Steve Smith: 73 ವರ್ಷಗಳ ಹಿಂದಿನ ರೆಕಾರ್ಡ್ ಅಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಮಿತ್

ಟೀಂ ಇಂಡಿಯಾದ ಮಾಜಿ ಆರಂಭಿಕ ಸೆಹ್ವಾಗ್ 134 ಇನ್ನಿಂಗ್ಸ್​ಗಳಲ್ಲಿ 7 ಸಾವಿರ ರನ್​ ಪೂರೈಸಿದರೆ, ಸಚಿನ್​ ತೆಂಡೂಲ್ಕರ್​ 136 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು.

zahir | news18-kannada
Updated:November 30, 2019, 8:50 PM IST
Steve Smith: 73 ವರ್ಷಗಳ ಹಿಂದಿನ ರೆಕಾರ್ಡ್ ಅಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಮಿತ್
ಸ್ಟೀವ್ ಸ್ಮಿತ್
  • Share this:
ಆಸ್ಟ್ರೇಲಿಯಾ ತಂಡದ ರನ್​ಮಷಿನ್ ಸ್ಟೀವ್ ಸ್ಮಿತ್ ಟೆಸ್ಟ್​ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಡಿಲೇಡ್​ನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 23 ರನ್​ಗಳಿಸುವ ಮೂಲಕ ಸ್ಮಿತ್​ ಟೆಸ್ಟ್ ಕ್ರಿಕೆಟ್​ನಲ್ಲಿ ವೇಗವಾಗಿ 7000 ರನ್ ಪೂರೈಸಿದ ನೂತನ ದಾಖಲೆ ನಿರ್ಮಿಸಿದರು.

ತಮ್ಮ 126ನೇ ಇನ್ನಿಂಗ್ಸ್​ ಈ ದಾಖಲೆಯನ್ನು ಬರೆಯುವ ಮೂಲಕ 1946ರಲ್ಲಿ ಇಂಗ್ಲೆಂಡ್​ನ ವ್ಯಾಲಿ ಹ್ಯಾಮಂಡ್​ (131 ಇನ್ನಿಂಗ್ಸ್​) ನಿರ್ಮಿಸಿದ್ದ 73 ವರ್ಷಗಳ ಹಿಂದಿನ  ದಾಖಲೆಯನ್ನು ಅಳಿಸಿಹಾಕಿದರು. ಅಷ್ಟೇ ಅಲ್ಲದೆ ಈ ಹಿಂದೆ ಭಾರತೀಯ ಆಟಗಾರರ ಹೆಸರಿನಲ್ಲಿದ್ದ ದಾಖಲೆಗಳನ್ನು ದಾಟಿ ಈ ದಶಕದ ವೇಗದ ಸರದಾರನಾಗಿ ಮೆರೆದಿದ್ದಾರೆ.

ಟೀಂ ಇಂಡಿಯಾದ ಮಾಜಿ ಆರಂಭಿಕ ಸೆಹ್ವಾಗ್ 134 ಇನ್ನಿಂಗ್ಸ್​ಗಳಲ್ಲಿ 7 ಸಾವಿರ ರನ್​ ಪೂರೈಸಿದರೆ, ಸಚಿನ್​ ತೆಂಡೂಲ್ಕರ್​ 136 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು. ಅದೇ ರೀತಿ ರನ್​ ಮಷಿನ್ ಖ್ಯಾತಿಯ ಕೊಹ್ಲಿ 7 ಸಾವಿರ ರನ್​ ಪೂರೈಸಲು 138 ಇನಿಂಗ್ಸ್ ಆಡಿದ್ದರು.

ಇನ್ನು ವೇಗವಾಗಿ 1000 ರನ್​ ಬಾರಿಸಿದ ದಾಖಲೆ ಇಂಗ್ಲೆಂಡ್​ನ ಪೀಟರ್​ ಸಟ್​ಕ್ಲಿಫ್ ​ಹಾಗೂ ವಿಂಡೀಸ್​ನ ಎವೆರ್​ಟನ್​ ವೀಕ್ಸ್​ ಹೆಸರಿನಲ್ಲಿದೆ. ಹಾಗೆಯೇ 2000, 3000, 4000, 5000 ರನ್​ಗಳ ದಾಖಲೆ ಕ್ರಿಕೆಟ್ ದಿಗ್ಗಜ ಆಸ್ಟ್ರೇಲಿಯಾದ ಡಾನ್​ ಬ್ರಾಡ್ಮನ್​ ಹೆಸರಿನಲ್ಲಿದೆ. ಅದೇ ರೀತಿ 8 ಮತ್ತು 9 ಸಾವಿರ ರನ್​ಗಳ ದಾಖಲೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಹೆಸರಿನಲ್ಲಿದೆ.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ವೇಗದ 7000 ಟೆಸ್ಟ್ ರನ್‌ಗಳ ಸರದಾರರು|
126 ಇನಿಂಗ್ಸ್​ - ಸ್ಟೀವ್ ಸ್ಮಿತ್ (ಆಸ್ಟ್ರೇಲಿಯ)131 ಇನಿಂಗ್ಸ್ - ವಾಲ್ಟರ್ ಹ್ಯಾಮಂಡ್ (ಇಂಗ್ಲೆಂಡ್)
134 ಇನಿಂಗ್ಸ್ - ವೀರೇಂದ್ರ ಸೆಹ್ವಾಗ್ (ಭಾರತ)
136 ಇನಿಂಗ್ಸ್ - ಸಚಿನ್ ತೆಂಡೂಲ್ಕರ್ (ಭಾರತ)
138 ಇನಿಂಗ್ಸ್ - ಗ್ಯಾರಿ ಸೋಬರ್ಸ್ (ವೆಸ್ಟ್ ಇಂಡೀಸ್) / ಕುಮಾರ್ ಸಂಗಕ್ಕಾರ (ಶ್ರೀಲಂಕಾ) / ವಿರಾಟ್ ಕೊಹ್ಲಿ (ಭಾರತ)

First published: November 30, 2019, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading