HOME » NEWS » Sports » CRICKET STEVE SMITH HOPES TO GUIDE DELHI CAPITALS TO IPL 2021 TITLE ZP

IPL 2021: ಈ ಸಲ ಕಪ್ ನಮ್ದೆ ಅಂತಿದ್ದಾರೆ ಸ್ಟೀವ್ ಸ್ಮಿತ್..!

ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದು, ಕೋಚ್ ಆಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಪಟ್ಟದೊಂದಿಗೆ ಮರಳಿತ್ತು.

news18-kannada
Updated:February 23, 2021, 5:38 PM IST
IPL 2021: ಈ ಸಲ ಕಪ್ ನಮ್ದೆ ಅಂತಿದ್ದಾರೆ ಸ್ಟೀವ್ ಸ್ಮಿತ್..!
steve smith
  • Share this:
ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಟ್ರೋಫಿ ಗೆಲ್ಲಲಾಗದ ಕೆಲವೇ ಕೆಲವು ಸ್ಟಾರ್ ಆಟಗಾರರಲ್ಲಿ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಕೂಡ ಒಬ್ಬರು. ಕಳೆದ ಕೆಲ ಸೀಸನ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಮುನ್ನಡೆಸಿದ್ದ ಸ್ಮಿತ್, ತಂಡವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಕಳೆದ ಸೀಸನ್​ನಲ್ಲಿ ನೀರಸ ಪ್ರದರ್ಶನದೊಂದಿಗೆ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್​ ಪ್ರವೇಶಿಸಲು ವಿಫಲವಾಗಿತ್ತು. ಇದೇ ಕಾರಣದಿಂದ ನಾಯಕರಾಗಿದ್ದ ಸ್ಮಿತ್ ಅವರನ್ನು ಈ ಬಾರಿ ರಾಜಸ್ಥಾನ್ ತಂಡ ಕೈ ಬಿಟ್ಟಿತ್ತು.

ಇದಾಗ್ಯೂ ಈ ಬಾರಿಯ ಹರಾಜಿನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 2.20 ಕೋಟಿ ನೀಡಿ ಖರೀದಿಸಿತ್ತು. ಅದರಂತೆ ಈ ಬಾರಿ ಡೆಲ್ಲಿ ಪರ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ ಸ್ಮಿತ್. ಅಲ್ಲದೆ ಐಪಿಎಲ್ ಸೀಸನ್ 14 ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಕಪ್ ಗೆದ್ದು ಕೊಡುವ ಭರವಸೆಯನ್ನು ಸ್ಟೀವ್ ಸ್ಮಿತ್ ವ್ಯಕ್ತಪಡಿಸಿದ್ದಾರೆ. ಈ ವರ್ಷ ಡೆಲ್ಲಿ ಪರ ಆಡಲು ನಾನು ನಿಜಕ್ಕೂ ಉತ್ಸುಕನಾಗಿದ್ದೇನೆ.

ಡೆಲ್ಲಿ ತಂಡದಲ್ಲಿ ಅತ್ಯುತ್ತಮ ಆಟಗಾರರ ದಂಡೇ ಇದೆ. ಒಳ್ಳೆಯ ಕೋಚ್ ಕೂಡ ಇದ್ದಾರೆ ಎಂದು ಭಾವಿಸುತ್ತೇನೆ. ಹೊಸ ತಂಡವನ್ನು ಕೂಡಿಕೊಳ್ಳಲು ಹಾಗೂ ಕೆಲವು ಅವಿಸ್ಮರಣೀಯ ನೆನಪುಗಳನ್ನು ಸೃಷ್ಟಿಸಲು ಕಾತುರನಾಗಿದ್ದೇನೆ. ಈ ಹಿಂದೆಗಿಂತಲೂ ಈ ಬಾರಿ ಉತ್ತಮ ಫಲಿತಾಂಶ ಹೊಂದುವ ನಿರೀಕ್ಷೆಯಿದೆ ಎಂದು ಸ್ಮಿತ್ ಹೇಳಿದ್ದಾರೆ.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದು, ಕೋಚ್ ಆಗಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಪಟ್ಟದೊಂದಿಗೆ ಮರಳಿತ್ತು.

ಈ ಬಾರಿ ತಂಡಕ್ಕೆ ಸ್ಟೀವ್ ಸ್ಮಿತ್ ಅವರ ಆಗಮನವಾಗಿದೆ. ಹಾಗೆಯೇ ತಂಡದಲ್ಲಿ ಅಜಿಂಕ್ಯ ರಹಾನೆ, ಪೃಥ್ವಿ ಶಾ, ಶಿಮ್ರೊನ್ ಹೆಟ್ಮೈಯರ್, ಶಿಖರ್ ಧವನ್, ಅನ್ರಿಕ್ ನೊಕಿಯ, ಕಾಗಿಸೊ ರಬಾಡ, ಆರ್‌ ಅಶ್ವಿನ್, ಮಾರ್ಕಸ್ ಸ್ಟೋಯ್ನಿಸ್, ರಿಷಭ್ ಪಂತ್ ಅವರಂತ ಪ್ರತಿಭಾನ್ವಿತ ಸಾಕಷ್ಟು ಆಟಗಾರರಿದ್ದಾರೆ. ಹೀಗಾಗಿ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
Published by: zahir
First published: February 23, 2021, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories