ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; ಕೊಹ್ಲಿಗಿಂತ 34 ಅಂಕ ಏರಿಕೆ

ಕೊಹ್ಲಿಗೆ ಮತ್ತೆ ಅಗ್ರಸ್ಥಾನಕ್ಕೇರಲು ಮುಂದಿನ ತಿಂಗಳುವರೆಗೆ ಕಾಯಬೇಕಿದೆ. ಅಕ್ಟೋಬರ್ 1 ರಿಂದ ತವರಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಆಡಲಿದೆ.

Vinay Bhat | news18-kannada
Updated:September 10, 2019, 5:00 PM IST
ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟ ಭದ್ರ ಪಡಿಸಿಕೊಂಡ ಸ್ಮಿತ್; ಕೊಹ್ಲಿಗಿಂತ 34 ಅಂಕ ಏರಿಕೆ
ಸ್ಟೀವ್ ಸ್ಮಿತ್
  • Share this:
ಬೆಂಗಳೂರು (ಸೆ. 10): ಇತ್ತೀಚೆಗಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಒಂದು ಅಂಕದಿಂದ ನಂಬರ್ ಒನ್ ಪಟ್ಟಕ್ಕೇರಿದ್ದ ಸ್ಮಿತ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ.

ಈ ಹಿಂದೆ ಸ್ಟೀವ್ ಸ್ಮಿತ್ 904 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 903 ಅಂಕಹೊಂದಿ 2ನೇ ಸ್ಥಾನಕ್ಕೆ ಕುಸಿದಿದ್ದರು.

ಆದಿತ್ಯವಾರವಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ 4ನೇ ಟೆಸ್ಟ್​ನಲ್ಲಿ ಸ್ಮಿತ್ ಮತ್ತೆ ಅಬ್ಬರಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಅಮೋಘ ದ್ವಿಶತಕ ಸಿಡಿಸಿದರೆ, 2ನೇ ಇನ್ನಿಂಗ್ಸ್​ನಲ್ಲೂ 82 ರನ್ ಬಾರಿಸಿದ್ದರು. ಇದರಿಂದ ಆಸ್ಟ್ರೇಲಿಯಾ ಗೆಲುವು ಕಂಡು 2-1 ಮುನ್ನಡೆ ಸಾಧಿಸಿತಲ್ಲದೆ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದರು.

ಅನುಷ್ಕಾ ಶರ್ಮಾ-ದೀಪಿಕಾ ಇವರಲ್ಲಿ ಯಾರು ಹಾಟ್?; ಯಾರ್ಕರ್ ಪ್ರಶ್ನೆಗೆ ಬುಮ್ರಾ ಉತ್ತರವೇನು ಗೊತ್ತಾ?

ಇದಾದ ಬೆನ್ನಲ್ಲೆ ಐಸಿಸಿ, ಬ್ಯಾಟ್ಸ್​ಮನ್​ಗಳ ನೂತನ ಟೆಸ್ಟ್​ ರ್ಯಾಂಕಿಂಗ್​ ಪಟ್ಟಿ ಬಿಡುಗಡೆಗೊಳಿಸಿದೆ. ಸ್ಮಿತ್ 937 ಅಂಕಹೊಂದಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ. ಆರಂಭದಲ್ಲಿ ವಿರಾಟ್ ಕೊಹ್ಲಿಗಿಂತ 1 ಅಂಕದಲ್ಲಿ ಏರಿಕೆ ಕಂಡಿದ್ದ ಸ್ಮಿತ್ ಈಗ 34 ಪಾಯಿಂಟ್ ಅಧಿಕವಾಗಿದೆ.

Steve Smith consolidates his No.1 Test rank; goes 34 points ahead of Virat Kohli
ಐಸಿಸಿ ಬಿಡುಗಡೆಗೊಳಿಸಿರುವ ಬ್ಯಾಟ್ಸ್​ಮನ್​ಗಳ ನೂತನ ಟೆಸ್ಟ್​ ರ್ಯಾಂಕಿಂಗ್​ ಪಟ್ಟಿ


ಕೊಹ್ಲಿಗೆ ಮತ್ತೆ ಅಗ್ರಸ್ಥಾನಕ್ಕೇರಲು ಮುಂದಿನ ತಿಂಗಳುವರೆಗೆ ಕಾಯಬೇಕಿದೆ. ಅಕ್ಟೋಬರ್ 1 ರಿಂದ ತವರಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಆಡಲಿದೆ.
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ