IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್ ಶಾಕ್: ತಂಡದಿಂದ ಪ್ರಮುಖ ಆಟಗಾರ ಔಟ್

ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ನಡೆಯಲಿರುವ ಐಪಿಎಲ್​ನ 2ನೇ ಹಂತದ ಪಂದ್ಯಗಳ ವೇಳೆ ಚೇತರಿಕೊಳ್ಳಲು ಸಾಧ್ಯತೆ ಕಡಿಮೆ.

Delhi capitals

Delhi capitals

 • Share this:
  ಒಂದೆಡೆ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ 2ನೇ ಭಾಗದ ಸಿದ್ಧತೆಗಳು ಆರಂಭವಾಗಿದ್ದರೆ...ಮತ್ತೊಂದೆಡೆ ಒಬ್ಬೊಬ್ಬರೇ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯುತ್ತಿದ್ದಾರೆ. ಈಗಾಗಲೇ ಕೆಕೆಆರ್ ತಂಡದ ಆಲ್​ರೌಂಡರ್ ಪ್ಯಾಟ್ ಕಮಿನ್ಸ್​ ವೈಯುಕ್ತಿಕ ಕಾರಣಗಳಿಂದ ಆಡುವುದಿಲ್ಲ ಎಂದಿದ್ದಾರೆ. ಇದೀಗ ಮತ್ತೋರ್ವ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಕೂಡ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

  ಹೌದು, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಐಪಿಎಲ್​ನ 2ನೇ ಭಾಗಕ್ಕೆ ಅಲಭ್ಯರಾಗಲಿದ್ದಾರೆ. ಗಾಯಕ್ಕೀಡಾಗಿರುವ ಕಾರಣ ಸ್ಮಿತ್ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

  ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ನಡೆಯಲಿರುವ ಐಪಿಎಲ್​ನ 2ನೇ ಹಂತದ ಪಂದ್ಯಗಳ ವೇಳೆ ಚೇತರಿಕೊಳ್ಳಲು ಸಾಧ್ಯತೆ ಕಡಿಮೆ. ಹಾಗೆಯೇ ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಆಡುವುದು ಕೂಡ ಅನುಮಾನ ಎನ್ನಲಾಗಿದೆ. ಹೀಗಾಗಿ ಐಪಿಎಲ್​ನ 2ನೇ ಭಾಗದಲ್ಲಿ ಸ್ಮಿತ್ ಆಡುವುದಿಲ್ಲ.

  ಈ ಬಗ್ಗೆ ಮಾತನಾಡಿರುವ ಸ್ಮಿತ್, ಟಿ20 ವಿಶ್ವಕಪ್ ಆರಂಭವಾಗಲು ಇನ್ನೂ ಕಾಲಾವಕಾಶವಿದ್ದು, ನನ್ನ ಗಾಯ ನಿಧಾನವಾಗಿ ಗುಣವಾಗುತ್ತಿದೆ. ನನಗಂತು ವಿಶ್ವಕಪ್​ನಲ್ಲಿ ಆಡಬೇಕೆಂಬ ಆಸೆಯಿದೆ. ಆದರೆ ನನ್ನ ದೃಷ್ಟಿಕೋನದಿಂದ ಟೆಸ್ಟ್ ಕ್ರಿಕೆಟ್ ನನ್ನ ಮುಖ್ಯ ಗುರಿ. ಹೀಗಾಗಿ ಹೆಚ್ಚಿನ ವಿಶ್ರಾಂತಿ ಪಡೆದು ಆ್ಯಶಸ್ ಸರಣಿಯಲ್ಲಿ ಭಾಗಹಿಸುವ ವಿಶ್ವಾಸವಿದೆ ಎಂದಿದ್ದಾರೆ.

  ಇದರೊಂದಿಗೆ ಸ್ಟೀವ್ ಸ್ಮಿತ್ ಐಪಿಎಲ್ ಪೇಸ್ 2 ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. 2020ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖರೀದಿಸಿತ್ತು. ಇದೀಗ ತಂಡದ ಪ್ರಮುಖ ಸ್ಟಾರ್ ಆಟಗಾರ ಟೂರ್ನಿಯಿಂದ ಹೊರಗುಳಿಯುತ್ತಿರುವುದು ಡೆಲ್ಲಿಗೆ ಹಿನ್ನಡೆಯಾಗಲಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: