗೆ ಸಚಿನ್​ ತೆಂಡೂಲ್ಕರ್​​, ವಿರಾಟ್​ ಕೊಹ್ಲಿ ಹೆಸರನ್ನು ಇಟ್ಟಿದ್ದಾರೆ. ಮೆಲ್ಬೋರ್ನ್​ ನಲ್ಲಿ ಭಾರತೀಯರು ಜನಸಂಖ್ಯೆ ಹೆಚ್ಚಾಗಿದೆ. ಮತ್ತೊಂದಡೆ ಅಂತರಾಳದವರೆಗೆ ಕ್ರಿಕ್ರೆಟ್​ ಮೇಲೆ ಹೆಚ್ಚಿನ ಪ್ರೀತಿ ಇದೆ. ಹಾಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

Youtube Video


ಸಚಿನ್​​​ ಡ್ರೈವ್​​, ಕೊಹ್ಲಿ ಕ್ರೆಸೆಂಟ್​, ದೇವ್​​ ಟೆರೇಸ್​ ಹೀಗೆ ವಿಭಿನ್ನವಾದ ಹೆಸರುಗಳನ್ನು ಮೆಲ್ಬೋರ್ನ್​ ಪಶ್ಚಿಮ ಭಾಗದ ಜನರು ಅಲ್ಲಿನ ಬೀದಿಗೆ ಹೆಸರನ್ನಿಡಲು ಇಟ್ಟಿದ್ದಾರೆ. ಇನ್ನು ಭಾರತೀಯರು ಮಾತ್ರವಲ್ಲದೆ, ಆಸಿಸ್​​, ವೆಸ್ಟ್​ ಇಂಡೀಸ್​​, ಕಿವೀಸ್​​ ಆಟಗಾರರ ಹೆಸರನ್ನು ಇಟ್ಟಿದ್ದಾರೆ. ವ್ಹಾ ಸ್ಟ್ರೀಟ್​, ಸಾಬರ್ಸ್​ ಡ್ರೈವ್​, ಕಾಲಿಸ್​​ ವೇ, ಹ್ಯಾಡ್ಲೀ ಸ್ಟ್ರೀಟ್​​, ಅಕ್ರಮ್​​ ವೇ ಹೀಗೆ ಕ್ರಿಕೆಟಿಗರ ಹೆಸರು ಆ ಭಾಗದ ಬೀದಿಗೆ ಇಡಲಾಗಿದೆ.

 

ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್; ಪೊಲೀಸರಿಗೆ ಜಗ್ಗೇಶ್ ಧನ್ಯವಾದ

Jio Fiber: ಜಿಯೋ ಫೈಬರ್ ಪ್ರಕಟಿಸಿದೆ ವಾರ್ಷಿಕ ಅಮೆಜಾನ್ ಪ್ರೈಮ್ ಸದಸ್ಯತ್ವ; ಬೆಲೆ ಎಷ್ಟು ಗೊತ್ತಾ?
First published: June 12, 2020, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories