ಸ್ಮಿತ್ 27 ಶತಕ ದಾಖಲೆ; ಕೊಹ್ಲಿ ಮೀರಿಸಿದ ಸ್ಟೀವ್; ಬ್ರಾಡ್ಮನ್ ನಂತರದ ಸ್ಥಾನದಲ್ಲಿ ಮಾಜಿ ಕ್ಯಾಪ್ಟನ್

ಸ್ಟೀವನ್ ಸ್ಮಿತ್ ಸಿಡ್ನಿಯಲ್ಲಿ 27ನೇ ಟೆಸ್ಟ್ ಶತಕ ಗಳಿಸಿದ್ದಾರೆ. ಅತಿ ಕಡಿಮೆ ಇನ್ನಿಂಗ್ಸಲ್ಲಿ 27 ಶತಕ ಭಾರಿಸಿದವರ ಪಟ್ಟಿಯಲ್ಲಿ ಬ್ರಾಡ್ಮನ್ ನಂತರದ ಸ್ಥಾನ ಸ್ಮಿತ್ಗೆ ಸಿಕ್ಕಿದೆ. 136ನೇ ಇನ್ನಿಂಗ್ಸಲ್ಲಿ ಸ್ಟೀವ್ ಸ್ಮಿತ್ ಈ ಸಾಧನೆ ಮಾಡಿದ್ದಾರೆ.

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

 • Share this:
  ಸಿಡ್ನಿ(ಜ. 08): ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮೊದಲ ಇನ್ನಿಂಗ್ಸಲ್ಲಿ 131 ರನ್ ಭಾರಿಸಿದರು. ಇದು ಅವರ ಟೆಸ್ಟ್ ಕ್ರಿಕೆಟ್​ನ 27ನೇ ಶತಕವಾಗಿದೆ. ಮೊದಲ ದಿನ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯನ್ನರು ಎರಡನೇ ದಿನ ಪರದಾಡಿದರು. ಇನ್ನೊಂದು ಬದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಸ್ಟೀವ್ ಸ್ಮಿತ್ ಕಚ್ಚಿ ನಿಂತು ಆಡಿ ಆಸ್ಟ್ರೇಲಿಯಾಗೆ 338 ರನ್​ಗಳ ಗೌರವಾರ್ಹ ಮೊತ್ತ ಕಲೆಹಾಕುವಂತೆ ಮಾಡಿದರು. ಹೆಚ್ಚೂಕಡಿಮೆ ಏಕಾಂಗಿಯಾಗಿ ಹೋರಾಡಿ ಕೊನೆಯವರಾಗಿ ಔಟಾದರು. ಈ ಇನ್ನಿಂಗ್ಸಲ್ಲಿ ಕೆಲ ಸಾಧನೆಗಳೂ ಅವರ ಹೆಸರಿಗೆ ಬಂದವು.

  ಸ್ಟೀವ್ ಸ್ಮಿತ್ 27 ಟೆಸ್ಟ್ ಶತಕ ಭಾರಿಸಿದ ವಿಶ್ವದ 20ನೆಯ ಆಟಗಾರನೆನಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇಷ್ಟೇ ಸಂಖ್ಯೆಯ ಶತಕ ಗಳಿಸಿದ್ದಾರೆ. 51 ಶತಕ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಆದರೆ, 27 ಶತಕ ಗಳಿಸಲು ಅತೀ ಕಡಿಮೆ ಇನ್ನಿಂಗ್ಸ್ ತೆಗೆದುಕೊಂಡವರ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಕೊಹ್ಲಿಯನ್ನು ಮೀರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಡಾನ್ ಬ್ರಾಡ್ಮನ್ ಬಿಟ್ಟರೆ ಅತೀ ವೇಗವಾಗಿ 27 ಶತಕ ಭಾರಿಸಿದ ದಾಖಲೆ ಸ್ಮಿತ್ ಅವರದ್ದಾಗಿದೆ. ಬ್ರಾಡ್ಮನ್ ಅವರು 27 ಟೆಸ್ಟ್ ಶತಕ ಭಾರಿಸಲು 70 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಸ್ಟೀವ್ ಸ್ಮಿತ್ ತಮ್ಮ 136ನೇ ಇನ್ನಿಂಗ್ಸಲ್ಲಿ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ 27ನೇ ಶತಕ ಭಾರಿಸಲು 146 ಇನ್ನಿಂಗ್ಸ್ ಬೇಕಾಗಿತ್ತು.

  ಈ ಶತಕದೊಂದಿಗೆ ಸ್ಟೀವ್ ಸ್ಮಿತ್ ಅವರು ಭಾರತದ ವಿರುದ್ಧ ಗಳಿಸಿದ ಶತಕಗಳ ಸಂಖ್ಯೆ 8ಕ್ಕೆ ಏರಿದೆ. ಭಾರತ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಅವರು ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಸರ್ ಗಾರ್​ಫೀಲ್ಡ್ ಸೋಬರ್, ಸರ್ ವಿವಿಯನ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ಅವರೂ ಭಾರತದ ವಿರುದ್ಧ 8 ಶತಕಗಳನ್ನ ಭಾರಿಸಿದ್ದಾರೆ.

  ಇದನ್ನೂ ಓದಿ: IPL 2021: ಐಪಿಎಲ್​ ಹರಾಜಿಗೆ ಡೇಟ್ ಫಿಕ್ಸ್..!

  ಆಸ್ಟ್ರೇಲಿಯಾದ ಮಾಜಿ ನಾಯಕರೂ ಆಗಿರುವ ಸ್ಟೀವ್ ಸ್ಮಿತ್ ಅವರಿಗೆ ಈ ಶತಕ ಬಹಳ ಮಹತ್ವವೆನಿಸಿದೆ. ಈ ಟೆಸ್ಟ್ ಸರಣಿಯಲ್ಲಿ ಈ ಇನಿಂಗ್ಸ್​ಗೆ ಮುನ್ನ ಅವರು ನಾಲ್ಕು ಇನ್ನಿಂಗ್ಸಲ್ಲಿ ಗಳಿಸಿದ ರನ್ನು ಕೇವಲ 10 ಮಾತ್ರ. ಸಿಡ್ನಿಯ ಅಂಗಳದಲ್ಲಿ ಅವರು ಗಳಿಸಿದ ಶತಕ 2017ರ ನಂತರ ತವರಿನಲ್ಲಿ ಗಳಿಸಿದ ಮೊದಲ ಶತಕವೂ ಹೌದು.
  Published by:Vijayasarthy SN
  First published: